ಬೆಳ್ತಂಗಡಿ : ಇಲ್ಲಿನ ಧರ್ಮಸ್ಥಳ ಗ್ರಾಮದ ಕನ್ಯಾಡಿ ಬಳಿ ಅಕ್ರಮ ಜಾನುವಾರು ಸಾಗಾಟ ಪತ್ತೆಯಾಗಿದೆ. ಮೂರು ಪಿಕಪ್ ಗಳಲ್ಲಿ ಎಂಟು ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಲಾಗಿದ್ದು, ಬಂಧಿತರನ್ನು ಪುಷ್ಪರಾಜ್, ಪ್ರಮೋದ್ ಸಾಲ್ಯಾನ್, ಸಂದೀಪ್, ಚೆನ್ನಕೇಶವ ಎಂದು ಗುರುತಿಸಲಾಗಿದೆ.
ಬೆಳ್ತಂಗಡಿಯ ಕನ್ಯಾಡಿ ಬಳಿ ಅಕ್ರಮ ಜಾನುವಾರು ಸಾಗಾಟ ಪತ್ತೆಯಾಗಿದೆ. ಮೂರು ಪಿಕಪ್ ವಾಹನಗಳಲ್ಲಿ 8 ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿಯ ನಾವೂರು ಒಳಗದ್ದೆಯ ಪುಷ್ಪರಾಜ್, ಮೋರ್ತಾಜೆ ಮನೆಯ ಪ್ರಮೋದ್ ಸಾಲ್ಯಾನ್, ಹೊಳೆನರಸೀಪುರದ ಸಂದೀಪ್, ಹಾಸನದ ಚೆನ್ನಕೇಶವ ಎಂಬವರನ್ನು ಬಂಧಿಸಲಾಗಿದೆ. ಧರ್ಮಸ್ಥಳ ಎಸ್ಐ ಅನಿಲ್ ಕುಮಾರ್ ತಂಡ ಖಚಿತ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆ ನಡೆಸಿತ್ತು. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




