ಮಂಗಳೂರು: ಪಡೀಲ್ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಇತರ ಸಂಘ ಸಂಸ್ಥೆಗಳ ಸಹಕಾರದಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ, ನಮ್ಮ ನಗರ ಸ್ವಚ್ಚ ನಗರ ಅಭಿಯಾನ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರ ಜನಪ್ರಿಯ ಆಸ್ಪತ್ರೆಯಲ್ಲಿ ನಡೆಯಿತು.
ಗಿಔIಅಇ: ಈ ಕಾರ್ಯಕ್ರಮದಲ್ಲಿ ಸಾಧಕರಾದ ನಜೀರ್ ಬೆಂಗ್ರೆ ಮತ್ತು ಜಾರ್ಜ್ ಪಿವಿ ಅವರನ್ನು ಸನ್ಮಾನಿಸಲಾಯಿತು. ಪಡೀಲ್ ಸುತ್ತಮುತ್ತಲಿನಲ್ಲಿ ಡಾ. ಅಬ್ದುಲ್ ಬಶೀರ್ ವಿ.ಕೆ ಅವರ ನೇತೃತ್ವದಲ್ಲಿ ಹೆದ್ದಾರಿಯಲ್ಲಿ ಕಸ ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಛಗೊಳಿಸಲಾಯಿತು. ಜನಪ್ರಿಯ ಫೌಂಡೇಶನ್ ಅಧ್ಯಕ್ಷ ಡಾ. ಅಬ್ದುಲ್ ಬಶೀರ್ ವಿಕೆ ಮಾತನಾಡಿ, ಕನ್ನಡ ನಾಡಿನಲ್ಲಿ ಎಲ್ಲವೂ ನಮಗೆ ದೊರೆತಿದ್ದು, ಕನ್ನಡದ ಬಗ್ಗೆ ಹೆಮ್ಮೆಯಾಗುತ್ತಿದೆ. ಕನ್ನಡ ನಾಡಿನಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದೆ. ಹಾಸನದಲ್ಲಿ ಹಲವು ವರ್ಷಗಳಿಂದ ಕನ್ನಡ ಉಳಿಸಲು ಬೆಳೆಸಲು ಇದೇ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದೀಗ ಮಂಗಳೂರಿನಲ್ಲಿ ಮೊದಲ ಬಾರೀ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದ್ರು.
ಬೈಟ್ : ಡಾ.ಅಬ್ದುಲ್ ಬಶೀರ್ ವಿ.ಕೆ
ಕಾರ್ಪೋಟರ್ ಚಂದ್ರವತಿ ಮಾತನಾಡಿ, ಆರೋಗ್ಯ ಸ್ಚಚ್ಛವಾಗಬೇಕಾದರೆ ಪರಿಸರ ಸ್ವಚ್ಚವಾಗಿಡಬೇಕು, ಹಾಸನದಲ್ಲಿ ಬಶೀರ್ ಅವರ ಸೇವೆ ಶ್ಲಾಘನೀಯ, ಇದೀಗ ಮಂಗಳೂರಿನಲ್ಲಿ ಇನ್ನಷ್ಡು ಸೇವೆ ನೀಡಲು ದೇವರು ಅನುಗ್ರಹಿಸಲಿ ಎಂದು ಶುಭ ಹಾರೈಸಿದ್ರು. ಇದೇ ವೇಳೆ ಹಿದಾಯ ಫೌಂಡೇಶನ್ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು ಮಾತನಾಡಿ ಹಾಸನದಲ್ಲಿ ಜನರ ಜನಮನ ಗೆದ್ದ ಬಶೀರ್ ಅವರು ನಮ್ಮ ಜಿಲ್ಲೆಯ ಜನಮನ ಗೆದ್ದಿದ್ದಾರೆ. ಸ್ವಚ್ಚತೆ ಮೂಲಕ ಆರೋಗ್ಯ ಪೂರ್ಣ ಸಮಾಜ ನಿರ್ಮಾನ ಸಾಧ್ಯ ಎಂದ್ರು.
ಎಂ ಫ್ರೆಂಡ್ಸ್ ಸುಜಾ ಮಹಮ್ಮದ್, ಸಂತೋಷ್ ಶೆಟ್ಟಿ, ಸುರೇಶ್ ಆಚಾರ್, ದೇವಿಪ್ರಸಾದ್, ಶಾಕೀರ್ ಅಳಕೆಮಜಲು, ಅಬ್ದುಲ್ ಜಬ್ಬಾರ್ ಮಾರಿಪಳ್ಳ, ಮಹಮ್ಮದ್ ಶಾಕೀರ್, ಆರೀಫ್ ಪಡುಬಿದ್ರೆ, ಉಮ್ಮರ್ ಫಾರೂಕ್, ನಾಸೀರ್ ಕಂಬಳಬೆಟ್ಟು, ಶಾಕೀರ್ ಅಳಕೆಮಜಲು, ಮಹಮ್ಮದ್ ಕಂಬಳಬೆಟ್ಟು, ಗಫೂರ್ ಕಂಬಳಬೆಟ್ಟು, ಜನಪ್ರಿಯ ಆಸ್ಪತ್ರೆಯ ಸಿಇಓಡಾ. ಕಿರಾಸ್ ಪರ್ತಿಪ್ಪಾಡಿ, ಡಾ.ನೂಮನ್, ನೌಸಿನ್ ಬದ್ರಿಯಾ ಉಪಸ್ಥಿತರಿದ್ರು.
ಪುಟ್ಟಣ ಕುಲಾಲ್ ಪ್ರತಿಷ್ಠಾನ, ಎಂ ಫ್ರೆಂಡ್ಸ್ ಮಂಗಳೂರು, ಶಿವ ಫ್ರೆಂಡ್ಸ್ ಕ್ಲಬ್, ಎಸ್ ವೈ ಎಸ್ ಇಸಾಬ ದ.ಕ , ಹಿದಾಯ ಫೌಂಡೇಶನ್ ಮಂಗಳೂರು,ಕನ್ನಡ ಕಟ್ಟೆ ಮಂಗಳೂರು, ಎಸ್ಕೆಎಸ್ ಎಸ್ ಎಫ್ ವಿಖಾಯ, ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್, ಮಸೂದ್ ಕಾಲೇಜ್ ಆಫ್ ನರ್ಸಿಂಗ್ ಮಂಗಳೂರು ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿತ್ತು. ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಧುಮೇಹ, ರಕ್ತದ ಒತ್ತಡ ಪರೀಕ್ಷೆ, ಶಸ್ತ್ರ ಚಿಕಿತ್ಸ ವೈದ್ಯರು, ಕಿಡ್ನಿ ಮತ್ತು ಮೂತ್ರಕೋಶ ತಙ್ಞರು, ಕೀಲು ಮೂಳೆ ಮತ್ತು ಬೆನ್ನು ಮೂಳೆ ಶಸ್ತ್ರ ಚಿಕಿತ್ಸ ತಙ್ಞರು, ಕಿವಿ,ಮೂಗು ಗಂಟಲು ತಙ್ಞರು, ಪ್ರಸೂತಿ ಸ್ತ್ರೀರೋಗ, ಮಕ್ಕಳ ಮತ್ತು ಕಾಸ್ಮೆಟಿಕ್ ಶಸ್ತ್ರ ಚಿಕಿತ್ಸಾ ತಙ್ಞರು ಭಾಗವಹಿಸಿದ್ದು, ಸಾರ್ವಜನಿಕರು ಪ್ರಯೋಜನ ಪಡೆದುಕೊಂಡಿದ್ದಾರೆ.
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…