ಬಂಟ್ವಾಳ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಅಕ್ರಮ ಮರಳು ಅಡ್ಡೆಗೆ ದಾಳಿ ನಡೆಸಿ ೧೪.೫೦ ಲಕ್ಷ ರೂ. ಮೌಲ್ಯದ ಒಟ್ಟು ೯ ಬೋಟ್ ಗಳನ್ನು ವಶಪಡಿಸಿಕೊಂಡ ಘಟನೆ ಅಡ್ಡೂರಿನಲ್ಲಿ ನಡೆದಿದೆ.

ಮಂಗಳೂರು ಸಹಾಯಕ ಕಮೀಷನರ್ ಹರ್ಷವರ್ಧನ ಪಿ.ಜೆ. ಅವರ ನಿರ್ದೇಶನದಂತೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್, ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಹಿರಿಯ ಭೂ ವಿಜ್ಞಾನಿಗಳಾದ ಗಿರೀಶ್ ಮೋಹನ್, ಕೃಷ್ಣವೇಣಿ, ಮಾದೇಶ್ವರ, ಸತ್ಯಭಾಮ, ಕಂದಾಯ ನಿರೀಕ್ಷಕರಾದ ಪ್ರಸಾದ್, ಪೂರ್ಣಚಂದ್ರ, ಎರಡೂ ಇಲಾಖೆಗಳ ಸಿಬಂದಿ, ಬಜ್ಪೆ ಪೊಲೀಸ್ ಠಾಣಾ ಸಿಬಂದಿ ಕಾರ್ಯಾಚರಣೆ ನಡೆಸಿದ್ದಾರೆ.



