ಜನ ಮನದ ನಾಡಿ ಮಿಡಿತ

Advertisement

ಮುಲ್ಕಿ ಬಂಟರ ಸಂಘದ ಕಟ್ಟಡ ಕಾಮಗಾರಿಯ ನವೀಕರಣಕ್ಕೆ ಚಾಲನೆ

ಮುಲ್ಕಿ ಬಂಟರ ಸಂಘದ ಕಟ್ಟಡ ಕಾಮಗಾರಿಯ ನವೀಕರಣದ ಕಾರ್ಯಕ್ರಮವು ಬೆಳಿಗ್ಗೆ 10:00ಗೆ ಸುಮುಹೂರ್ತದಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಧರ್ಮದರ್ಶಿಗಳಾದ ಹಿರಿಯರಾದ ಮನೋಹರ ಶೆಟ್ಟಿ ಮತ್ತು ಬಂಟ ಸಮಾಜದ ಯುವನೇತಾರ ಬಂಟಕುಲಭವ್ಯಾ0ಶು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರು ಹಾಗೂ ಮುಲ್ಕಿ ಬಂಟರ ಸಂಘದ ಗೌರವಾಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಇವರ ಘನ ಉಪಸ್ಥಿತಿಯಲ್ಲಿ ಅವರ ಅಮೃತ ಹಸ್ತದೊಂದಿಗೆ ಕಟ್ಟಡಕ್ಕೆ ಚಾಲನೆ ನೀಡಲಾಯಿತು.

ಮುಂಬರುವ ವರ್ಷ ಬಂಟರ ಸಂಘಕ್ಕೆ ಶತಮಾನದ ವರ್ಷ. ನಮ್ಮ ಹಿರಿಯರು ಹಾಕಿಕೊಟ್ಟ ಈ ಸಂಘಟನೆಯನ್ನು ಕಿರಿಯ ರಾದ ನಾವು ಉತ್ತಮವಾದ ರೀತಿಯಲ್ಲಿ ಮುಂದುವರೆಸಿಕೊAಡು ಹೋಗಬೇಕು. ಹಿರಿಯರ ಮಾರ್ಗದರ್ಶನಕ್ಕೆ ಅನುಸಾರವಾಗಿ ಮುಂದುವರಿಯಬೇಕು. ಇದಕ್ಕೆ ದೇವರ ಅನುಗ್ರಹವು ಇರುತ್ತದೆ. ನಾವೆಲ್ಲ ಒಂದಾಗಿ ನಮ್ಮ ಸಂಘಟನೆಯನ್ನು ಬಲಪಡಿಸೋಣ. ಕಟ್ಟಡದ ಕಾಮಗಾರಿ ಶೀಘ್ರವಾಗಿ ಪ್ರಗತಿಪತ್ರದಲ್ಲಿ ಸಾಗಿ ಲೋಕಾರ್ಪಣೆಯಾಗಲಿ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟ ಶುಭವನ್ನು ಹಾರೈಸಿದ್ರು. ಮುಂದಿನ ದಿನಗಳಲ್ಲಿ ಬಪ್ಪನಾಡಿನ ದುರ್ಗಾಪರಮೇಶ್ವರಿಯ ಅನುಗ್ರಹದಿಂದ ಶೀಘ್ರವೇ ನಮ್ಮ ಕಟ್ಟಡ ಲೋಕಾರ್ಪಣೆಯಾಗಿ ಸಮಾಜಕ್ಕೆ ಸ್ಪಂದಿಸಲಿ ಎಂದು ಮನೋಹರ ಶೆಟ್ಟಿ ಎಂದ್ರು. ಇನ್ನು ಈ ಸಂದರ್ಭದಲ್ಲಿ ಬಂಟರ ಸಂಘ ಮುಲ್ಕಿ ಇದರ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ, ಕಟ್ಟಡ ಸಮಿತಿಯ ಅಧ್ಯಕ್ಷರಾದ ಸಂತೋಷ್ ಕುಮಾರ್ ಹೆಗ್ಡೆ, ಮಾಜಿ ಅಧ್ಯಕ್ಷರಾದ ಮುರಳಿಧರ ಭಂಡಾರಿ ಹಾಗೂ ಪುರುಷೋತ್ತಮ ಶೆಟ್ಟಿ,
ಕಾರ್ಯದರ್ಶಿ ಸಾಯಿನಾಥ ಶೆಟ್ಟಿ, ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಡಾ. ಮಮತಾ ಪಿ. ಶೆಟ್ಟಿ..!

ಮಂಗಳೂರು: ಮಾಧ್ಯಮ ಮಿತ್ರ ನಾಗರಾಜ್ ಅನಾರೋಗ್ಯದಿಂದ ನಿಧನ

ಆಂಬ್ಯುಲೆನ್ಸ್ ವಾಹನವೊಂದಕ್ಕೆ ಸೈಡ್ ಬಿಡದ ಸ್ಕೂಟರ್ ಸವಾರನ ಬಂಧನ

ಮಂಗಳೂರು: ಝಕರಿಯಾ ಜೋಕಟ್ಟೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ

ಮಂಗಳೂರು: ಸೇತುವೆ ಬಳಿ ನಾಪತ್ತೆಯಾದ ಆಟೋ ಚಾಲಕನ ಶವ ಪತ್ತೆ….!

ಮಂಗಳೂರು: ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ದಂಪತಿಯ ಬಂಧನ..!

ಕಡಬ: ಮದುವೆಯ ವಾಹನ ಪಲ್ಟಿ; 20ಕ್ಕೂ ಅಧಿಕ ಮಂದಿಗೆ ಗಾಯ..!

ಹುಣಸೂರು: ಜಮೀನಿನಲ್ಲಿ ಬಿದ್ದಿದ್ದ ಕರೆಂಟ್ ತಂತಿ ಸ್ಪರ್ಶ, ತಾಯಿ- ಮಗ ಬಲಿ…!

ಬಂಟ್ವಾಳ: ಬಿ.ಸಿ.ರೋಡ್ ನಲ್ಲಿರುವ ಮೆಸ್ಕಾಂ ಭವನದಲ್ಲಿ ಜನಸಂಪರ್ಕ ಸಭೆ..!

error: Content is protected !!