ಉಡುಪಿ: ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ಮಣಿಪಾಲ ಪೆರಂಪಳ್ಳಿಯ ಸಾಯಿರಾಧಾ ಟೌನ್‌ಶಿಪ್ ಬಳಿ ನಡೆದಿದೆ.
ಉಡುಪಿ ಕೇಳಾರ್ಕಳಬೆಟ್ಟು ನಿವಾಸಿ ಅಬ್ದುಲ್ ಜಬ್ಬಾರ್ (27) ಬಂಧಿತ ಆರೋಪಿ. ಈತನಿಂದ 1,87,500 ಮೌಲ್ಯದ 2 ಕೆಜಿ 344 ಗ್ರಾಂ ತೂಕದ ಗಾಂಜಾ, ಒಂದು ಲಕ್ಷ ಮೌಲ್ಯದ APRILIA ಕಂಪೆನಿಯ ಸ್ಕೂಟರ್, 5.810 ನಗದು, 10 ಸಾವಿರ ಮೌಲ್ಯದ ಮೊಬೈಲ್, ಒಂದು ಚೂರಿ ಸಹಿತ ಒಟ್ಟು 3,04,610 ಲಕ್ಷ ಮೌಲ್ಯದ ಸೊತ್ತುಗಳನ್ನು ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ರವರ ನೇತೃತ್ವದಲ್ಲಿ ಉಪ ನಿರೀಕ್ಷಕರಾದ ಪವನ್ ನಾಯಕ್, ಸಿಬ್ಬಂದಿಯವರಾದ ಪ್ರವೀಣ್ ಕುಮಾರ್, ಪ್ರವೀಣ್, ವೆಂಕಟೇಶ್, ರಾಜೇಶ್, ಯತೀನ್ ಕುಮಾರ್, ಪ್ರಶಾಂತ್ ಮತ್ತು ಚರಣ್‌ರಾಜ್ ರವರನ್ನೊಳಗೊಂಡ ತಂಡ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಹೊಸದಿಲ್ಲಿ: ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..! ಪ್ರಖ್ಯಾತ ಭಾಗವತ, ಸಂಘಟಕ ಪಟ್ಲ ಸತೀಶ್ ಶೆಟ್ಟಿ…
ಮಣಿಪಾಲ: ಸರಳೆಬೆಟ್ಟು ನಗರಸಭಾ ಸದಸ್ಯೆಯ ಸಹೋದರ ಆತ್ಮಹತ್ಯೆ ವೈಯಕ್ತಿಕ ಕಾರಣದಿಂದ ಮನನೊಂದ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ…
ಮಲೆಯಾಳ ಕಡ್ಡಾಯ ಮಸೂದೆ ವಿರೋಧಿ ಸಮಿತಿ ವತಿಯಿಂದ ಕೇರಳದ ವಿರೋಧ ಪಕ್ಷದ ನಾಯಕ ಸನ್ಮಾನ್ಯ ವಿ ಡಿ ಸತೀಶನ್ ಅವರನ್ನು…
ಉಡುಪಿ : ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರು ಅಲ್ಪಕಾಲದ ಅಸೌಖ್ಯದಿಂದ…
ಮೂಲತಃ ಪುತ್ತೂರು ಬೆಂದ್ರುತೀರ್ಥ ನಿವಾಸಿ, ಪ್ರಸಕ್ತ ರಾಯಿ ಸಮೀಪದ ಮಾಬೆಟ್ಟು ಎಂಬಲ್ಲಿ ವಾಸವಾಗಿದ್ದ ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್…
ದೆಹಲಿ ಕರ್ನಾಟಕ ಸಂಘದಿಂದ ಖ್ಯಾತ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ…