ಸುಮಾರು 200 ವರ್ಷಗಳ ಇತಿಹಾಸವಿರುವ ಕುಂತೂರು-ಬೇಳ್ಪಾಡಿ ದರ್ಗಾ ಶರೀಫ್ ಎ.ಬಿ ಜುಮ್ಮಾ ಮಸೀದಿಯ ಆಡಳಿತಕ್ಕೆ ಒಳಪಟ್ಟಿದ್ದು ಇಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಅದ್ಧೂರಿ ಉರೂಸ್ ಸಮಾರಂಭ 2025 ನೇ ಫೆಬ್ರವರಿ 18 ರಿಂದ 23 ತನಕ ಕುಂತೂರು-ಬೇಳ್ಪಾಡಿ ದರ್ಗಾ ಶರೀಫನ ವಠಾರದಲ್ಲಿ ನಡೆಯಲಿದೆ ಎಂದು ಉರೂಸ್ ಮಾರಂಭದ ವಕ್ತಾರ ಅಬ್ಬಾಸ್ ಕುಂತೂರು ಹೇಳಿದರು.
ಅವರು ಕಡಬದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಜನವರಿ ಫೆಬ್ರವರಿ ತಿಂಗಳಲ್ಲಿ ಎಲ್ಲಾ ಕಡೆ ಊರೂಸ್‌ಗಳನು ಆಯೋಜಿಸಲಾಗುತ್ತದೆ, ಹಾಗಾದಾಗ ಜಿಲ್ಲೆಯಲ್ಲೇ ದೊಡ್ಡ ಮಟ್ಟದಲ್ಲಿ ನಡೆಯುವ ಬೇಳ್ಪಾಡಿ ಉರೂಸ್‌ಗೆ ಬರುವವರಿಗೆ ತೊಂದರೆಯಾಗುತ್ತದೆ. ನಮ್ಮಲಿಯ ಕಾರ್ಯಕ್ರಮದ ದಿನಾಂಕ ಮೊದಲೇ ಘೋಷಿಸಿದರೆ ಇನ್ನುಳಿದ ಉರೂಸ್ ಸಮಾರಂಭ ನಡೆಸುವವರಿಗೆ ದಿನ ನಿಗದಿ ಮಾಡಲು ಅನುಕೂಲವಾಗುತ್ತದೆ ಎಂದರು.
ಬೇಳ್ಪಾಡಿಯಲ್ಲಿ ಒಟ್ಟು ೬ ದಿನಗಳ ಕಾರ್ಯಕ್ರಮಗಳು ನಡೆಯಲಿದ್ದು ಪ್ರತಿದಿನ ಪ್ರಭಾಷಣಗಳು, ಶಾದುಳಿರಾತೀಬುಗಳು, ಮಜ್ಲಿಸ್‌ನ್ನೂರ್‌ಗಳು, ಕವಾಲಿಗಳು, ದಪ್ಪುಗಳು, ಹಾಗೂ ಧಾರ್ಮಿಕ ಚೌಕಟ್ಟಿನೊಳಗೆ ಇರುವ ಇತರೇ ಕರ‍್ಯಕ್ರಮಗಳು ವಿಭಿನ್ನಶೈಲಿಯಲ್ಲಿ ನಡೆಯಲಿರುವುದು.
ಈ ಸಮಾರಂಭದಲ್ಲಿ ರಾಷ್ಟಿçಯ ಮತ್ತು ಅಂತರಾಷ್ಟಿçಯ ಮಟ್ಟದಲ್ಲಿ ತನ್ನ ವಾಕ್‌ಚಾತುರ್ಯದಲ್ಲಿ ಪ್ರಾವಿಣ್ಯತೆ ಪಡೆದ ಮತಪಂಡಿತರು, ,ಸೊಫಿವರ್ಯರು, ಸಾಧಾತುಗಳು, ಉಲಮಾ ಶಿರೋಮಣಿಗಳು ಭಾಗವಹಿಸಲಿರುವರು. ಕಾರ್ಯಕ್ರಮದ ಕೊನೆಯ ದಿನ ಅದ್ಧೂರಿ ಉರೂಸ್ ಸಮಾರಂಭ ನಡೆಯಲಿದ್ದು ಆಲಂಕಾರಿನಿoದ ಕುಂತೂರು ಬೇಳ್ಪಾಡಿ ತನಕ ಅರಬಿಕ್ ಸ್ಕೂಲ್ ವಿಧ್ಯಾರ್ಥಿಗಳಿಂದ ಆಕರ್ಷಕ ಮೆರವಣಿಗೆ-ದಪ್ಪುಗಳಿಂದ ಕೂಡಿದ ಹಾಡು ಇತ್ಯಾದಿ ಕರ‍್ಯಕ್ರಮ ವಿರುತ್ತದೆ. ಅಲ್ಲದೇ ರಾಜಕೀಯ ಸಾಮಾಜಿಕ ಧಾರ್ಮಿಕ ನೇತಾರರು ಭಾಗವಹಿಸಲಿದ್ದು , ೧೦ ಸಾವಿರಕ್ಕಿಂತಲೂ ಮಿಕ್ಕಿ ಬರುವ ಭಕ್ತಾದಿಗಳಿಗೆ ಅನ್ನದಾನ ನಡೆಯಲಿದೆ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ಅಬ್ಬಾಸ್ ಕೋರಿದರು.
ಸಾವಿರಾರು ಜನರ ರೋಗರುಜಿನಗಳಿಗೆ ಪರಿಹಾರವನ್ನು ಕಂಡುಕೊoಡ ಕುಂತೂರು-ಬೇಳ್ಪಾಡಿ ದರ್ಗಾಶರೀಫ್ ಮಸೀದಿಯಲ್ಲಿ ಸರ್ವಜನಾಂಗದವರು ಹರಕೆಹೊತ್ತು ತನ್ನ ಇಷ್ಟಾರ್ಥವನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಇಲ್ಲಿನ ಬಹುಮುಖ್ಯ ಹರಕೆ ಎಂದರೆ- ಬೆಳ್ತಕ್ಕಿ ಮತ್ತು ಬೆಲ್ಲ, ಸಕ್ಕರೆ. ಹಾಗಾಗಿ ಇಲ್ಲಿ ಬೆಲ್ಲದ ಗಂಜಿಗೆ ಪ್ರಸಿದ್ದವಾಗಿದೆ ಪ್ರತಿದಿನ ಬರುವ ಭಕ್ತಾದಿಗಳಿಗೆ ಬೆಲ್ಲದ ಗಂಜಿ ಇರುತ್ತದೆ ಎಂದು ಅಬ್ಬಾಸ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬೆಳ್ಪಾಡಿ ಮಸೀದಿಯ ಅಧ್ಯಕ್ಷ ಹಸೈನಾರ್ ಹಾಜಿ ಜಾಲ್ಕರೆ, ಉಪಾಧ್ಯಕ್ಷ ಅಯೂಬ್ ಯು.ಕೆ. ಪೂಂಜ, ಕಾರ್ಯದರ್ಶಿ ಯಾಕೂಬ್ ಕೋಚಕಟ್ಟೆ, ಕೋಶಾಧಿಕಾರಿ ಅಬ್ದುಲ್ಲಾ ಮುಡುಪಿನಡ್ಕ ಉಪಸ್ಥಿತರಿದ್ದರು.
ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲನೋರ್ವ ಕಾಣೆಯಾದ ಘಟನೆ ನಡೆದಿದ್ದು, ನೇತ್ರಾವತಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.…
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಬೊಳ್ಳಾರಿ ನಿವಾಸಿ ಚೆನ್ನಕೇಶವ ಕಾಣೆಯಾದವರಾಗಿದ್ದು, ದೂರುದಾರರ ಪ್ರಕಾರ,…
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಮ್ಮ ಕಚೇರಿಯಲ್ಲಿ ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಯ 2ನೇ…
ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯತಿಗೆ ಎಮ್.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ…
ಐವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಮೇಲ್ಸೇತುವೆಯ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ…
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…