ಜಾನಪದ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಸೇರಾ ನಿವಾಸಿ ಲೋಕಯ್ಯ ಸೇರಾ ಅವರಿಗೆ ಈ ಬಾರಿ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಸುಮಾರು ವರ್ಷಗಳಿಂದ ದ.ಕ.ಜಿಲ್ಲೆಯಲ್ಲಿ ಭೂತಾರಾಧನೆಯ ಸೇವೆ ಮಾಡುತ್ತಿರುವ ಇವರ, ಸಾಧನೆಯನ್ನು ಗುರುತಿಸಿ ಈ ಬಾರಿ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಿದೆ.



