ಮುಲ್ಕಿ: ಪೊಲೀಸ್ ಠಾಣಾ ವ್ಯಾಪ್ತಿಯ ಪಕ್ಷಿಕೆರೆಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾರ್ತಿಕ್ ಭಟ್ ತಾಯಿ ಹಾಗೂ ಅಕ್ಕನನ್ನು ಪೊಲೀಸರು ಬಂದಿಸಿದ್ದಾರೆ.

ಶ್ಯಾಮಲಾ ಭಟ್(61) ಹಾಗೂ ಸುರತ್ಕಲ್ ಬಾಳ ನಿವಾಸಿ ಕಣ್ಮಣಿ ರಾವ್(36) ಬಂಧಿತರು. ಇಬ್ಬರ ವಿರುದ್ಧ ಕಾರ್ತಿಕ್ ಭಟ್ ಪತ್ನಿಯ ತಾಯಿ ಸಾವಿತ್ರಿ ನೀಡಿದ ದೂರಿನಂತೆ 308 ಭಾರತೀಯ ನ್ಯಾಯ ಸಂಹಿತೆ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಾಗಿದ್ದು ಇಬ್ಬರನ್ನು ಮುಲ್ಕಿ ಪೊಲೀಸರು ಬಂಧಿಸಿ ಮೂಡಬಿದ್ರೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಳೆದ ದಿನದ ಹಿಂದೆ ಪೊಲೀಸ್ ಠಾಣಾ ವ್ಯಾಪ್ತಿಯ ಪಕ್ಷಿಕೆರೆ ಜಲಜಾಕ್ಷಿ ರೆಸಿಡೆನ್ಸಿ ಬಹು ಮಹಡಿ ಕಟ್ಟಡದಲ್ಲಿ ವಾಸ್ತವ್ಯವಿದ್ದ ಕಾರ್ತಿಕ್ ಭಟ್(32) ಎಂಬಾತನು ತನ್ನ ಪತ್ನಿ ಪ್ರಿಯಾಂಕ(28) ಮಗು ಹೃದಯ್ (4) ಹತ್ಯೆಗೈದು ತಾನೂ ರೈಲಿನಡಿ ತಲೆಕೊಟ್ಟು ಅತ್ಮಹತ್ಯೆ ಮಾಡಿಕೊಂಡಿದ್ದನು
ಬಳಿಕ ನಡೆದ ಮಹತ್ವದ ಬೆಳವಣಿಗೆಯಲ್ಲಿ ಮೃತ ಕಾರ್ತಿಕ್ ಭಟ್ ಡೆತ್ ನೋಟ್ ಪತ್ತೆಯಾಗಿದ್ದು ನಾಲ್ಕು ಪುಟಗಳ ಡೆತ್ ನೋಟ್ ನಲ್ಲಿ ತಾಯಿ ಶ್ಯಾಮಲಾ ಹಾಗೂ ಅಕ್ಕ ಕಣ್ಮಣಿಯನ್ನು ಪ್ರಸ್ತಾಪ ಮಾಡಿ ತಮಗೆ ತೊಂದರೆ ಕೊಟ್ಟಿದ್ದಾರೆ ಎಂದು ಹೇಳಿದ್ದಾನೆ.
ಕಳೆದ ಕೆಲ ವರ್ಷಗಳ ಹಿಂದೆ ಮೃತ ಕಾರ್ತಿಕ್ ಭಟ್ ನ ಅಕ್ಕ ಕಣ್ಮಣಿ ಹಾಗೂ ಬಾವ ಗುರುಪ್ರಸಾದ್ ಭಟ್ ರವರು ಪಕ್ಷಿಕೆರೆಯಲ್ಲಿ ಜಲಜಾಕ್ಷಿ ರೆಸಿಡೆನ್ಸಿ ಗೃಹಪ್ರವೇಶ ಮಾಡಿಸಿದ್ದರು
ಈ ಅಪಾರ್ಟ್ಮೆಂಟ್ ನಲ್ಲಿ ಕಣ್ಮಣಿ ತಮ್ಮ ತಂದೆ ಜನಾರ್ದನ್ ಭಟ್ ಹಾಗೂ ತಾಯಿ ಶ್ಯಾಮಲಾ ಜೊತೆಗೆ ತಮ್ಮ ಕಾರ್ತಿಕ್ ಭಟ್ ಹಾಗೂ ಕುಟುಂಬ ವಾಸವಾಗಿದ್ದರು
ಈ ನಡುವೆ ಕಾರ್ತಿಕ್ ಭಟ್ ವಿದೇಶದ ನೈಜೀರಿಯಾದಲ್ಲಿ ಕೆಲಸ ಮಾಡುತ್ತಿದ್ದು ತಾವು ವಾಸ್ತವ್ಯವಿದ್ದ ಕೋಣೆಯ ಬಾಡಿಗೆಯನ್ನು ಕಳಿಸುತ್ತಿದ್ದ ಎನ್ನಲಾಗಿದೆ. ನೈಜೀರಿಯಾದಲ್ಲಿ ಕೆಲಸ ಬಿಟ್ಟು ಬಂದ ಬಳಿಕ ಕಾರ್ತಿಕ್ ಭಟ್ ಊರಿನಲ್ಲಿ ಸರಿಯಾದ ಕೆಲಸ ಸಿಗದೇ ಆರ್ಥಿಕ ಮುಗ್ಗಟ್ಟಿನಿಂದ ಮತ್ತು ಆನ್ಲೈನ್ ಆಟದಿಂದ ನಷ್ಟ ಅನುಭವಿಸಿದ್ದ.
ಈ ನಡುವೆ ಕಣ್ಮಣಿ ಭಟ್ ರವರು ಕಾರ್ತಿಕ್ ಭಟ್ ಹಾಗೂ ಪತ್ನಿ ಸಮೇತ ಮನೆಯಿಂದ ಹೊರ ಹಾಕುವ ಯತ್ನ ಬಗ್ಗೆ ತಾಯಿ ಜೊತೆ ಪ್ಲಾನ್ ಮಾಡಿದ್ದಳು ಎನ್ನಲಾಗಿದೆ. ಇನ್ನೊಂದು ಮೂಲದ ಪ್ರಕಾರ ಸ್ಥಳೀಯರ ಜೊತೆ ಕಣ್ಮಣಿ ಭಟ್ ಅಪಾರ್ಟ್ಮೆಂಟ್ ಮಾರಾಟ ಮಾಡುವ ಬಗ್ಗೆಯೂ ಹೇಳಿಕೊಂಡಿದ್ದರು ಎನ್ನಲಾಗಿದೆ .
ಇದೆಲ್ಲಾ ಕಿರಿಕಿರಿ ಅನುಭವಿಸಿದ ಕಾರ್ತಿಕ್ ಭಟ್ ಏಕಾಏಕಿ ತನ್ನ ಪತ್ನಿ ಹಾಗೂ ಮಗುವನ್ನು ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಪೊಲೀಸರು ಶಂಕಿಸಿದ್ದು ಡೆತ್ ನೋಟ್ ಆಧಾರದ ಮೇಲೆ ಕಾರ್ತಿಕ್ ಭಟ್ ಹಾಗೂ ಅಕ್ಕನ ಮೇಲೆ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಿಸಿ ಪ್ರಕರಣದ ಬಗ್ಗೆ ಕೂಲಂಕುಶ ತನಿಖೆ ನಡೆಯುತ್ತಿದೆ
ಈ ನಡುವೆ ಒಂದೇ ಮನೆಯ ಒಂದು ಕೊಣೆಯಲ್ಲಿ ಕಾರ್ತಿಕ್ ಪತ್ನಿ ಇದ್ದರೆ ಮತ್ತೊಂದು ಕೊಣೆಯಲ್ಲಿ ಕಾರ್ತಿಕ ತಂದೆ ತಾಯಿ ಇರುತ್ತಿದ್ದರು, ಕಾರ್ತಿಕ್ ಪತ್ನಿ ಮಗು ಶವವಾಗಿ ಬಿದ್ದಿದ್ದರೂ, ಜನಾರ್ಧನ ಭಟ್ ಧಂಪತಿಗಳಿಗೆ ಈ ವಿಷಯ ತಿಳಿದಿರಲಿಲ್ಲ



