ಜನ ಮನದ ನಾಡಿ ಮಿಡಿತ

Advertisement

ಮಂಗಳೂರು: ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ಅತಿ ಕಡಿಮೆ ದರದ ಹೆರಿಗೆ ಫ್ಯಾಕೇಜ್ ಘೋಷಣೆ

ಮಂಗಳೂರು: ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕರಾವಳಿ ಜನರಿಗೆ ಶುಭ ಸುದ್ದಿಯನ್ನು ನೀಡಿದ್ದು, ಅತಿ ಕಡಿಮೆ ದರದ ಹೆರಿಗೆ ಫ್ಯಾಕೇಜ್ ಗಳನ್ನು ಘೋಷಿಸಿದೆ.

 

ವಿಶೇಷ ಹೆರಿಗೆ ಫ್ಯಾಕೇಜ್ ನ್ನು ಡಾ.ಕವಿತಾ ಡಿಸೋಝಾ ಅನಾವರಣ ಮಾಡಿದ್ದಾರೆ. ಬಳಿಕ ಮಾತನಾಡಿದ ಡಾ.ಕವಿತಾ ಡಿಸೋಝಾ,ಜನಪ್ರಿಯ ಆಸ್ಪತ್ರೆ ಇವತ್ತು ಮಹಿಳೆಯರಿಗೆ ವಿಶೇಷ ಕೊಡುಗೆ ನೀಡಿದೆ. ಇಂತಹ ಫ್ಯಾಕೇಜ್ ನ್ನು ಮಹಿಳೆಯರು ಸದ್ಭಳಕೆ ಮಾಡಿಕೊಳ್ಳಿ, ಹೆಸರಿನಂತೆ ಜನಪ್ರಿಯ ಆಸ್ಪತ್ರೆ ಜನರಿಗೆ ಪ್ರಿಯವಾದ ಆಸ್ಪತ್ರೆಯಾಗಿ ಹೊರಹೊಮ್ಮಲಿ ಎಂದು ಹಾರೈಸಿದ್ದಾರೆ. ಇದೇ ವೇಳೆ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರು ಮತ್ತು ಖ್ಯಾತ ವೈದ್ಯರಾದ ಡಾ.ಅಬ್ದುಲ್ ಬಶೀರ್ ವಿಕೆ, ಜನಪ್ರಿಯ ಆಸ್ಪತ್ರೆಯ ಸಿಇಒ ಡಾ.ಕಿರಶ್ ಪರ್ತಿಪ್ಪಾಡಿ ಸೇರಿದಂತೆ ಗಣ್ಯರು ಭಾಗವಹಿಸಿದ್ದರು.

ಅತ್ಯಾಧುನಿಕ ಸೌಲಭ್ಯಗಳಿರುವ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈ ವಿಶೇಷ ಫ್ಯಾಕೇಜ್ ಘೋಷಣೆಯಿಂದ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಹೆರಿಗೆ ಸೌಲಭ್ಯ ದೊರೆಯಲಿದ್ದು, ಕಡಿಮೆ ವೆಚ್ಚದಲ್ಲಿ ನೀವು ನಿಮ್ಮ ತಾಯ್ತನದ ಸಂತೋಷವನ್ನು ಆನಂದಿಸಬಹುದಾಗಿದೆ.

ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ25,000ರೂ.ಗೆ ಸಂಪೂರ್ಣವಾಗಿ ಸಹಜ ಹೆರಿಗೆ ಸೌಲಭ್ಯ ಲಭ್ಯವಾಗಲಿದೆ. ನುರಿತ ಪ್ರಸೂತಿ ಮತ್ತು ಸ್ತ್ರೀರೋಗತಜ್ಞರ ಸಮಾಲೋಚನೆ, ಹೆರಿಗೆ ಬಳಿಕ ಆರಾಮದಾಯಕ
ಸುಸಜ್ಜಿತ ಕೊಠಡಿ ವ್ಯವಸ್ಥೆ, ತಾಯಿ ಮತ್ತು ನವಜಾತ ಶಿಶುವಿನ ಆರೈಕೆ,ಔಷಧಿಗಳು ಇದೇ ಫ್ಯಾಕೇಜ್ ನಲ್ಲಿ ಲಭ್ಯವಾಗಲಿದೆ‌.ಇನ್ನು 48,000ರೂ.ಗೆ LSCS ಪ್ಯಾಕೇಜ್ ಕೂಡ ದೊರೆಯಲಿದೆ. ಈ ಫ್ಯಾಕೇಜ್ ನಲ್ಲಿ ನುರಿತ ವೈದ್ಯರಿಂದ ಸಮಾಲೋಚನೆ, ಆಪರೇಷನ್ ಥಿಯೇಟರ್, ಶಸ್ತ್ರಕ್ರಿಯೆ ಬಳಿಕ 4 ದಿನಗಳ ತಾಯಿ- ಮಗುವಿನ ಆರೈಕೆ, ಔಷಧಿಗಳು ಕೂಡ ಲಭ್ಯವಾಗಲಿದೆ.

ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ Birth and Bloom(ಬರ್ತ್ & ಬ್ಲೂಂ) ಎಂಬ ತಾಯಿ ಮತ್ತು ಮಗುವಿನ ಆರೈಕೆ ವಿಶೇಷ ಘಟಕವಿದೆ.ಈ ಘಟಕದಲ್ಲಿ 24 ಗಂಟೆಗಳ ಕಾಲ ಸೇವೆ ಲಭ್ಯವಿರಲಿದೆ. ಸಹಜ ಹೆರಿಗೆ, ಶಸ್ತ್ರಚಿಕಿತ್ಸೆ, ಎನ್ ಐಸಿಯು ಸೌಲಭ್ಯವಿದ್ದು, ತಾಯಿ-ಮಗುವಿನ ಉತ್ತಮ ಹಾರೈಕೆಗೆಂದೆ ಈ ವ್ಯವಸ್ಥೆಯನ್ನು ಮಾಡಲಾಗಿದೆ.ಇನ್ನು ಫ್ಯಾಕೇಜ್ ಕುರಿತು ಹೆಚ್ಚಿನ ವಿವರಗಳಿಗಾಗಿ ಮತ್ತು ನೋಂದಾವಣಿಗಾಗಿ ಕೆಳಗೆ ನೀಡಿರುವ ಆಸ್ಪತ್ರೆಯ ಅಧಿಕೃತ ಸಂಖ್ಯೆಗೆ ಸಂಪರ್ಕಿಸಬೇಕಾಗಿ ಆಸ್ಪತ್ರೆಯು ಪ್ರಕಟಣೆಯಲ್ಲಿ ತಿಳಿಸಿದೆ.

ನೀವು ಸಂಪರ್ಕಿಸಬೇಕಾದ ಸಂಖ್ಯೆ:ph:0824-3500786
Ph:8105547799

Leave a Reply

Your email address will not be published. Required fields are marked *

ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಡಾ. ಮಮತಾ ಪಿ. ಶೆಟ್ಟಿ..!

ಮಂಗಳೂರು: ಮಾಧ್ಯಮ ಮಿತ್ರ ನಾಗರಾಜ್ ಅನಾರೋಗ್ಯದಿಂದ ನಿಧನ

ಆಂಬ್ಯುಲೆನ್ಸ್ ವಾಹನವೊಂದಕ್ಕೆ ಸೈಡ್ ಬಿಡದ ಸ್ಕೂಟರ್ ಸವಾರನ ಬಂಧನ

ಮಂಗಳೂರು: ಝಕರಿಯಾ ಜೋಕಟ್ಟೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ

ಮಂಗಳೂರು: ಸೇತುವೆ ಬಳಿ ನಾಪತ್ತೆಯಾದ ಆಟೋ ಚಾಲಕನ ಶವ ಪತ್ತೆ….!

ಮಂಗಳೂರು: ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ದಂಪತಿಯ ಬಂಧನ..!

ಕಡಬ: ಮದುವೆಯ ವಾಹನ ಪಲ್ಟಿ; 20ಕ್ಕೂ ಅಧಿಕ ಮಂದಿಗೆ ಗಾಯ..!

ಹುಣಸೂರು: ಜಮೀನಿನಲ್ಲಿ ಬಿದ್ದಿದ್ದ ಕರೆಂಟ್ ತಂತಿ ಸ್ಪರ್ಶ, ತಾಯಿ- ಮಗ ಬಲಿ…!

ಬಂಟ್ವಾಳ: ಬಿ.ಸಿ.ರೋಡ್ ನಲ್ಲಿರುವ ಮೆಸ್ಕಾಂ ಭವನದಲ್ಲಿ ಜನಸಂಪರ್ಕ ಸಭೆ..!

error: Content is protected !!