ಮಂಗಳೂರು: ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕರಾವಳಿ ಜನರಿಗೆ ಶುಭ ಸುದ್ದಿಯನ್ನು ನೀಡಿದ್ದು, ಅತಿ ಕಡಿಮೆ ದರದ ಹೆರಿಗೆ ಫ್ಯಾಕೇಜ್ ಗಳನ್ನು ಘೋಷಿಸಿದೆ.
ವಿಶೇಷ ಹೆರಿಗೆ ಫ್ಯಾಕೇಜ್ ನ್ನು ಡಾ.ಕವಿತಾ ಡಿಸೋಝಾ ಅನಾವರಣ ಮಾಡಿದ್ದಾರೆ. ಬಳಿಕ ಮಾತನಾಡಿದ ಡಾ.ಕವಿತಾ ಡಿಸೋಝಾ,ಜನಪ್ರಿಯ ಆಸ್ಪತ್ರೆ ಇವತ್ತು ಮಹಿಳೆಯರಿಗೆ ವಿಶೇಷ ಕೊಡುಗೆ ನೀಡಿದೆ. ಇಂತಹ ಫ್ಯಾಕೇಜ್ ನ್ನು ಮಹಿಳೆಯರು ಸದ್ಭಳಕೆ ಮಾಡಿಕೊಳ್ಳಿ, ಹೆಸರಿನಂತೆ ಜನಪ್ರಿಯ ಆಸ್ಪತ್ರೆ ಜನರಿಗೆ ಪ್ರಿಯವಾದ ಆಸ್ಪತ್ರೆಯಾಗಿ ಹೊರಹೊಮ್ಮಲಿ ಎಂದು ಹಾರೈಸಿದ್ದಾರೆ. ಇದೇ ವೇಳೆ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರು ಮತ್ತು ಖ್ಯಾತ ವೈದ್ಯರಾದ ಡಾ.ಅಬ್ದುಲ್ ಬಶೀರ್ ವಿಕೆ, ಜನಪ್ರಿಯ ಆಸ್ಪತ್ರೆಯ ಸಿಇಒ ಡಾ.ಕಿರಶ್ ಪರ್ತಿಪ್ಪಾಡಿ ಸೇರಿದಂತೆ ಗಣ್ಯರು ಭಾಗವಹಿಸಿದ್ದರು.
ಅತ್ಯಾಧುನಿಕ ಸೌಲಭ್ಯಗಳಿರುವ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈ ವಿಶೇಷ ಫ್ಯಾಕೇಜ್ ಘೋಷಣೆಯಿಂದ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಹೆರಿಗೆ ಸೌಲಭ್ಯ ದೊರೆಯಲಿದ್ದು, ಕಡಿಮೆ ವೆಚ್ಚದಲ್ಲಿ ನೀವು ನಿಮ್ಮ ತಾಯ್ತನದ ಸಂತೋಷವನ್ನು ಆನಂದಿಸಬಹುದಾಗಿದೆ.
ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ25,000ರೂ.ಗೆ ಸಂಪೂರ್ಣವಾಗಿ ಸಹಜ ಹೆರಿಗೆ ಸೌಲಭ್ಯ ಲಭ್ಯವಾಗಲಿದೆ. ನುರಿತ ಪ್ರಸೂತಿ ಮತ್ತು ಸ್ತ್ರೀರೋಗತಜ್ಞರ ಸಮಾಲೋಚನೆ, ಹೆರಿಗೆ ಬಳಿಕ ಆರಾಮದಾಯಕ
ಸುಸಜ್ಜಿತ ಕೊಠಡಿ ವ್ಯವಸ್ಥೆ, ತಾಯಿ ಮತ್ತು ನವಜಾತ ಶಿಶುವಿನ ಆರೈಕೆ,ಔಷಧಿಗಳು ಇದೇ ಫ್ಯಾಕೇಜ್ ನಲ್ಲಿ ಲಭ್ಯವಾಗಲಿದೆ.ಇನ್ನು 48,000ರೂ.ಗೆ LSCS ಪ್ಯಾಕೇಜ್ ಕೂಡ ದೊರೆಯಲಿದೆ. ಈ ಫ್ಯಾಕೇಜ್ ನಲ್ಲಿ ನುರಿತ ವೈದ್ಯರಿಂದ ಸಮಾಲೋಚನೆ, ಆಪರೇಷನ್ ಥಿಯೇಟರ್, ಶಸ್ತ್ರಕ್ರಿಯೆ ಬಳಿಕ 4 ದಿನಗಳ ತಾಯಿ- ಮಗುವಿನ ಆರೈಕೆ, ಔಷಧಿಗಳು ಕೂಡ ಲಭ್ಯವಾಗಲಿದೆ.
ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ Birth and Bloom(ಬರ್ತ್ & ಬ್ಲೂಂ) ಎಂಬ ತಾಯಿ ಮತ್ತು ಮಗುವಿನ ಆರೈಕೆ ವಿಶೇಷ ಘಟಕವಿದೆ.ಈ ಘಟಕದಲ್ಲಿ 24 ಗಂಟೆಗಳ ಕಾಲ ಸೇವೆ ಲಭ್ಯವಿರಲಿದೆ. ಸಹಜ ಹೆರಿಗೆ, ಶಸ್ತ್ರಚಿಕಿತ್ಸೆ, ಎನ್ ಐಸಿಯು ಸೌಲಭ್ಯವಿದ್ದು, ತಾಯಿ-ಮಗುವಿನ ಉತ್ತಮ ಹಾರೈಕೆಗೆಂದೆ ಈ ವ್ಯವಸ್ಥೆಯನ್ನು ಮಾಡಲಾಗಿದೆ.ಇನ್ನು ಫ್ಯಾಕೇಜ್ ಕುರಿತು ಹೆಚ್ಚಿನ ವಿವರಗಳಿಗಾಗಿ ಮತ್ತು ನೋಂದಾವಣಿಗಾಗಿ ಕೆಳಗೆ ನೀಡಿರುವ ಆಸ್ಪತ್ರೆಯ ಅಧಿಕೃತ ಸಂಖ್ಯೆಗೆ ಸಂಪರ್ಕಿಸಬೇಕಾಗಿ ಆಸ್ಪತ್ರೆಯು ಪ್ರಕಟಣೆಯಲ್ಲಿ ತಿಳಿಸಿದೆ.
ನೀವು ಸಂಪರ್ಕಿಸಬೇಕಾದ ಸಂಖ್ಯೆ:ph:0824-3500786
Ph:8105547799
ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲನೋರ್ವ ಕಾಣೆಯಾದ ಘಟನೆ ನಡೆದಿದ್ದು, ನೇತ್ರಾವತಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.…
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಬೊಳ್ಳಾರಿ ನಿವಾಸಿ ಚೆನ್ನಕೇಶವ ಕಾಣೆಯಾದವರಾಗಿದ್ದು, ದೂರುದಾರರ ಪ್ರಕಾರ,…
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಮ್ಮ ಕಚೇರಿಯಲ್ಲಿ ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಯ 2ನೇ…
ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯತಿಗೆ ಎಮ್.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ…
ಐವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಮೇಲ್ಸೇತುವೆಯ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ…
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…