ಉಡುಪಿ: ಕೌನ್ ಬನೇಗಾ ಕರೋಡ್‌ಪತಿ (ಕೆಬಿಸಿ) ಯಲ್ಲಿ ಕರಾವಳಿ ಮೂಲದ ಕಾರ್ಕಳ ತಾಲೂಕಿನ ನಿಂಜೂರು ಮೂಡುಮನೆಯ ಡಾ. ಶ್ರೀಶ್ ಸತೀಶ್ ಶೆಟ್ಟಿ ಅವರು 12.5 ಲಕ್ಷ ರೂ. ಗೆದ್ದುಕೊಂಡಿದ್ದಾರೆ.
ಅ. 10 ಮತ್ತು 11 ರಂದು ಸೋನಿ ಟಿವಿಯಲ್ಲಿ ಅವರ ಸಂಚಿಕೆ ಪ್ರಸಾರಗೊಂಡಿದೆ. ಶ್ರೀಶ್ ಸತೀಶ್ ಶೆಟ್ಟಿಯವರು 12 ಪ್ರಶ್ನೆಗೆ ಸರಿಯಾದ ಉತ್ತರ ಕೊಟ್ಟಿದ್ದರು. 13ನೇ ಪ್ರಶ್ನೆಯಾಗಿ 1971ರ ಮುಂಬೈ ಉತ್ತರಪೂರ್ವ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಭ್ಯರ್ಥಿಯ ಹೆಸರು ಕೇಳಲಾಗಿತ್ತು. ಜನರಲ್ ಕೆ.ಎಂ. ಕಾರ್ಯಪ್ಪ, ವಿಜಯ ತೆಂಡೂಲ್ಕರ್, ಪಂ. ಭೀಮಸೇನ್ ಜೋಷಿ ಹಾಗೂ ರಾಜ್ ಕಪೂರ್ ಆಯ್ಕೆ ನೀಡಲಾಗಿತ್ತು. ಆ ಉತ್ತರದ ಬಗ್ಗೆ ಸ್ಪಷ್ಟತೆ ಇರದೇ ಇದ್ದುದರಿಂದ ಸ್ಪರ್ಧೆಯಿಂದ ಹಿಂದೆ ಸರಿದು 12.5 ಲ.ರೂ. ಗೆದ್ದುಕೊಂಡಿದ್ದಾರೆ.
ಡಾ. ಶ್ರೀಶ್ ಸತೀಶ್ ಶೆಟ್ಟಿ ಅವರು ಪಳ್ಳಿ-ನಿಂಜೂರು ಮೂಡುಮನೆ ಶ್ರಿವಲ್ಲಿ ಶೆಟ್ಟಿ ಮತ್ತು ಸುರತ್ಕಲ್ ದೇವಿ ನಿಲಯ ಸತೀಶ್ ಶೆಟ್ಟಿಯವರ ಪುತ್ರನಾಗಿದ್ದು, ಪ್ರಸ್ತುತ ಗುಜರಾತ್‌ನ ಅಹಮದಾಬಾದ್ ನಲ್ಲಿ ನೆಲೆಸಿದ್ದಾರೆ.
ಮಾಧ್ಯಮ ಲೋಕದಲ್ಲಿ ಅಚ್ಚಳಿಯದ ಸಾಧನೆಯನ್ನು ಮಾಡಿ 2025 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಮಾಧ್ಯಮ ಆಡಳಿತ…
ಮಾಧ್ಯಮ ಲೋಕದಲ್ಲಿ ಸುದೀರ್ಘ ದುಡಿಮೆ ಮತ್ತು ತನ್ನ ಕಲಾತ್ಮಕ ಕ್ಯಾಮರಾ ಕೌಶಲ್ಯದಿಂದ ಜನಮನ ಸೆಳೆದಿದ್ದ ನಾಗರಾಜ್ ಇಂದು ನಿಧನರಾಗಿದ್ದಾರೆ. ಆರ್ಥಿಕ…
ಆಂಬ್ಯುಲೆನ್ಸ್ ವಾಹನವೊಂದಕ್ಕೆ ಸೈಡ್ ಬಿಡದೆ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಸ್ಕೂಟರ್ ಸವಾರನೋರ್ವನನ್ನು ಪೋಲೀಸರು ಬಂಧಿಸಿದ್ದಾರೆ. ಪುತ್ತೂರು ಬೆಟ್ಟಂಪಾಡಿ ನಿವಾಸಿ…
ಅನಿವಾಸಿ ಭಾರತೀಯ ಉದ್ಯಮಿ, ಸಮಾಜ ಸೇವಕ ಝಕರಿಯಾ ಜೋಕಟ್ಟೆ ಅವರಿಗೆ ಹೊರನಾಡ ಕನ್ನಡಿಗ ವಿಭಾಗದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ…
ಪಾಣೆಮಂಗಳೂರು ಹಳೆ ಸೇತುವೆ ಬಳಿ ನಾಪತ್ತೆಯಾದ ಆಟೋ ಚಾಲಕನ ಶವ ಪತ್ತೆಯಾಗಿದೆ. ಪಾಣೆಮಂಗಳೂರು ಹಳೆ ಸೇತುವೆಯ ಬಳಿ ಇಲೆಕ್ಟಿಕ್ ಆಟೋ…
ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹಲವಾರು ಮಂದಿಯಿಂದ ಕೋಟ್ಯಾಂತರ ಹಣ ಪಡೆದು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ದಂಪತಿಯನ್ನು ಕಾವೂರು…