ಪ್ರತಿಷ್ಠಿತ ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾದ JCI ಪುತ್ತೂರು ಘಟಕದ 2025 ನೇ ಸಾಲಿನ ಅಧ್ಯಕ್ಷರಾಗಿ ವಿದ್ಯಾಮಾತಾ ಅಕಾಡೆಮಿ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ರವರು ಚುನಾಯಿತರಾಗಿರುತ್ತಾರೆ. JCI ಮುಳಿಯ ಹಾಲ್ ನಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ನಿಯೋಜಿತ ವಲಯ ಉಪಾಧ್ಯಕ್ಷ ಚುನಾವಣಾ ಅಧಿಕಾರಿ JC ಸುಹಾಸ್ ಮರಿಕೆ, ರಾಷ್ಟ್ರೀಯ ಸಂಯೋಜಕಿ JC ಸ್ವಾತಿ ಜೆ ರೈ , ಪೂರ್ವ ಅಧ್ಯಕ್ಷರಾದ JC ಶಶಿರಾಜ್ ರೈ, 2024 ರ ಸಾಲಿನ ಅಧ್ಯಕ್ಷ JC ಮೋಹನ್ ಕೆ ರವರುಗಳು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರಾದ JC ಮುರಳಿ ಶ್ಯಾಮ್, JC ವಿಶ್ವ ಪ್ರಸಾದ್ ಸೇಡಿಯಾಪು, JC ಜಗನ್ನಾಥ್ ರೈ ,
JC ಶರತ್ ಕುಮಾರ್ ರೈ , JC ವಸಂತ್ ಜಾಲಾಡಿ , JC ಗೌತಮ್ ರೈ, JC ಮನೋಹರ್ ಕೆ, 2024 ರ ಕಾರ್ಯದರ್ಶಿ JC ಆಶಾ ಮುತ್ಲಾಜೆ ಹಾಗೂ JC ಸದಸ್ಯರೆಲ್ಲರೂ ಉಪಸಿತರಿದ್ದರು.
2025ರ ಸಾಲಿಗೆ ಅಧ್ಯಕ್ಷರಾಗಿ ನಿಯೋಜನೆಗೊಂಡ ಭಾಗ್ಯೇಶ್ ರೈಯವರು ತನ್ನನ್ನು ಆಯ್ಕೆ ಮಾಡಿದ 2024ರ ಆಡಳಿತ ಮಂಡಳಿ, ಚುನಾವ
ಣಾ ಅಧಿಕಾರಿಗಳಿಗೆ ಪೂರ್ವ ಅಧ್ಯಕ್ಷರಿಗೆ, JC ಯ ಸದಸ್ಯರೆಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿದರು.
ಭಾಗ್ಯೇಶ್ ರೈ ರವರು ಪುತ್ತೂರು ತಾಲೂಕಿನ ಕೆಯ್ಯೂರಿನವರಾಗಿದ್ದು 2017 ರಲ್ಲಿ ಪ್ರತಿಷ್ಠಿತ ತರಬೇತಿ ಸಂಸ್ಥೆಯಾದ ವಿದ್ಯಾಮಾತಾ ಫೌಂಡೇಶನ್ ಅನ್ನು ಸ್ಥಾಪಿಸಿ ರಾಜ್ಯಾದ್ಯಂತ ನೂರಾರು ಉದ್ಯೋಗ ಮೇಳಗಳು ,ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುತ್ತಾರೆ 2020 ರ ನಂತರ ವಿದ್ಯಾಮಾತಾ ಅಕಾಡೆಮಿಯನ್ನು ಪ್ರಾರಂಭಿಸಿ ಕರಾವಳಿ ಭಾಗದಲ್ಲಿ 150ಕ್ಕೂ ಹೆಚ್ಚು ಅಭ್ಯರ್ಥಿಗಳು ವಿವಿಧ ಇಲಾಖೆಗಳಲ್ಲಿ ಸರಕಾರಿ ಹುದ್ದೆಗೆ ಏರುವಂತೆ ಮಾಡಿದ ಕೀರ್ತಿ ಭಾಗ್ಯೇಶ್ ರೈ ಅವರದು.
ಸುಮಾರು 12 ವರ್ಷಗಳ ಕಾಲ ಜಯ ಕರ್ನಾಟಕ ಸಂಘಟನೆಯಲ್ಲಿ ಕೆಲಸ ಮಾಡಿದ್ದು ರಾಮನಗರ ಜಿಲ್ಲೆ ಉಪಾಧ್ಯಕ್ಷರಾಗಿ ಸಮಾನ ಶಿಕ್ಷಣ ನೀತಿ ಜಾರಿಗೆ ಬರಲು ಖ್ಯಾತ ಶಿಕ್ಷಣ ತಜ್ಞರಾದ ಡಾ| ನಿರಂಜನ್ ಆರಾಧ್ಯರವರ ನೇತೃತ್ವದಲ್ಲಿ ನಡೆಸಿದ ರಾಜ್ಯ ಮಟ್ಟದ ಅಭಿಯಾನದಲ್ಲಿ ಉತ್ತರ ಕರ್ನಾಟಕದ 18 ಜಿಲ್ಲೆಗಳ ವೀಕ್ಷಕರಾಗಿ ಕಾರ್ಯ ನಿರ್ವಹಿಸಿದ ಅನುಭವವಿದೆ. ಸದ್ಯ ಭಾಗ್ಯೇಶ್ ರೈ ರವರು ಪುತ್ತೂರಿನಲ್ಲಿ ಹತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದು ಲಯನ್ಸ್ ಕ್ಲಬ್ ಪುತ್ತುರ್ದ ಮುತ್ತು ಇದರ ಕಾರ್ಯದರ್ಶಿಯಾಗಿ, ಹಿರಿಯ ವಿದ್ಯಾರ್ಥಿ ಸಂಘ KPS ಕೆಯ್ಯೂರು ಇದರ ಅಧ್ಯಕ್ಷರಾಗಿರುತ್ತಾರೆ. ಭಾಗ್ಯೇಶ್ ರೈ ರವರ ಸಾಮಾಜಿಕ ಕಳಕಳಿಯನ್ನು ಗುರುತಿಸಿ ಹಲವಾರು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ.
2019ರ ಸಾಲಿನಲ್ಲಿ ವಚನ ಸಾಹಿತ್ಯ ಸಂಸ್ಕೃತಿ ಅಧ್ಯಯನ ಕೇಂದ್ರ ಮಹಿಳಾ ಸಬಲೀಕರಣ ಕೇಂದ್ರ ಬೆಂಗಳೂರು ಇವರಿಂದ ಕೊಡಲ್ಪಡುವ ಬಸವಶ್ರೀ ಪ್ರಶಸ್ತಿ.
2021ರ ಸಾಲಿನಲ್ಲಿ ಶ್ರೀ ಆಚಾರ್ಯ ಗುರುಕುಲ ಮೈಸೂರು ವತಿಯಿಂದ ಅತ್ಯುತ್ತಮ ತರಬೇತು ಪ್ರಶಸ್ತಿ.
2023ರ ಸಾಲಿನಲ್ಲಿ ಬೆಂಗಳೂರಿನ ಜನಶ್ರೀ ಫೌಂಡೇಶನ್ ವತಿಯಿಂದ ಕೊಡಲ್ಪಡುವ ರಾಜ್ಯ ಮಟ್ಟದ ಶಿಕ್ಷಣ ಸೇವಾ ರತ್ನ ಪ್ರಶಸ್ತಿ.
2023ರ ಸಾಲಿನ ಮಂದಾರ ಪ್ರಶಸ್ತಿ.
2024 ರ JCI ಸಾಧನಶ್ರೀ ಪುರಸ್ಕಾರ
2024 ರ ರೋಟರಿ ಕ್ಲಬ್ ಪುತ್ತೂರು ಯುವ ಇದರ ವತಿಯಿಂದ ರೋಟರಿ ಯುವಸೇವಾ ರತ್ನ ಪ್ರಶಸ್ತಿ ,ಇತ್ಯಾದಿಗಳು ದೊರಕಿವೆ.
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…