ಉಡುಪಿ: ಉಡುಪಿ ಶ್ರೀಕೃಷ್ಣಮಠ ರ‍್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ರ‍್ನಾಟಕ ಜಾನಪದ ಪರಿಷತ್ತು ಉಡುಪಿ, ತಲ್ಲರ‍್ಸ್ ಫ್ಯಾಮಿಲಿ ಟ್ರಸ್ಟ್ ಹಾಗೂ ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಇದರ ಸಹಯೋಗದಲ್ಲಿ “ಜಾನಪದ ಹಬ್ಬ-2024” ಕರ‍್ಯಕ್ರಮವನ್ನು ಇದೇ ಅ.27ರಂದು ಕೃಷ್ಣಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ರ‍್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದರು.

ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9.30ಕ್ಕೆ ರ‍್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತರ‍್ಥ ಶ್ರೀಪಾದರು ಜಾನಪದ ಹಬ್ಬವನ್ನು ಉದ್ಘಾಟಿಸಲಿದ್ದಾರೆ. ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಗೂ ಕರ‍್ಯ ನರ‍್ವಾಹಕ ನರ‍್ದೇಶಕರಾದ ಕಿಶೋರ್ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 3.45ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಅಂಬಲಪಾಡಿ ಜನರ‍್ದನ ಮಹಾಕಾಳಿ ದೇವಸ್ಥಾನದ ರ‍್ಮರ‍್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂರ‍್ಭದಲ್ಲಿ ಯೋಗ ಟೀಚರ್ ಶೋಭಾ ಶೆಟ್ಟಿ ಅವರಿಗೆ ಜಾನಪದ ಸಾಂಸ್ಕೃತಿಕ ಯೋಗ ಸಾಧಕ ಪ್ರಶಸ್ತಿ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದರು.
ಕರ‍್ಯರ‍್ಶಿ ರವಿರಾಜ್ ನಾಯಕ್ ಮಾತನಾಡಿ, ಬೆಳಿಗ್ಗೆ 10ಗಂಟೆಗೆ ಕುಣಿತ ಭಜನೆ, ಬೆಳಿಗ್ಗೆ 11.30ಕ್ಕೆ ಹೋಳಿ ಕುಣಿತ, ಬೆಳಿಗ್ಗೆ 11.50ಕ್ಕೆ ಗೋಂದೋಳು ಕುಣಿತ, ಮಧ್ಯಾಹ್ನ 12.20ಕ್ಕೆ ಜಾನಪದ ವಾದ್ಯಗೋಷ್ಠಿ ಹಾಗೂ ಮಧ್ಯಾಹ್ನ 2 ಗಂಟೆಗೆ ಕಲಾಮಯ ಉಡುಪಿ ತಂಡದವರಿಂದ ವೈವಿಧ್ಯಮಯ ಜಾನಪದ ನೃತ್ಯ ಹಾಗೂ ಸಂಗೀತ ಪ್ರರ‍್ಶನ ನಡೆಯಲಿದ್ದು, ಕೇರಳ ವಯನಾಡಿನ ಅಪರೂಪದ ಜಾನಪದ ಕಲೆ “ಗೋತ್ರಂ ನೃತ್ಯ” ವಿಶೇಷ ಆರ‍್ಷಣೆಯಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ‍್ಯಾಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ, ಸಂಘಟನಾ ಕರ‍್ಯರ‍್ಶಿ ಗೋಪಾಲ್ ಸಿ. ಬಂಗೇರ, ಕೋಶಾಧಿಕಾರಿ ಪ್ರಶಾಂತ್ ಭಂಡಾರಿ ಹಾಗೂ ಉಡುಪಿ ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ ಇದ್ದರು.



