ಜನ ಮನದ ನಾಡಿ ಮಿಡಿತ

Advertisement

ಚಿಕ್ಕವಯಸ್ಸಿನಲ್ಲೇ ರುದ್ರಮನ್ಯುಗೆ ಒಲಿದು ಬಂದ ಪ್ರಶಸ್ತಿ, ಸನ್ಮಾನಗಳು

ರುದ್ರಮನ್ಯು ಚಿಕ್ಕಂದಿನಿಂದಲೇ ಹಲವು ಕಲೆಗಳನ್ನು ಮೈಗೂಡಿಸಿಕೊಂಡಿದ್ದಾರೆ. 2020ರಲ್ಲಿ ವಾಯ್ಸ್ ಓಫ್ ಆರಾಧನಾ ತಂಡದವರಿಂದ ಸನ್ಮಾನ ಹಾಗೂ 2022 ರ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಶಾರದಾ ಕಲಾ ವೇದಿಕೆ ಬೆಂಗಳೂರು ಇವರ ಪ್ರಥಮ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನೀಡಲಾದ ಮಕ್ಕಳ ವಿಭಾಗದ ಶಾರದಾ ಕಲೋತ್ಸವ ಪ್ರಶಸ್ತಿ 2024 ಲಭಿಸಿದೆ.

ಪ್ರಸ್ತುತ ಸಹ್ಯಾದ್ರಿ ಇಂಜಿನಿಯರ್ ಕಾಲೇಜಿನಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ವ್ಯಾಸಂಗಮಾಡುತ್ತಿದ್ದಾರೆ. ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬಂತೆ ರುದ್ರಮನ್ಯು ಚಿಕ್ಕಂದಿನಿಂದಲೇ ಹಲವು ಕಲೆಗಳನ್ನು ಮೈಗೂಡಿಸಿಕೊಂಡಿದ್ದಾರೆ.ಚಿಕ್ಕ ವಯಸ್ಸಿನಲ್ಲೇ ಸ್ಪಷ್ಟ ಉಚ್ಚಾರ ದಿಂದ ಮಾತನಾಡುವ ಇವರು ತನ್ನ ಮೂರೂವರೆ ವಯಸ್ಸಿನಲ್ಲೇ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿಯಲು ಪ್ರಾರಂಭ ಮಾಡುತ್ತಾರೆ.ಇವರ ಸಂಗೀತ ಗುರುಗಳು :ರಾಜೇಶ್ವರಿ, ಲೋಕೇಶ್ ನಿಟ್ಟೂರು, ವೀಣಾ ಹೆಗ್ಡೆ ಹಾಗೂ ನಂತರ ವಿಧ್ವಾನ್ M ನಾರಾಯಣ್ ಅವರಿಂದ ಸಂಗೀತ ಅಭ್ಯಾಸ ಮಾಡಿ ಜೂನಿಯರ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಯಲ್ಲಿ ಉತ್ತಿರ್ಣರಾಗಿ ಈಗ ಸೀನಿಯರ್ ಅಭ್ಯಾಸ ಮಾಡುತ್ತಿದ್ದಾರೆ..

 

ಚಿಕ್ಕಂದಿನಿಂದಲೇ ಯಕ್ಷಗಾನ ಕಲೆಯತ್ತ ಆಕರ್ಷಿತರಾದ ಇವರು ತನ್ನ 7 ನೇ ವಯಸ್ಸಿನಲ್ಲಿ ಕಟೀಲು ದುರ್ಗಾ ಮಕ್ಕಳ ಮೇಳ (ರಿ )ಇಲ್ಲಿ ರಾಜೇಶ್ ಐ ಕಟೀಲು ಇವರಿಂದ ಯಕ್ಷ ನಾಟ್ಯವನ್ನು ಅಭ್ಯಾಸ ಮಾಡಿ ಹಲವಾರು ರಂಗಸ್ಥಳ ದಲ್ಲಿ ತನ್ನ ಅಚ್ಚುಕಟ್ಟಾದ ಪ್ರದರ್ಶನವನ್ನು ನೀಡಿದ್ದಾರೆ.ಯಕ್ಷಗಾನ ದಿಗ್ಗಜರುಗಳ ಜೊತೆ ರಂಗವನ್ನು ಹಂಚಿಕೊಂಡು ಅವರಲ್ಲಿ ಭೇಷ್ ಏನಿಸಿಕೊಂಡಿದ್ದಾರೆ. ಚೆಂಡೆ ಮದ್ದಳೆ ಯನ್ನು ಹರಿನಾರಾಯಣ ಬೈಪಾಡಿತ್ತಾಯ ಇವರಲ್ಲಿ ಅಭ್ಯಾಸ ಮಾಡಿದ್ದಾರೆ. ತನ್ನ ತಮ್ಮನ ಜೊತೆ ಗೂಡಿ ಹಲವು ಭಾರಿ ಭಾಗವತಿಕೆ ಪ್ರದರ್ಶನವನ್ನು ನೀಡಿದ್ದಾರೆ.ಯಕ್ಷಗಾನ ನಾಟ್ಯದಲ್ಲಿ ಉತ್ತಮ ಒಲವು ತೋರಿಸುವ ರುದ್ರಮನ್ಯು ಮುಂದೆ ಉತ್ತಮ ವೇಷಧರಿಯಾಗಿ ಒಳ್ಳೆಯ ಕಲಾವಿದನಾಗಬೇಕೆಂಬ ಆಸೆಯನ್ನು ಹೊಂದಿದ್ದಾರೆ.

ಇವರು ಅಭಿನಯಿಸಿದ ಪಾತ್ರಗಳು
#ದೇವೇಂದ್ರ, #ಮಹಿಷಾಸುರ, #ರಕ್ತಬೀಜ, #ಚಂಡಾಸುರ, #ವಿದ್ಯುನ್ಮಾಲಿ #ಕರ್ಣ,#ಕಮಲಧ್ವಜ, #ಕಾರ್ತವೀರ್ಯ, #ತಾರಕಾಸುರ, #ಹನುಮಂತ, #ರಾವಣ, #ನಿಶುoಬ, #ನಿಕುಂಭ, #ಇಂದ್ರಜಿತು, #ಶತ್ರು ಪ್ರಸೂದನ, #ಮಾಯಾವಿ,#ದಂತ ವಕ್ರ #ದೇವೇಂದ್ರ ಬಲ, #ರಕ್ಕಸ ಬಲ.
ಕಟೀಲು ಅರೂ ಮೇಳಗಳಲ್ಲಿ #ಬಾಲಗೋಪಾಲ, #ಪೀಠಿಕಾ #ಸ್ತ್ರೀ ವೇಷ ಹಾಗೂ #ಮುಖ್ಯ ಸ್ತ್ರೀ ವೇಷ ಪಾತ್ರಗಳನ್ನು ತನ್ನ ತಮ್ಮನ ಜೊತೆ ಗೂಡಿ ಸೇವೆಯನ್ನು ಸಲ್ಲಿಸಿದ್ದಾರೆ. ಅಲ್ಲದೆ ಧರ್ಮಸ್ಥಳ ಮೇಳದಲ್ಲಿಯೂ ಸೇವೆಯನ್ನು ಸಲ್ಲಿಸಿದ್ದಾರೆ.
ಕೀಬೋರ್ಡ್ ವಾದನವನ್ನು ರಮೇಶ್ ಹೆಬ್ಬಾರ್ ತಡಂಬೈಲ್ ಇವರಲ್ಲಿ ಕಲಿತ್ತಿದ್ದಾರೆ.
ಚಲನ ಚಿತ್ರ ಗೀತೆಗಳನ್ನು ಅಮಿತ್ ಖಾರ್ವಿ ಇವರಲ್ಲಿ ಕಲಿಯುತ್ತಿದ್ದರು.ಕರೋಕೆ ಬಳಸಿ ಎಲ್ಲಾ ತರದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುತ್ತಾರೆ.
ಚಿತ್ರಕಲೆಯನ್ನು ಸುಮಾರು 8 ವರುಷಗಳು ಪಲ್ಲವಿ ಪ್ರಭು ಇವರಲ್ಲಿ ಅಭ್ಯಾಸ ಮಾಡಿದ್ದು
ಒಬ್ಬರ ಮುಖದ ಭಾವಚಿತ್ರ, ಹಾಗೂ ಗೋಡೆಯಲ್ಲಿ ಚಿತ್ರ ಬಿಡಿಸುವುದನ್ನು ಮಾಡುತ್ತಾರೆ
ಶಾಲೆಯಲ್ಲಿ ಹಾಗೂ ಇನ್ನಿತರ ಕಡೆಗಳಲ್ಲಿ ಹಾಡು, ಸಂಗೀತ, ಯಕ್ಷಗಾನ ಸ್ಪರ್ಧೆ ಗಳಲ್ಲಿ ನೂರಾರು ಪ್ರಶಸ್ತಿ ಫಲಕಗಳನ್ನು ತನ್ನದಾಗಿಸಿಕೊಂಡಿದ್ದಾರೆ.
ಕರಾಟೆಯನ್ನು ನಾಗರಾಜ್ ಎಂಬವರಲ್ಲಿ ಕಲಿತಿದ್ದು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಹಲವು ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಗಳಿಸಿದ್ದಾರೆ.
ಕ್ರಿಕೆಟ್, ಫುಟ್ಬಾಲ್ ಎಂದರೆ ಬಹಳ ಇಷ್ಟ. ಶಾಲಾ ಮಟ್ಟದಲ್ಲಿ best ಬೌಲರ್ ಹಾಗೂ best all rounder ಪ್ರಶಸ್ತಿ ಯನ್ನು ಪಡೆದು ಕೊಂಡಿದ್ದಾರೆ.
ಕಲೆಯ ಜೊತೆ ಜೊತೆ ಗೂಡಿ ವಿದ್ಯಾಭ್ಯಾಸವನ್ನು ಕೂಡ ಮುಂದುವರಿಸುತ್ತಾ ಮುಂದೆ ಇಂಜಿನಿಯರ್ ಆಗಬೇಕೆಂಬ ಗುರಿಯನ್ನು ಹೊಂದಿದ್ದಾರೆ.

Leave a Reply

Your email address will not be published. Required fields are marked *

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

error: Content is protected !!