ಶೌರ್ಯರಾವ್. ಕೇವಲ 7 ವರ್ಷಗಳು. ಶ್ರೀನಿಧಿ ರಾವ್ ಮತ್ತು ಅಶ್ವಿನಿ ರಾವ್ ಅವರ ಪುತ್ರ. ಮಂಗಳೂರಿನ ಎಸ್‌ಡಿಎಂ ಶಾಲೆಯಲ್ಲಿ 3ನೇ ತರಗತಿಯಲ್ಲಿ ಓದುತ್ತಿದ್ದಾರೆ. ಇವರು ನೃತ್ಯ, ನಟನೆ, ಈಜು, ಯೋಗ, ತಾಲೀಮ್, ಕ್ಯಾಲಾಸ್ಟಿಕ್‌ನಿಕ್ಸ್, ಫ್ರೀಸ್ಟೈಲ್ ಜಿಮಾಸ್ಟಿಕ್, ಹಾಡುಗಾರಿಕೆ ಮತ್ತು ಚಿತ್ರಕಲೆಯಲ್ಲಿ ಪರಿಣಿತರು.
ಇವರು ಡ್ಯಾನ್ಸ್ ಕುಡ್ಲಾ ಡ್ಯಾನ್ಸ್ ರಿಯಾಲಿಟಿ ಶೋನ ಸಿಮಿಫೈನಲಿಸ್ಟ್ ಆಗಿದ್ದರು ಮತ್ತು ನೇರವಾಗಿ ಕರ್ನಾಟಕ ಬೆಸ್ಟ್ ಡ್ಯಾನ್ಸರ್‌ಗೆ ಆಯ್ಕೆಯಾಗಿದ್ದರು. ಇವರು ಬಾಲ ಚಿತ್ರ ಕಲಾವಿದರೂ ಹೌದು. ಇವರು ಬಾಲ ಚಲನಚಿತ್ರ ಕಲಾವಿದರಾಗಿ 2 ಚಲನಚಿತ್ರಗಳು ಮತ್ತು 3 ಆಲ್ಬಂ ಹಾಡುಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ಇವರು ಮಂಗಳೂರಿನ ಫಸ್ಟ್ ಎವರ್ ಲಿಟಲ್ ಕಿಂಗ್ -2023 ಮತ್ತು ಕಿಡ್ಸ್ ಫ್ಯೂಷನ್-2024 ಪ್ರಶಸ್ತಿ ವಿಜೇತರಾಗಿದ್ದಾರೆ. ಕಳೆದ ಒಂದು ವರ್ಷದಲ್ಲಿ ಅವರು 70 ಕ್ಕೂ ಹೆಚ್ಚು ವೇದಿಕೆಯಲ್ಲಿ ಪ್ರದರ್ಶನಗಳನ್ನು ನೀಡಿದ್ದಾರೆ ಮತ್ತು 85 ಪ್ರಶಸ್ತಿ ಮತ್ತು ಮೆಚ್ಚುಗೆಯನ್ನು ಸಾಧಿಸಿದ್ದಾರೆ ಮಂಗಳೂರಿನಲ್ಲಿ ನಡೆದ ಕನ್ನಡ ಚಿತ್ರರಂಗದ ಲೆಜೆಂಡ್ ನಟ ಶ್ರೀ ಅನಂತನಾಗ್ ಸರ್‌ರವರ 75ನೇ ಹುಟ್ಟುಹಬ್ಬದ ಆಚರಣೆಯಲ್ಲಿ ಇವರ ನೃತ್ಯ ಹಾಗೂ ಪ್ರತಿಭೆಯನ್ನು ವೀಕ್ಷಿಸಿ ಸ್ವತಃ ಶ್ರೀ ಅನಂತನಾಗ ರವರಿಂದ ಪ್ರಶಂಸೆಯನ್ನು ಪಡೆದುಕೊಂಡಿರುತ್ತಾರೆ. ಇವರು ಇತ್ತೀಚೆಗೆ ನಡೆದ ಎಲ್ಲಾ ಹುಲಿ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿ ಅತ್ಯುತ್ತಮ ಮರಿ ಹುಲಿ-2024 ಪ್ರಶಸ್ತಿಯನ್ನು ಪಡೆದುಕೊಂಡು ಮಿಂಚಿರುತ್ತಾರೆ.
ಇವರು ಮಂಗಳೂರಿನ ಮುಳಿಹಿತ್ಲು ಫ್ರೆಂಡ್ ಸರ್ಕಲ್‌ನ ಹುಲಿ ವೇಷ ತಂಡದಲ್ಲಿ ಮರಿ ಹುಲಿಯಾಗಿ ಭಾಗವಹಿಸಿ ಪುತ್ತೂರಿನಲ್ಲಿ ನಡೆದ ಪಿಲಿಗೊಬ್ಬುವಿನಲ್ಲಿ ತಂಡವು ಪ್ರಥಮ ಬಹುಮಾನ ಹಾಗೂ ರೂ. 3,00,000/ನಗದು ಹಾಗೂ ಮರಿಹುಲಿಯಾಗಿ ಶೌರ್ಯರಾವ್ ರವರು ಮರಿ ಹುಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಹಾಗೂ ರೂ. 10,000/- ನಗದು ಬಹುಮಾನವನ್ನು ಪಡೆದಿರುತ್ತಾರೆ. ಮಂಗಳೂರಿನಲ್ಲಿ ನಡೆದ ಪಿಲಿ ಪರ್ಬ ಹುಲಿ ವೇಷ ಸ್ಪರ್ಧೆಯಲ್ಲಿ ಇವರ ತಂಡವು ಪ್ರಥಮ ಬಹುಮಾನ ಹಾಗೂ ರೂ. 5,00,000/- ನಗದು ಹಾಗೂ ಶೌರ್ಯ ರಾವ್‌ರವರು ಮರಿ ಹುಲಿ-2024 ಪ್ರಶಸ್ತಿ ಹಾಗೂ ರೂ. 25,000/- ನಗದು ಬಹುಮಾನವನ್ನು ಪಡೆದಿರುತ್ತಾರೆ. ಇವರ ತಂಡವು ಮಂಗಳೂರಿನಲ್ಲಿ ನಡೆದ ಪಿಲಿನಲಿಕೆ ಹುಲಿ ವೇಷ ಸ್ಪರ್ದೆಯಲ್ಲಿ ದಲ್ಲಿ ಭಾಗವಹಿಸಿ ತೃತೀಯ ಸ್ಥಾನ ಹಾಗೂ ರೂ. 2,00,000/- ನಗದು ಬಹುಮಾನ ಪಡೆದಿರುತ್ತಾರೆ.
ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲನೋರ್ವ ಕಾಣೆಯಾದ ಘಟನೆ ನಡೆದಿದ್ದು, ನೇತ್ರಾವತಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.…
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಬೊಳ್ಳಾರಿ ನಿವಾಸಿ ಚೆನ್ನಕೇಶವ ಕಾಣೆಯಾದವರಾಗಿದ್ದು, ದೂರುದಾರರ ಪ್ರಕಾರ,…
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಮ್ಮ ಕಚೇರಿಯಲ್ಲಿ ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಯ 2ನೇ…
ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯತಿಗೆ ಎಮ್.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ…
ಐವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಮೇಲ್ಸೇತುವೆಯ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ…
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…