ಬಂಟ್ವಾಳ: ಬಂಟ್ವಾಳದಲ್ಲಿಯೂ ಮೋನಪ್ಪ ಗೌಡ ಎಂಬ ಕೃಷಿಕರ ಆಸ್ತಿಯನ್ನು ವಕ್ ಎನ್ನಲಾಗುತ್ತಿದ್ದು, ಅದಕ್ಕೆ ನ್ಯಾಯಾಲಯಕ್ಕೂ ಹೋದರ ಏನೂ ಆಗದ ಸ್ಥಿತಿ ಇದೆ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭ ಸಂವಿಧಾನಕ್ಕೆ ತೊಂದರೆಯಾಗುತ್ತಿದೆ ಎನ್ನುತ್ತಿದ್ದವರು ಈಗ ಎಲ್ಲಿದ್ದಾರೆ ಎಂದು ಪ್ರಶ್ನೆ ಮಾಡಬೇಕಾದ ಸ್ಥಿತಿ ಇದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾÊಕ್ ಉಳಿಪ್ಪಾಡಿಗುತ್ತು ಹೇಳಿದರು.
ಅವರು ರಾಜ್ಯ ಸರಕಾರವು ಲ್ಯಾಂಡ್ ಜಿಹಾದ್-ವಕ್ ಅಕ್ರಮದ ಮೂಲಕ ರೈತ ವಿರೋಽ ನೀತಿಯನ್ನು ತಳೆದಿದೆ ಎಂದು ಆರೋಪಿಸಿ ಬಿ.ಸಿ.ರೋಡಿನಲ್ಲಿ ಬಂಟ್ವಾಳ ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರ ಜಮೀರ್ ಖಾನ್ ಎನ್ನುವ ಸಚಿವರನ್ನು ಹಿಡಿದುಕೊಂಡು ಹಿಂದೂಗಳು, ರೈತರ ಭೂಮಿಯನ್ನು ವಕ್ ಆಸ್ತಿಯಾಗಿ ಪರಿವರ್ತಿಸುವ ಕಾರ್ಯ ಮಾಡುತ್ತಿದ್ದು, ಕಾಂಗ್ರೆಸ್‌ನ ಇಂತಹ ನೀತಿಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ಕೇಂದ್ರದ ಮೋದಿ ಸರಕಾರ ಕಾನೂನಿಗೆ ತಿದ್ದುಪಡಿ ತರುವ ಕಾರ್ಯ ಮಾಡಲಿದೆ.
ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಹಾಗೂ ರಾಜ್ಯ ಮುಖಂಡ ವಿಕಾಸ್ ಪುತ್ತೂರು ಮಾತನಾಡಿ, ರಾಜ್ಯ ಸರಕಾರವು ಕಳೆದ ಒಂದೂವರೆ ವರ್ಷಗಳಲ್ಲಿ ಒಮ್ಮೆಯೂ ಹಿಂದೂಗಳ ಪರ ಕೆಲಸ ಮಾಡಿಲ್ಲ. ಬದಲಾಗಿ ಭಯೋತ್ಪಾದಕರಿಗೆ ಕ್ಲೀನ್ ಚಿಟ್ ಕೊಡುವ ಕಾರ್ಯ ಮಾಡಿದ್ದಾರೆ. ವಕ್ ಅಕ್ರಮದ ರೂವಾರಿ ಜಮೀರ್ ಅವರು ದ.ಕ.ಜಿಲ್ಲೆಗೆ ಬಂದರೆ ಬೂಟ್ ರುಚಿ ತೋರಿಸಬೇಕಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ ಬಜ , ಶಿವಪ್ರಸಾದ್ ಶೆಟ್ಟಿ ,ಬಿಜೆಪಿ ಪ್ರಮುಖರಾದ ದೇವಪ್ಪ ಪೂಜಾರಿ, ದಿನೇಶ್ ಅಮ್ಟೂರು, ಸಂದೇಶ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಪುರುಷೋತ್ತಮ ಸಾಲ್ಯಾನ್, ಜನಾರ್ದನ ಸಾಲ್ಯಾನ್, ಮೋನಪ್ಪ ದೇವಸ್ಯ, ಯಶೋಧರ ಕರ್ಬೆಟ್ಟು, ಪ್ರೇಮನಾಥ ಶೆಟ್ಟಿ ಅಂತರ, ವೆಂಕಟೇಶ್ ನಾವಡ, ಡೊಂಬಯ ಅರಳ, ಆನಂದ ಎ.ಶಂಭೂರು, ಮೋಹನ್ ಪಿ.ಎಸ್, ರಾಮದಾಸ್ ಬಂಟ್ವಾಳ್, ದೇವದಾಸ್ ಶೆಟ್ಟಿ, ನಂದರಾಮ ರೈ ಬೆಳ್ಳೂರು, ಗಣೇಶ್ ರೈ ಮಾಣಿ, ಸುರೇಶ್ ಕೋಟ್ಯಾನ್, ದಿನೇಶ್ ಭಂಡಾರಿ, ಹರಿಪ್ರಸಾದ್, ಪುಷ್ಪರಾಜ್ ಚೌಟ, ಗೋವಿಂದ ಪ್ರಭು, ಸನತ್ ಕುಮಾರ್ ರೈ, ವಿದ್ಯಾವತಿ ಪ್ರಮೋದ್, ಹರ್ಷಿಣಿ ಪುಷ್ಪಾನಂದ, ದಿನೇಶ್ ಶೆಟ್ಟಿ ದಂಬೆದಾರ್, ಮೀನಾಕ್ಷಿ ಗೌಡ, ಸಂತೋಷ್ ರಾಯಿಬೆಟ್ಟು, ಅಜಿತ್ ಶೆಟ್ಟಿ ಮೊದಲಾದವರಿದ್ದರು.
ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲನೋರ್ವ ಕಾಣೆಯಾದ ಘಟನೆ ನಡೆದಿದ್ದು, ನೇತ್ರಾವತಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.…
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಬೊಳ್ಳಾರಿ ನಿವಾಸಿ ಚೆನ್ನಕೇಶವ ಕಾಣೆಯಾದವರಾಗಿದ್ದು, ದೂರುದಾರರ ಪ್ರಕಾರ,…
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಮ್ಮ ಕಚೇರಿಯಲ್ಲಿ ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಯ 2ನೇ…
ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯತಿಗೆ ಎಮ್.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ…
ಐವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಮೇಲ್ಸೇತುವೆಯ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ…
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…