ಕರ್ನಾಟಕ ಸಂಭ್ರಮ 50ರ ಅಭಿಯಾನದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ನೀಡುವ “ಸುವರ್ಣ ಮಹೋತ್ಸವ ಪ್ರಶಸ್ತಿ”ಯನ್ನು ಮರಳುಗಾಡಿನಲ್ಲಿ ನೀರಿನಾಶ್ರಯದಂತೆ ಅನೇಕರ ಬದುಕುಗಳಲ್ಲಿ ಭರವಸೆ ಮತ್ತು ಜೀವಂತಿಕೆ ತುಂಬಿದ ಮಹಾದಾನಿ, ಉದ್ಯಮಿ, ದೈವ ದೇವಸ್ಥಾನಗಳ ಅಭಿವೃದ್ಧಿಯ ಹರಿಕಾರ, ಉದ್ಯಮಿ ಅಭಿಮತ ಟಿವಿಯ ಮುಖ್ಯ ಪ್ರವರ್ತಕರಾದ ಕನ್ಯಾನ ಸದಾಶಿವ ಶೆಟ್ಟಿಯವರು ಮುಡಿಗೇರಿಸಿಕೊಂಡಿದ್ದಾರೆ.



