ದಕ್ಷಿಣ ಕನ್ನಡ :ಕೃಷಿ ವಿಜ್ಞಾನ ಕೇಂದ್ರ, ಮಂಗಳೂರು, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಮಂಗಳೂರು, ವಿಜಯ ಗ್ರಾಮೀಣ ಅಭಿವೃದ್ಧಿ ಸಮಿತಿ, ಹೊಸಂಗಡಿ ಮತ್ತು ಫ್ರೆಂಡ್ಸ್ ಕ್ಲಬ್ ಹೊಸಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ, ಮುಂಚೂಣಿ ಪ್ರಾತ್ಯಕ್ಷಿಕೆ 2024 – 25 ಇದರ ಅಂಗವಾಗಿ ಕೋ ಕೋ ಗಿಡ ಸವರುವಿಕೆ ತರಬೇತಿ ಕಾರ್ಯಕ್ರಮ ಫ್ರೆಂಡ್ಸ್ ಕ್ಲಬ್ ಸಭಾಭವನ, ಹೊಸಂಗಡಿ ಮತ್ತು ಕೋ ಕೋ ಗಿಡದ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಎಡ್ವರ್ಡ್ ವಿಲ್ಸನ್ ರೋಡ್ರಿಗಸ್,ಶಾಂತಿ ಕಾಡು ಇವರ ಕೋಕೋ ತೋಟದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ತರಬೇತಿಯನ್ನು ಕೃಷಿ ವಿಜ್ಞಾನ ಕೇಂದ್ರ, ಮಂಗಳೂರು, ಇದರ ತೋಟಗಾರಿಕಾ ವಿಜ್ಞಾನಿಯಾಗಿರುವ ಡಾ. ರಶ್ಮಿ ಮತ್ತು ಸಸ್ಯ ಸಂರಕ್ಷಣಾ ವಿಜ್ಞಾನಿಯಾಗಿರುವ ಡಾ.ಕೇ ದರನಾಥ ಇವರು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯ ಗ್ರಾಮೀಣಾಭಿವೃದ್ಧಿ ಸಮಿತಿ, ಹೊಸಂಗಡಿ ಇದರ ಅಧ್ಯಕ್ಷರು ಮತ್ತು ಕಾರ್ಯಕ್ರಮದ ಸಂಯೋಜಕರಾದ ಹರಿಪ್ರಸಾದ್. ಪಿ.ಇವರು ವಹಿಸಿದ್ದರು.
ತರಬೇತಿ ಕಾರ್ಯಕ್ರಮದಲ್ಲಿ ಸುಮಾರು 18 ಜನ ರೈತರು ಭಾಗವಹಿಸಿ, ಮೂರು ಜನ ರೈತರನ್ನು ಕೋ ಕೋ ಗಿಡ ಮುಂಚೂಣಿ ಪ್ರಾತ್ಯಕ್ಷಿಕೆ 2024 -25 ಸಾಲಿಗೆ ಆಯ್ಕೆ ಮಾಡಿ, ಕೋ ಕೋ ಸವರುವಿಕೆಗೆ ಬೇಕಾದ ಕೃಷಿ ಪರಿಕರಗಳನ್ನು ನೀಡಲಾಯಿತು.



