ಬಂಟ್ವಾಳ ಪುರಸಭೆಯ ವಾರ್ಡ್ ಸಂಖ್ಯೆ 2 ರ ನಡೆಯುವ ಉಪಚುನಾವಣೆಗೆ ಬಿಜೆಪಿಯಿಂದ ಇಂದ್ರೇಶ್ ಪೂಜಾರಿ ಅವರು ಇಂದು ನಾಮಪತ್ರ ಸಲ್ಲಿಸಿದರು.

ಬಿಜೆಪಿ ಕಾರ್ಯಕರ್ತರೊಂದಿಗೆ ಪುರಸಭೆಗೆ ಆಗಮಿಸಿದ ಆಭ್ಯರ್ಥಿ ಇಂದ್ರೇಶ್ ಅವರು ಬಿಜೆಪಿಯ ಪ್ರಮುಖರಾದ ಎ.ಗೋವಿಂದ ಪ್ರಭು,ಹರಿಕೃಷ್ಣ ಬಂಟ್ವಾಳ, ಗಂಗಾಧರ ಪೂಜಾರಿ, ಸುರೇಶ್ ಕುಲಾಲ್,ಸುದರ್ಶನ ಬಜ, ರಾಮದಾಸ್ ಬಂಟ್ವಾಳ, ದಿನೇಶ್ ಅಮ್ಟೂರು, ದಿನೇಶ್ ಭಂಡಾರಿ, ಜನಾರ್ದನ ಬೊಂಡಾಲ ಅವರ ಜೊತೆ ತೆರಳಿ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು.



