ಪುತ್ತೂರಿನ ಮುಕ್ವೆ ಗೇರುಬೀಜ ಕಾರ್ಖಾನೆಯಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರ ನೇತೃತ್ವದಲ್ಲಿ ಸದಸ್ಯತ್ವ ಮಹಾ ಅಭಿಯಾನ ನಡೆಯಿತು.

ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರ ಆಶಯದಂತೆ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗಿ ಭಾರತ ಹೊರಹೊಮ್ಮಲಿದೆ. ಅದಕ್ಕೆ ಪೂರಕವಾಗಿ ಯುವ ಜನತೆಯನ್ನು ಸಂಪರ್ಕಿಸಲು ಸದಸ್ಯತ್ವ ಅಭಿಯಾನವು ಪೂರಕವಾಗಿರಲಿದೆ. ವಿಶ್ವ ಗುರು ಭಾರತದ ಪರಿಕಲ್ಪನೆಗೆ ದೇಶದ ಪ್ರತಿಯೊಬ್ಬ ನಾಗರಿಕನ ಪಾಲುದಾರಿಕೆ ಅಗತ್ಯವಾಗಿದೆ ಎಂದರು.
ಜನಸಂಘದಿಂದ ಇಂದಿನ ವರೆಗೂ ನಮ್ಮ ಪಕ್ಷ ರಾಷ್ಟ್ರದ ಅಭ್ಯುದಯದ ಚಿಂತನೆಯೊಂದಿಗೆ ಸಾಗುತ್ತಾ ಬಂದಿದ್ದೇವೆ. ದೇಶ ಮೊದಲು ಎಂಬ ಪರಿಕಲ್ಪನೆಯನ್ನು ಗ್ರಾಮ ಗ್ರಾಮಕ್ಕೆ ಕೊಂಡೊಯ್ಯುವ ಹೊಣೆಗಾರಿಕೆಯೊಂದಿಗೆ ಬಿಜೆಪಿ ಕಾರ್ಯಕರ್ತರು ಕಾರ್ಯನಿರತರಾಗಿದ್ದಾರೆ ಎಂದು ಕಿಶೋರ್ ಕುಮಾರ್ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಪುತ್ತೂರು ಮಂಡಲದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಜೊತೆಗಿದ್ಜರು.



