ರೋಟರಿ ಮಿಡ್ ಟೌನ್ ಪಿರಿಯಾಪಟ್ಟಣ ಹಾಗೂ ರಕ್ತ ನಿಧಿ ಕೇಂದ್ರ ಕೆ.ಆರ್ ಆಸ್ಪತ್ರೆ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಿದ್ದರು. ಇದೇ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾಕ್ಟರ್ ಸುನಿಲ್ ವಿ,ಎಂ,ಪಿ, ಯವರು ಶಿಬಿರದಲ್ಲಿ ಪಾಲ್ಗೊಂಡು ಮೊದಲಿಗೆ ರಕ್ತದಾನ ಮಾಡಿದರು.

ರಕ್ತದಾನ ಮಾಡುವುದರಿಂದ ರಕ್ತ ಕ್ಯಾನ್ಸರ್ ಅಪಾಯ ತಗ್ಗುತ್ತದೆಂದು ಶೋಧಕರು ಪತ್ತೆ ಹಚ್ಚಿದ್ದಾರೆ,ರಕ್ತದಾನ ಮಾಡಿದಾಗ ನಿಮ್ಮ ದೇಹ ಹೊಸ ರಕ್ತ ಪಡೆಯುವ ಅವಕಾಶ ಕಡಿಮೆಯಾಗುತ್ತದೆ, ರಕ್ತದಾನದಿಂದ ನಷ್ಟವಾಗುವುದಿಲ್ಲ ಎಂದು ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾಕ್ಟರ್ ಅನಿಲ್ ಕುಮಾರ್ ತಿಳಿಸಿದರು. ರೋಟರಿ ಮಿಡ್ ಟೌನ್ ಪಿರಿಯಾಪಟ್ಟಣ ಅಧ್ಯಕ್ಷರಾದ ರಾಜೇಗೌಡರು ಇವರ ಸಂಸ್ಥೆಯಿಂದ ರಕ್ತದಾನಿಗಳಿಗೆ ಹಣ್ಣು ಮತ್ತು ತಂಪು ಪಾನೀಯವನ್ನು ನೀಡಿದರು.ಗಂಡು ಹೆಣ್ಣೆಂಬ ಬೇಧವಿಲ್ಲದೆ 18 ರಿಂದ 60 ವರ್ಷದ ಒಳಗಿನ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು, ಗಂಡಸರು 3 ತಿಂಗಳಿಗೊಮ್ಮೆ ಹೆಂಗಸರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಿದ ದೇಹದಲ್ಲಿ ಕೊಲೆಸ್ಟ್ರಲ್ ಕಡಿಮೆ ಮಾಡಿಕೊಳ್ಳಬಹುದು. ವ್ಯಕ್ತಿಯ ತೂಕ 45ಕ್ಕಿಂತ ಹೆಚ್ಚಿರಬೇಕು, ಹಿಮೀಗ್ಲೋಬಿನ್ ಅಂಶ 12.5 ಗ್ರಾಂ ಗಿಂತ ಹೆಚ್ಚಿರಬೇಕು, ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದರೆ ರಕ್ತದಾನ ಮಾಡುವ ಅಗತ್ಯವಿಲ್ಲ, ಮದ್ಯಪಾನ ಹಾಗೂ ಮಾದಕ ದ್ರವ್ಯ ಸೇವನೆ ಮಾಡಿದಾಗ ರಕ್ತದಾನ ಮಾಡಬಾರದು, 50ಕ್ಕೂ ಹೆಚ್ಚು ವ್ಯಕ್ತಿಗಳು ರಕ್ತದಾನ ಮಾಡಿದ್ದಾರೆ ಎಂದು ಡಾ. ಸುನಿಲ್ ವಿ,ಎಂ,ಪಿ, ತಿಳಿಸಿದರು .ಈ ಸಂದರ್ಭ ಬ್ಲಡ್ ಬ್ಯಾಂಕ್ ಅಧೀಕ್ಷಕರಾದ ಡಾಕ್ಟರ್ ಕುಸುಮ ಮೈಸೂರು, ಹಿರಿಯ ಆರೋಗ್ಯ ನಿರೀಕ್ಷ ಣಾಧಿಕಾರಿ ಪ್ರಕಾಶ್, ಆಪ್ತ ಸಮಾಲೋಚಕರು ಪ್ರಕಾಶ್, ರಕ್ತ ನಿಧಿ ಘಟಕ ಡಾಕ್ಟರ್ ತೇಜಸ್, ಸದಾಶಿವ, ಶಿವಪ್ರಕಾಶ್, ಹಾಗೂ ಖಾಸಗಿ ತುರ್ತು ಆಂಬುಲೆನ್ಸ್ ಸಹಾಯಕರು ಹಾಗೂ ಸಮಾಜ ಸೇವಕರಾದ ಶಿವಣ್ಣ ಸೇರಿದಂತೆ ಸಿಬ್ಬಂದಿಯವರು ಇದ್ದರು.



