ಜನ ಮನದ ನಾಡಿ ಮಿಡಿತ

Advertisement

ಅಸ್ತ್ರ ಸಂಸ್ಥೆಯಿಂದ “ಪ್ರಾಣಾಸ್ತ್ರ” ಟ್ರಸ್ಟ್ ಸ್ಥಾಪನೆ, ಆಂಬುಲೆನ್ಸ್ ಕೊಡುಗೆ

 

ಮಂಗಳೂರು: “ಸುಮಾರು 5 ವರ್ಷಗಳ ಹಿಂದೆ ಸ್ಥಾಪಿಸಿರುವ ಅಸ್ತ್ರ ಅನ್ನುವ ಸಂಸ್ಥೆಯು ಇಂದು ಉದ್ಯಮದ ಜೊತೆಗೆ ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಅನೇಕ ಕ್ರಿಕೆಟ್‌, ಕಬಡ್ಡಿ ಇನ್ನಿತರ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದು ತಮ್ಮ ಸಂಸ್ಥೆಯ ಲಾಭದ ಒಂದಂಶವನ್ನು ಸಮಾಜ ಸೇವೆಗಾಗಿ ಬಳಸುತ್ತಾ ಬಂದಿದ್ದೇವೆ. ನಮ್ಮ ಸಂಸ್ಥೆಯು 5ನೇ ವರ್ಷ ಪೂರೈಸಿರುವ ಈ ದಿನಗಳಲ್ಲಿ ಸಮಾಜಕ್ಕಾಗಿ ವಿಶೇಷ ಕೆಲಸವನ್ನು ಮಾಡಬೇಕು ಎನ್ನುವ ನಿಟ್ಟಿನಲ್ಲಿ ಕಡುಬಡವರಿಗಾಗಿ ಪ್ರಾಣಾಸ್ತ್ರ ಎಂಬ ಟ್ರಸ್ಟ್ ಮೂಲಕ ಈ ಸಂಸ್ಥೆ ಸಹಕರಿಸಲಿದೆ, ಇದರ ಜೊತೆಗೆ ಟ್ರಸ್ಟ್ ಹೆಸರಿನಲ್ಲಿ ನ.14ರಂದು ಉಚಿತ ಅಂಬ್ಯುಲೆನ್ಸ್ ವ್ಯವಸ್ಥೆಯನ್ನು ಮಾಡಿದ್ದೇವೆ“ ಎಂದು ಸಂಸ್ಥೆಯ ಸಿಇಒ ಲಂಚುಲಾಲ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

”ಇದೇ ಸಂದರ್ಭದಲ್ಲಿ ಸೌಹಾರ್ದಯುತವಾಗಿ ಹಿಂದೂ ಮುಸ್ಲಿಂ ಕ್ರೈಸ್ತ ಧರ್ಮದ ಮೂರು ಬಡ ಕುಟುಂಬದ ಜೊಡಿಗೆ ಸಾಮೂಹಿಕ ಮದುವೆಯನ್ನು ಮಾಡಲು ನಿರ್ಧರಿಸಲಾಗಿದೆ. ಕಡುಬಡವರ ಮದುವೆಯ ಸಂಪೂರ್ಣ ಖರ್ಚು ಜೊತೆಗೆ ಜೀವನ ನಿರ್ವಹಣೆಗೆ 50000 ರೂ. ಕೊಡಲಾಗುವುದು, ಹಿಂದೂ ಜೋಡಿ ಮುಂದೆ ಬಂದಿದ್ದು ಮುಸ್ಲಿಂ, ಕ್ರೈಸ್ತ ಜೋಡಿ ಅವರಾಗಿಯೇ ಮುಂದೆ ಬಂದಲ್ಲಿ ಖುಷಿಯ ವಿಚಾರ. ಬಡವರ ಹಿತಕ್ಕಾಗಿ ಸಮಾಜ ಸೇವೆಗಾಗಿ ಮಹತ್ತರ ಕಾರ್ಯದಲ್ಲಿ ನಮ್ಮ ಸಂಸ್ಥೆಯು ತೊಡಗಿಕೊಂಡಿದ್ದು ಇದಕ್ಕೆ ಜನರು ಸಹಕಾರ ನೀಡಬೇಕು“ ಎಂದರು. ಪತ್ರಿಕಾಗೋಷ್ಟಿಯಲ್ಲಿ ಪ್ರಕಾಶ್ ಶೆಟ್ಟಿ ಧರ್ಮನಗರ, ಯತೀಶ್ ಪೂಜಾರಿ, ಚರಣ್ ರಾಜ್ ಬಂದ್ಯೋಡು ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

error: Content is protected !!