ಜನ ಮನದ ನಾಡಿ ಮಿಡಿತ

Advertisement

ಟೂರಿಸ್ಟ್ ವ್ಯಾನ್ ಚಾಲಕ ಮಾಲಕರಿಗೆ ಆಗುವ ತೊಂದರೆಯನ್ನು ತಪ್ಪಿಸುವಂತೆ ಬಂಟ್ವಾಳ ಆರ್‌ಟಿಒ ಗೆ ಮನವಿ

ರೂಟ್ ಪರ್ಮಿಟ್ ಬಸ್ಸುಗಳು ಮತ್ತು ಶಾಲಾ ಬಸ್ಸುಗಳು ಅನಧಿಕೃತವಾಗಿ ಬಾಡಿಗೆ ಮಾಡುತ್ತಿರುದನ್ನು ನಿಲ್ಲಿಸಿ ಟೂರಿಸ್ಟ್ ವ್ಯಾನ್ ಚಾಲಕ ಮಾಲಕರಿಗೆ ಆಗುವ ತೊಂದರೆಯನ್ನು ತಪ್ಪಿಸುವಂತೆ ಬಂಟ್ವಾಳದ ಟೂರಿಸ್ಟ್ ವ್ಯಾನ್ ಚಾಲಕ- ಮಾಲಕರ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಸದಾನಂದ ಹಳೆಗೇಟು ಅವರ ನೇತ್ರತ್ವದಲ್ಲಿ ಬಂಟ್ವಾಳ ಆರ್‌ಟಿಒ ಗೆ ಮನವಿ ನೀಡಲಾಯಿತು.

ಬಂಟ್ವಾಳ ತಾಲೂಕಿನಲ್ಲಿ ಸುಮಾರು 80ಕ್ಕೂ ಹೆಚ್ಚು ಮಿನಿ ಬಸ್, ಮ್ಯಾಕ್ಸಿಕ್ಯಾಬ್, ಟೆಂಪೋ ಟ್ರಾವೆಲ್ಸ್, ವಾಹನಗಳು ಇದ್ದು ಮಿನಿ ಬಸ್ ಒಂದಕ್ಕೆ 60.000 ದಿಂದ ಟೆಂಪೋ ಟ್ರಾವೆಲರ್ ಗೆ 23000 ವರೆಗೆ ವಾರ್ಷಿಕ ತೆರಿಗೆಯನ್ನು ಟೂರಿಸ್ಟ್ ಪರ್ಮಿಟ್ ಆಧಾರದಲ್ಲಿ ಸರಕಾರಕ್ಕೆ ಪಾವತಿ ಮಾಡುತ್ತಿದ್ದೇವೆ. ನಮ್ಮ ಈ ಟೂರಿಸ್ಟ್ ವಾಹನಗಳಿಗೆ ವಾರದಲ್ಲಿ ಒಂದು ಎರಡು ಬಾಡಿಗೆ ಆಗುತ್ತಿದ್ದು ತುಂಬಾ ಕಷ್ಟಕರ ಜೀವನವನ್ನು ಸಾಗಿಸುತ್ತೇವೆ.ಇತ್ತೀಚಿನ ದಿನಗಳಲ್ಲಿ ರೂಟ್ ಪರ್ಮಿಟ್ ಬಸ್ಸುಗಳು ಬಿಸಿ ರೋಡ್ ತೊಕ್ಕೊಟ್ಟು ಮಂಗಳೂರು, ಬಿಸಿ ರೋಡು ಕೈಕಂಬ ಕಟೀಲ್, ಬಿಸಿ ರೋಡು ಪಂಜಿಕಲ್ ವಾಮದಪದವು, ಬಿಸಿ ರೋಡು ಮೂಡಬಿದ್ರೆ, ಕುಕ್ಕಾಜೆ, ಮಂಚಿ, ಸಾಲೆತ್ತೂರ್ ಬಾಕ್ರಬೈಲ್ ಹಾಗೂ ಮಂಗಳೂರಿನ ಸಿಟಿ ಬಸ್ಸುಗಳು, ಮದುವೆ ಕಾರ್ಯಕ್ರಮದ ಬಾಡಿಗೆ ಬಂಟ್ವಾಳದ ಪರಿಸರದಲ್ಲಿ ಮಾಡುತ್ತಿರುವುದು ಕಂಡು ಬರುತ್ತಿದೆ. ಇದರಿಂದಾಗಿ ನಮ್ಮ ಟೂರಿಸ್ಟ್ ವಾಹನಗಳಿಗೆ ಬಾಡಿಗೆ ಇಲ್ಲದಂತಾಗಿದೆ. ಈ ರೂಟ್ ಬಸ್ಸುಗಳಿಗೆ ಸರಕಾರದಿಂದ ರಿಯಾಯಿತಿ ತೆರಿಗೆ ಇರುವುದರಿಂದ ಕಡಿಮೆ ಬಾಡಿಗೆಗೆ ಬರುತ್ತಿದೆ. ನಾವು ಟೂರಿಸ್ಟ್ ತೆರಿಗೆ ಕಟ್ಟಿಯು ನಮಗೆ ಬಾಡಿಗೆ ಇಲ್ಲದಂತೆ ಆಗಿದೆ

ಆದ್ದರಿಂದ ತಾವುಗಳು ನಮ್ಮ ಮನವಿಗೆ ಸ್ಪಂದಿಸಿ ಇಂತಹ ಬಸ್ಸುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಈ ಮೂಲಕ ಮನವಿಯನ್ನು ಮಾಡುತ್ತಿದ್ದೇವೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಕಾರ್ಯದರ್ಶಿ ಸುನಿಕ್ ,ಕೋಶಾಧಿಕಾರಿ ನಮೇಶ್ ಶೆಟ್ಟಿ, ಸದಸ್ಯರುಗಳಾದ ಚಂದ್ರಹಾಸ, ಸುಧಾಕರ ತುಂಬೆ, ಅಬ್ದುಲ್ಲಾ ಅಜಿಲಮೊಗರು, ಮ್ಯಾಕ್ಸಿಮ್‌ ಸಜೀಪ ಮತ್ತಿತರ ಪ್ರಮುಖರು ಹಾಜರಿದ್ದರು.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!