ಜನ ಮನದ ನಾಡಿ ಮಿಡಿತ

ಇತ್ತೀಚಿನ ಸುದ್ದಿ
ಮುಂಡ್ಕೂರು ರವೀಂದ್ರ ಶೆಟ್ಟಿ ನಿಧನಕ್ಕೆ ಬಂಟರ ಸಂಘದ ಶ್ರದ್ದಾಂಜಲಿ..! ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…! ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು. ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆ…! ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ ಆಗಮಿಸಿ ಚುನಾವಣಾ ಪ್ರಕ್ರಿಯೆಗಳ ಅವಲೋಕನ ನಡೆಸಿದರು. ಸೂರಿಕುಮೇರು: ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಪಿಕಪ್ ವಾಹನ ಡಿ*ಕ್ಕಿ..!
Advertisement

7ರ ಹರೆಯದ ಶೌರ್ಯ ರಾವ್ ಸಾಧನೆ ಮಾತ್ರ ಅದ್ಭುತ..!!

ಶೌರ್ಯರಾವ್. ಕೇವಲ 7 ವರ್ಷಗಳು. ಶ್ರೀನಿಧಿ ರಾವ್ ಮತ್ತು ಅಶ್ವಿನಿ ರಾವ್ ಅವರ ಪುತ್ರ. ಮಂಗಳೂರಿನ ಎಸ್‌ಡಿಎಂ ಶಾಲೆಯಲ್ಲಿ 3ನೇ ತರಗತಿಯಲ್ಲಿ ಓದುತ್ತಿದ್ದಾರೆ. ಇವರು ನೃತ್ಯ, ನಟನೆ, ಈಜು, ಯೋಗ, ತಾಲೀಮ್, ಕ್ಯಾಲಾಸ್ಟಿಕ್‌ನಿಕ್ಸ್, ಫ್ರೀಸ್ಟೈಲ್ ಜಿಮಾಸ್ಟಿಕ್, ಹಾಡುಗಾರಿಕೆ ಮತ್ತು ಚಿತ್ರಕಲೆಯಲ್ಲಿ ಪರಿಣಿತರು.

ಇವರು ಡ್ಯಾನ್ಸ್ ಕುಡ್ಲಾ ಡ್ಯಾನ್ಸ್ ರಿಯಾಲಿಟಿ ಶೋನ ಸಿಮಿಫೈನಲಿಸ್ಟ್ ಆಗಿದ್ದರು ಮತ್ತು ನೇರವಾಗಿ ಕರ್ನಾಟಕ ಬೆಸ್ಟ್ ಡ್ಯಾನ್ಸರ್‌ಗೆ ಆಯ್ಕೆಯಾಗಿದ್ದರು. ಇವರು ಬಾಲ ಚಿತ್ರ ಕಲಾವಿದರೂ ಹೌದು. ಇವರು ಬಾಲ ಚಲನಚಿತ್ರ ಕಲಾವಿದರಾಗಿ 2 ಚಲನಚಿತ್ರಗಳು ಮತ್ತು 3 ಆಲ್ಬಂ ಹಾಡುಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ಇವರು ಮಂಗಳೂರಿನ ಫಸ್ಟ್ ಎವರ್ ಲಿಟಲ್ ಕಿಂಗ್ -2023 ಮತ್ತು ಕಿಡ್ಸ್ ಫ್ಯೂಷನ್-2024 ಪ್ರಶಸ್ತಿ ವಿಜೇತರಾಗಿದ್ದಾರೆ. ಕಳೆದ ಒಂದು ವರ್ಷದಲ್ಲಿ ಅವರು 70 ಕ್ಕೂ ಹೆಚ್ಚು ವೇದಿಕೆಯಲ್ಲಿ ಪ್ರದರ್ಶನಗಳನ್ನು ನೀಡಿದ್ದಾರೆ ಮತ್ತು 85 ಪ್ರಶಸ್ತಿ ಮತ್ತು ಮೆಚ್ಚುಗೆಯನ್ನು ಸಾಧಿಸಿದ್ದಾರೆ ಮಂಗಳೂರಿನಲ್ಲಿ ನಡೆದ ಕನ್ನಡ ಚಿತ್ರರಂಗದ ಲೆಜೆಂಡ್ ನಟ ಶ್ರೀ ಅನಂತನಾಗ್ ಸರ್‌ರವರ 75ನೇ ಹುಟ್ಟುಹಬ್ಬದ ಆಚರಣೆಯಲ್ಲಿ ಇವರ ನೃತ್ಯ ಹಾಗೂ ಪ್ರತಿಭೆಯನ್ನು ವೀಕ್ಷಿಸಿ ಸ್ವತಃ ಶ್ರೀ ಅನಂತನಾಗ ರವರಿಂದ ಪ್ರಶಂಸೆಯನ್ನು ಪಡೆದುಕೊಂಡಿರುತ್ತಾರೆ. ಇವರು ಇತ್ತೀಚೆಗೆ ನಡೆದ ಎಲ್ಲಾ ಹುಲಿ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿ ಅತ್ಯುತ್ತಮ ಮರಿ ಹುಲಿ-2024 ಪ್ರಶಸ್ತಿಯನ್ನು ಪಡೆದುಕೊಂಡು ಮಿಂಚಿರುತ್ತಾರೆ.

ಇವರು ಮಂಗಳೂರಿನ ಮುಳಿಹಿತ್ಲು ಫ್ರೆಂಡ್ ಸರ್ಕಲ್‌ನ ಹುಲಿ ವೇಷ ತಂಡದಲ್ಲಿ ಮರಿ ಹುಲಿಯಾಗಿ ಭಾಗವಹಿಸಿ ಪುತ್ತೂರಿನಲ್ಲಿ ನಡೆದ ಪಿಲಿಗೊಬ್ಬುವಿನಲ್ಲಿ ತಂಡವು ಪ್ರಥಮ ಬಹುಮಾನ ಹಾಗೂ ರೂ. 3,00,000/ನಗದು ಹಾಗೂ ಮರಿಹುಲಿಯಾಗಿ ಶೌರ್ಯರಾವ್ ರವರು ಮರಿ ಹುಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಹಾಗೂ ರೂ. 10,000/- ನಗದು ಬಹುಮಾನವನ್ನು ಪಡೆದಿರುತ್ತಾರೆ. ಮಂಗಳೂರಿನಲ್ಲಿ ನಡೆದ ಪಿಲಿ ಪರ್ಬ ಹುಲಿ ವೇಷ ಸ್ಪರ್ಧೆಯಲ್ಲಿ ಇವರ ತಂಡವು ಪ್ರಥಮ ಬಹುಮಾನ ಹಾಗೂ ರೂ. 5,00,000/- ನಗದು ಹಾಗೂ ಶೌರ್ಯ ರಾವ್‌ರವರು ಮರಿ ಹುಲಿ-2024 ಪ್ರಶಸ್ತಿ ಹಾಗೂ ರೂ. 25,000/- ನಗದು ಬಹುಮಾನವನ್ನು ಪಡೆದಿರುತ್ತಾರೆ. ಇವರ ತಂಡವು ಮಂಗಳೂರಿನಲ್ಲಿ ನಡೆದ ಪಿಲಿನಲಿಕೆ ಹುಲಿ ವೇಷ ಸ್ಪರ್ದೆಯಲ್ಲಿ ದಲ್ಲಿ ಭಾಗವಹಿಸಿ ತೃತೀಯ ಸ್ಥಾನ ಹಾಗೂ ರೂ. 2,00,000/- ನಗದು ಬಹುಮಾನ ಪಡೆದಿರುತ್ತಾರೆ.

Leave a Reply

Your email address will not be published. Required fields are marked *

ಮುಂಡ್ಕೂರು ರವೀಂದ್ರ ಶೆಟ್ಟಿ ನಿಧನಕ್ಕೆ ಬಂಟರ ಸಂಘದ ಶ್ರದ್ದಾಂಜಲಿ..!

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆ…!

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ ಆಗಮಿಸಿ ಚುನಾವಣಾ ಪ್ರಕ್ರಿಯೆಗಳ ಅವಲೋಕನ ನಡೆಸಿದರು.

ಸೂರಿಕುಮೇರು: ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಪಿಕಪ್ ವಾಹನ ಡಿ*ಕ್ಕಿ..!

ಉಡುಪಿ: ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕನ ಬಂಧನ…!

ಉಡುಪಿ: ನಾವುಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರು ಮತ್ತು ಟ್ರಕ್ ನಡುವೆ ಭೀಕರ ಅಪಘಾತ….!

ಪುಂಜಾಲಕಟ್ಟೆ: ಪುಂಜಾಲಕಟ್ಟೆಯ ಬಸವನಗುಡಿ ಎಂಬಲ್ಲಿ ಸ್ಕೂಟರ್‌ಗೆ ಕೆ.ಎಸ್ ಆರ್ ಟಿಸಿ ಬಸ್ ಡಿ*ಕ್ಕಿ….!

error: Content is protected !!