ಜನ ಮನದ ನಾಡಿ ಮಿಡಿತ

Advertisement

ತೋಕೂರು ಜೇನು ಹುಳು ಸಾಕಾಣಿಕೆ ಮತ್ತು ಜಲ ಸಂರಕ್ಷಣೆ ಮಾಹಿತಿ ಶಿಬಿರ

ಮುಲ್ಕಿ: ಜಲ ಸಂರಕ್ಷಣೆ ಮಾಡದಿದ್ದರೇ ಮುಂದಿನ ದಿನಗಳಲ್ಲಿ ಪರಿತಪಿಸಬೇಕಾಗುತ್ತದೆ. ಈಗಾಗಲೇ ಭೂಮಿಯ ಅಡಿಯ ಭಾಗದಲ್ಲಿ ನೀರಿನ ಮಟ್ಟ ಕುಸಿದಿದೆ. ಮಳೆಯ ನೀರನ್ನು ಶೇಖರಿಸಿ ಇಂಗಿಸಿ ಮರು ಬಳಕೆ ಮಾಡಬೇಕೆಂದು ಮಂಗಳೂರಿನ ಇಂಜಿನಿಯರ್ ಹಾಗೂ ಜಲ ಸಂರಕ್ಷಣೆಯ ತಜ್ಞ ಅಶೋಕ್ ಕುಮಾರ್ ಹೇಳಿದರು.

 

ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್‌ ಕ್ಲಬ್‌ ನ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಬಜಪೆ, ೧೦ನೇ ತೋಕೂರು ಮತ್ತು ಬೆಳ್ಳಾಯರು ಒಕ್ಕೂಟ, ಪಡುಪಣಂಬೂರು,ಪಡುಪಣಂಬೂರಿನ ಮುಲ್ಕಿ ಅರಮನೆ ವೆಲ್ಪೇರ್ ಚಾರಿಟೇಬಲ್ ಟ್ರಸ್ಟ್ (ರಿ), ರಾಜ್ಯ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ತೋಕೂರಿನ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋಟ್ಸ್ ಕ್ಲಬ್ (ರಿ) ತೋಕೂರು, ತೋಟಗಾರಿಕೆ ಇಲಾಖೆ ಜಿಲ್ಲಾ ಪಂಚಾಯತ್ ಮಂಗಳೂರು ನ ಸಂಯುಕ್ತ ಆಶ್ರಯದಲ್ಲಿ ಜರಗಿದ ಜಲ ಸಂರಕ್ಷಣೆ ಮತ್ತು ಜೇನುಹುಳ ಸಾಕಾಣಿಕೆ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮನೆಯ ಚಾವಡಿಯ ನೀರನ್ನು ಬಾವಿಗಳಲ್ಲಿ ಸೋಸಿ ಇಂಗಿಸಿಬೇಕಾಗಿದೆ ಇದರಿಂದ ನೀರಿನ ಮಟ್ಟ ಎರಿಕೆಯಾಗುತ್ತದೆ. ಚಕ್ ಡ್ಯಾಮ್ ಇಂಗು ಗುಂಡಿಯ ಮೂಲಕವು ನೀರನ್ನು ಭೂಮಿಗೆ ಇಂಗಿಸಬೇಕೆಂದು ಹೇಳಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅದಿಕಾರಿ ಐತಪ್ಪ ಪೂಜಾರಿ ಮಾತನಾಡಿ ಪ್ರತಿ ಮನೆಯಲ್ಲೂ ಜೇನು ಸಾಕಾಣಿಕೆ ಮಾಡುವ ಅವಕಾಶ ವಿದ್ದು ಅದರಿಂದ ಲಾಭ ಗಳಿಸಬಹುದು ಜೇನು ಸಾಕಾಣಿಕೆ ತೋಟಗಾರಿಕೆ ಮತ್ತು ಕೃಷಿಗೆ ಪೂರಕವಾಗಿದೆ. ತರಕಾರಿ ಬೆಳೆ ಬೆಳಯುವಾಗ ಜೇನು ಹುಳಗಳು ಇದ್ದರೆ ಪರಾಗಸ್ಪರ್ಷದ ಮೂಲಕ ಕಾಯಿ ಕಟ್ಟುವಿಕೆ ಅದಿಕ ಇಳುವರಿ ಪಡೆಯಲು ಸಾಧ್ಯವೆಂದು ಹೇಳಿದರು. ಜಿಲ್ಲಾ ಪಂಚಾಯತ್ ತೋಟಗಾರಿಕೆ ಇಲಾಖೆಯ ತೋಟಗಾರಿಕಾ ಅದಿಕಾರಿ ಯುಗೇಂದ್ರ ತೋಟಗಾರಿಕೆ ಇಲಾಖೆಯ ಮೂಲಕ ಸಿಗುವ ಮಾಹಿತಿ ನೀಡಿದರು.
ಸೋಟ್ಸ್ ಕ್ಲಬ್ ಅಧ್ಯಕ್ಷ ದೀಪಕ್ ಸುವರ್ಣ ಅಧ್ಯಕ್ಷತೆ ವಹಿಸಿದ್ದು .ಧರ್ಮಸ್ತಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ಳಾಯರು ಒಕ್ಕೂಟದ ಅಧ್ಯಕ್ಷೆ ಚಂಪಾ, ತೋಕೂರು ಒಕ್ಕೂಟದ ಅಧ್ಯಕ್ಷ ಮನೋಹರ ಜಿ. ಕುಂದರ್ , ಕ್ಲಬ್ಬಿನ ಗೌರವಾಧ್ಯಕ್ಷ ಪ್ರಶಾಂತ್ ಕುಮಾರ್ ಬೇಕಲ್, ಮಹಿಳಾ ಕಾರ್ಯಾದ್ಯಕ್ಷೆ ಯಶೋದಾ ದೇವಾಡಿಗ , ಮೇಲ್ವಿಚಾರಕಿ ನಿಶ್ಮಿತಾ ಶೆಟ್ಟಿ , ಮತ್ತಿತರರು ಉಪಸ್ಥಿತರಿದ್ದರು. ಸೇವಾ ಪ್ರತಿನಿದಿ ಸವಿತಾ ಶರತ್ ಸ್ವಾಗತಿಸಿದರು. ಚಂದ್ರ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

error: Content is protected !!