ಕರಾವಳಿ ಕರ್ನಾಟಕ ಅತೀ ವಿಶಾಲವಾದ ಮಳಿಗೆ ಉಡುಪಿಯ ಗೀತಾಂಜಲಿ ಸಿಲ್ಕ್ಸ್’ನಲ್ಲಿ ಸ್ವದೇಶಿ ಹಾಗೂ ವಿದೇಶಿಯ ಎಲ್ಲ ಪ್ರಮುಖ ಬ್ರಾಂಡ್‌ಗಳನ್ನೊಳಗೊAಡ ನವೀಕೃತ ಪುರುಷರ ವಿಭಾಗದ ಉದ್ಘಾಟನೆಯು ಅ.9ರಂದು ಬೆಳಗ್ಗೆ 9.45ಕ್ಕೆ ನಡೆಯಲಿದೆ ಎಂದು ಗೀತಾಂಜಲಿ ಸಿಲ್ಕ್ಸ್ ಪಾಲುದಾರ ಸಂತೋಷ್ ವಾಗ್ಳೆ ತಿಳಿಸಿದ್ದಾರೆ.

ಉಡುಪಿಯ ಗೀತಾಂಜಲಿ ಸಿಲ್ಕ್ಸ್ ಮಳಿಗೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದನೇ ಮಹಡಿಯಲ್ಲಿ ಸ್ವದೇಶಿ ಹಾಗೂ ವಿದೇಶಿಯ ಪುರುಷರ ಎಲ್ಲ ಪ್ರಮುಖ ಬ್ರಾಂಡ್ ಗಳು, ಮದುವೆ ಹಾಗೂ ಶುಭ ಸಮಾರಂಭಗಳಿಗೆ ಬೇಕಾದ ಅತ್ಯಾಧುನಿಕ-ಪಾರಂಪರಿಕ ಶೈಲಿಯ ವಸ್ತ್ರಗಳು, ಆಫೀಸ್ವೇರ್, ಕ್ಯಾಶುವಲ್ ವೇರ್, ಗ್ರಾಹಕರ ಅಭಿರುಚಿಗಳಿಗೆ ಅನುಸಾರವಾಗಿ ಸೂಟಿಂಗ್- ಶರ್ಟಿಂಗ್ ಹಾಗೂ ಒಳ ಉಡುಪಗಳನ್ನು ಒಳಗೊಂಡ ಅತೀ ವಿಶಾಲವಾದ ವಿಭಾಗವನ್ನು ಆರಂಭಿಸಲಾಗಿದೆ. ಗೀತಾಂಜಲಿ ಸಿಲ್ಕ್ಸ್ ಮಳಿಗೆಯು ಮೂರು ಮಹಡಿಗಳಲ್ಲಿ ಪುರುಷರ, ಮಹಿಳೆಯರ ಮತ್ತು ಮಕ್ಕಳ ಪ್ರತ್ಯೇಕ ವಿಶಾಲ ವಿಭಾಗಳನ್ನು ಹೊಂದಿದೆ ಎಂದು ಅವರು ಮಾಹಿತಿ ನೀಡಿದ್ರು.



