ಬಂಟ್ವಾಳ: ಲೊರೆಟ್ಟೊಪದವಿನಲ್ಲಿ ನಡೆದ ಘಟನೆಯೊಂದರಲ್ಲಿ ನಿಲ್ಲಿಸಿದ್ದ ವಾಹನ ಹಿಮ್ಮುಖವಾಗಿ ಚಲಿಸಿ ಹಿಂಬದಿ ಆಟವಾಡುತ್ತಿದ್ದ ಮಗು ವಾಹನದಡಿ ಸಿಲುಕಿ ಸಾವನ್ನಪ್ಪಿದ ಘಟನೆ ನಡೆದಿದೆ.

ಫರಂಗಿಪೇಟೆ ಸಮೀಪದ ಪತ್ತನಬೈಲ್ ನಿವಾಸಿಯಾಗಿದ್ದ ಉನೈಸ್ ಮತ್ತು ಆಶೂರಾ ದಂಪತಿ ಪುತ್ರಿ ಆಶೀಕಾ ಎಂಬ ಮೂರುವರೆ ವರ್ಷದ ಹೆಣ್ಣು ಮಗು ಅವಳ ಅಜ್ಜಿ ಮನೆಯಾದ ಬಂಟ್ವಾಳದ ಲೊರೊಟ್ಟೋ ಪದವು ಸಮೀಪದ ಟಿಪ್ಪುನಗರದ ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ನಿಲ್ಲಿಸಿದ್ದ ಟೆಂಪೋ ವಾಹನ ರಿವರ್ಸ್ ಬಂದಿದೆ. ಈ ವೇಳೆ ಮಗುವಿನ ಮೇಲೆ ವಾಹನ ಹಾದು ಹೋಗಿದೆ. ಮಗುವನ್ನು ಆಸ್ಪತ್ರೆಗೆ ಕೊಂಡೊಯ್ದರೂ ಫಲಕಾರಿಯಾಗಲಿಲ್ಲ. ವಾಹನ ಯಾವ ಕಾರಣದಿಂದ ಹಿಂದಕ್ಕೆ ಬಂದು ಎಂಬ ಕುರಿತು ಸ್ಪಷ್ಟ ಮಾಹಿತಿ ದೊರಕಿಲ್ಲ. ಬಂಟ್ವಾಳ ನಗರ ಠಾಣಾ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.



