ಕರಾವಳಿ

ನ. 15ರಂದು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ 25 ವರ್ಷಗಳ ಶ್ರೇಷ್ಟತೆ ಕಾರ್ಯಕ್ರಮ

ಫಾದರ್ ಮುಲ್ಲರ್ ಚಾರಿಟೆಬಲ್ ಸಂಸ್ಥೆಯ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಕನಾಡಿಯ -ದರ್ ಮುಲ್ಲರ್ ಮೆಡಿಕಲ್ ಕಾಲೇಜು, ಹೋಮಿಯೋಪಥಿ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ದೇರಳಕಟ್ಟೆ, , ಅಲೈಡ್ ಹೆಲ್ತ್ ಸಾಯನ್ಸ್ ಕಾಲೇಜು ತುಂಬೆಯಲ್ಲಿ ನ. 15ರಿಂದ 23ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ರೆ.-. ರಿಚ್ಚರ್ಡ್ ಕುವೆಲ್ಲೋ ತಿಳಿಸಿದ್ದಾರೆ.

 

ಕಂಕನಾಡಿಯ -ದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರ ಜತೆ ಆಯೋಜಿಸಲಾದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

 

 

 

-ದರ್ ಮುಲ್ಲರ್ ಚಾರಿಟೆಬಲ್ ಸಂಸ್ಥೆಯ ಅಽನದಲ್ಲಿ ಕಂಕನಾಡಿಯಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸೇರಿದಂತೆ ಆರು ವಿಭಾಗಗಳು, ದೇರಳಕಟ್ಟೆ ಹಾಗೂ ತುಂಬೆಯ ಕ್ಯಾಂಪಸ್‌ಗಳಲ್ಲಿ ತಲಾ ೨ರಂತೆ ಒಟ್ಟು ೧೦ ಶಿಕ್ಷಣ ಘಟಕಗಳು ಕಾರ್ಯಾಚರಿಸುತ್ತಿವೆ. ತುಂಬೆಯಲ್ಲಿ ಪ್ರಸಕ್ತ ಸಾಲಿನಿಂದ ಆರಂಭಗೊಂಡಿರುವ ಅಲೈಡ್ ಹೆಲ್ತ್ ಸಾಯನ್ಸ್ ಕಾಲೇಜಿನಲ್ಲಿ ಇಮೇಜಿಂಗ್ ಟೆಕ್ನಾಲಜಿ ಹಾಗೂ ಬಿಎಸ್ಸಿ ಇನ್ ಅನೆಸ್ತೇಶಿಯಾ ಮತ್ತು ಶಸ ಚಿಕಿತ್ಸಾ (ಎಟಿ- ಒಟಿ) ಕೋರ್ಸ್ ಆರಂಭಗೊಳ್ಳಲಿದೆ. ಈಗಾಗಲೇ ಕಾಲೇಜಿಗೆ ವಿದ್ಯಾರ್ಥಿಗಳ ದಾಖಲಾತಿ ನಡೆಯುತ್ತಿದ್ದು, ನೂತನ ಪ್ರಾಂಶುಪಾಲರಾಗಿ ಪ್ರೊ. ಶಿವಶಂಕರ್ ಅವರು ಅಽಕಾರ ವಹಿಸಲಿದ್ದಾರೆ. -ದರ್ ಮುಲ್ಲರ್ ಚಾರಿಟೆಬಲ್ ಸಂಸ್ಥೆಯ ವಿವಿಧ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಸಕ್ತ ೩೫೦೦ರಷ್ಟು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ೩೦೦೦ ಸಿಬ್ಬಂದಿ ವರ್ಗದವರಿದ್ದಾರೆ ಎಂದು ಅವರು ಹೇಳಿದು.

ನ. ೧೫ರಂದು ೨೫ ವರ್ಷಗಳ ಶ್ರೇಷ್ಟತೆ ಕಾರ್ಯಕ್ರಮ

ಕಂಕನಾಡಿಯ -ದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ೨೫ ವರ್ಷಗಳ ಶ್ರೇಷ್ಟತೆಯ ಕಾರ್ಯಕ್ರಮ ನ. ೧೫ರಂದು ಸಂಜೆ ೫.೩೦ಕ್ಕೆ ಸಂಸ್ಥೆ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯಲಿದೆ.

ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್, ಮೈಸೂರು ಡಯಾಸಿಸ್‌ನ ಅಪೊಸ್ಟೊಲಿಕ್ ಆಡಳಿತಾಽಕಾರಿ ರೆ.-. ಡಾ. ಬೆರ್ನಾಡ್ ಮೊರಾಸ್, -ದರ್ ಮುಲ್ಲರ್ ಚಾರಿಟೆಲ್ ಸಂಸ್ಥೆಯ ಮಾಜಿ ನಿರ್ದೇಶಕ ರೆ.ಡಾ. ಅಲೋಶಿಯಸ್ ಪೌಲ್ ಡಿಸೋಜಾ ಭಾಗವಹಿಸಲಿದ್ದು, ಮಂಗಳೂರು ಬಿಷಪ್ ರೆ.ಡಾ. ಅಲೋಶಿಯಸ್ ಪೌಲ್ ಡಿಸೋಜಾ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು -ದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತಾಽಕಾರಿ ರೆ.-. ಅಜಿತ್ ಮಿನೇಜಸ್ ತಿಳಿಸಿದರು.

ಕಾರ್ಯಕ್ರಮದಲ್ಲಿ ವೈದ್ಯಕೀಯ ಕಾಲೇಜಿನ ಇತಿಹಾಸದ ಬಗ್ಗೆ ಬೆಳಕು ಚೆಲ್ಲುವ ‘ಟಾರ್ಚ್ ಬೈ ಏಂಜಲ್ಸ್’ ಎಂಬ ಕೃತಿ ಬಿಡುಗಡೆಗೊಳ್ಳಲಿದೆ. ಇದೇ ವೇಳೆ ಸಂಸ್ಥೆಯಲ್ಲಿ ೨೫ ವರ್ಷಗಳಿಂದ ಸೇವೆ ಸಲ್ಲಿಸಿದ ವೈದ್ಯರು ಹಾಗೂ ಇತರ ಸಿಬ್ಬಂದಿ ವರ್ಗದವರಿಗೆ ಸನ್ಮಾನ ನೆರವೇರಲಿದೆ. ಸಂಸ್ಥೆಯಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಧರ್ಮಗುರುಗಳನ್ನು ಗೌರವಿಸಲಾಗುವುದು ಎಂದು ಅವರು ಹೇಳಿದರು.

ನ.೨೧-೨೨: ‘ರುಬಿಕಾನ್ ೨೦೨೪’ ಸಮ್ಮೇಳನ

ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ೪೦ ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ೨೭ನೆ ವಾರ್ಷಿಕ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ ‘ರುಬಿಕಾನ್ ೨೦೨೪’ ನ. ೨೧ ಮತ್ತು ೨೨ರಂದು ಕಂಕನಾಡಿಯ -. ಮುಲ್ಲರ್ ಕನ್ವೆನ್ಶನ್ ಸೆಂಟರ್‌ನಲ್ಲಿ ಆಯೋಜಿಸಲಾಗಿದೆ ಎಂದು ದೇರಳಕಟ್ಟೆಯ -ದರ್ ಮ್ಲುರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ನಿಯೋಜಿತ ನಿರ್ದೇಶಕ ಹಾಗೂ ಆಡಳಿತಾಽಕಾರಿ ವಂ. ಪೌಸ್ತಿನ್ ಎಲ್. ಲೋಬೋ ವಿವರ ನೀಡಿದರು.

ನ. ೨೧ರಂದು ಬೆಳಗ್ಗೆ ೯.೩೦ಕ್ಕೆ ರಾಜ್ಯದ ಆರೋಗ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟನೆ ನೆರವೇರಿಸಲಿದ್ದಾರೆ. ರಾಷ್ಟ್ರೀಯ ಹೋಮಿಯೋಪಥಿ ಆಯೋಗದ ಅಧ್ಯಕ್ಷ ಡಾ. ಅನಿಲ್ ಖುರಾನಾ, ಹೋಮಿಯೋಪಥಿ ಶಿಕ್ಷಣ ಮಂಡಳಿಯ ಡಾ. ತಾರಕೇಶ್ವರ್ ಜೈನ್ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಮಂಗಳವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಸಮ್ಮೇಳನದಲ್ಲಿ ೧೦೦೦ಕ್ಕೂ ಅಽಕ ಪ್ರತಿನಿಽಗಳು ಭಾಗವಹಿಸಲಿದ್ದಾರೆ. ಇದೇ ವೇಳೆ ಹೋಮಿಯೋಪಥಿ ಕಾಲೇಜಿನ ಹಳೆ ವಿದ್ಯಾರ್ಥಿಗಳ ಮಿಲನ್ ೫ ಕಾರ್ಯಕ್ರಮ ನ. ೨೩ರಂದು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

ಹೋಮಿಯೋಪಥಿ ಮಹಾವಿದ್ಯಾಲಯ ೧೯೮೫ರಿಂದ ಕಾರ್ಯಾಚರಿಸುತ್ತಿದ್ದು, ರಾಜೀವ್ ಗಾಂಽ ಆರೋಗ್ಯ ವಿಜ್ಞಾನ ವಿವಿಯಿಂದ ಗುರುತಿಸಲ್ಪಟ್ಟಿದೆ. ಹೋಮಿಯೋಪಥಿ ರಾಷ್ಟ್ರೀಯ ಪರಿಷತ್ತು ಮತ್ತು ಆಯುಷ್ ಇಲಾಖೆಯಿಂದ ಮಾನ್ಯತೆ ಪಡೆದಿದ್ದು, ೭೫ ಹಾಸಿಗೆಗಳ ಒಳರೋಗಿ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಚಿಕಿತ್ಸೆತೆಯನ್ನು ಒದಗಿಸಲಾಗುತ್ತಿದೆ. ವೈದ್ಯಕೀಯ ಪದವಿಯಲ್ಲಿ ೧೦೦ ಸೀಟುಗಳು ಹಾಗೂ ಸ್ನಾತಕೋತ್ತರ ಪದವಿಯ ೭ ವಿಭಾಗಗಳಲ್ಲಿ ೪೮ ಸೀಟುಗಳ ಪರವಾನಿಗೆಯೊಂದಿಗೆ ದೇರಳಕಟ್ಟೆಯಲ್ಲಿ ಅತ್ಯಾಧುನಿಕ ಹಾಗೂ ಪರಿಪೂರ್ಣ ಸೌಲಭ್ಯಗಳೊಂದಿಗೆ ವಿದ್ಯಾರ್ಥಿಗಳಿಗೆ ಜ್ಞಾನ ಆರೈಕೆ ಮತ್ತು ಕಲಿಕಾ ಆರೈಕೆಯ ತರಬೇತಿ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.

೧೬ರಂದು ಹೋಮಿಯೋಪತಿ -ರ್ಮಾಸುಟಿಕಲ್ ವಿಭಾಗದ ೨೦ನೆ ವರ್ಷಾಚರಣೆ

ದೇರಳಕಟ್ಟೆಯ -ದರ್ ಮುಲ್ಲರ್ ಹೋಮಿಯೋಪತಿ -ರ್ಮಾಸುಟಿಕಲ್ ವಿಭಾಗದ ೨೦ನೆ ವರ್ಷಾಚರಣೆ ನ. ೧೬ರಂದು ಬೆಳಗ್ಗೆ ೧೦ ಗಂಟೆಗೆ ದೇರಳಕಟ್ಟೆಯ ಸಂಸ್ಥೆಯ ಸಭಾಂಗಣದಲ್ಲಿ ನಡೆಯಲಿದೆ ಎಂದು ರೆ.-. ನೆಲ್ಸನ್ ತಿಳಿಸಿದರು.

೧೮ರಂದು ತುಂಬೆ ಅಲೈಡ್ ಹೆಲ್ತ್ ಸಾಯನ್ಸ್ ಕಾಲೇಜು ಉದ್ಘಾಟನೆ

ತುಂಬೆಯ -ದರ್ ಮುಲ್ಲರ್ ಶಿಕ್ಷಣ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಆರಂಭಗೊಂಡಿರುವ ಅಲೈಡ್ ಹೆಲ್ತ್ ಸಾಯನ್ಸ್ ಕಾಲೇಜು ನ. ೧೮ರಂದು ಉದ್ಘಾಟನೆಗೊಳ್ಳಲಿದೆ. ಇಮೇಜಿಂಗ್ ಟೆಕ್ನಾಲಜಿ ಹಾಗೂ ಬಿಎಸ್ಸಿ ಇನ್ ಎಟಿ ಮತ್ತು ಒಟಿ ಕೋರ್ಸ್‌ಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದ್ದು, ನ. ೩೦ರವರೆಗೆ ಆಸಕ್ತ ಅರ್ಹ ವಿದ್ಯಾರ್ಥಿಗಳಿಗೆ ಸೇರ್ಪಡೆಗೆ ಅವಕಾಶವಿದೆ ಎಂದು ಕಾಲೇಜಿನ ನೂತನ ಪ್ರಾಂಶುಪಾಲ ಪ್ರೊ. ಶಿವಶಂಕರ್ ತಿಳಿಸಿದರು.

ಗೋಷ್ಟಿಯಲ್ಲಿ ಸಂಸ್ಥೆಯ ವಿವಿಧ ವಿಭಾಗಗಳ ಪ್ರಮುಖರಾದ ಡಾ. ಇ.ಎಸ್.ಜೆ. ಪ್ರಭು ಕಿರಣ್, ಡಾ. ವಿಲ್ಮಾ ಮೀರಾ ಡಿಸೋಜಾ, ಡಾ. ಗಿರೀಶ್ ನಾವಡ, ಡಾ. ರಂಜನ್ ಸಿ. ಬ್ರಿಟ್ಟೋ, ಡಾ. ಅನುಷ ಜಿ. ಸನಿಲ್, -. ಅಜಿತ್ ಪಿ. ಲೋಬೋ, -. ಜಾರ್ಜ್ ಸಿಕ್ವೇರಾ, -. ಡೊನಾಲ್ಡ್, ಡಾ. ಆಂಟನಿ, ಡಾ. ವೆಂಕಟೇಶ್, ಡಾ. ಉದಯ ಕುಮಾರ್, ಡಾ. ಧನ್ಯಾ ದೇವಸ್ಯ, ಪ್ರೊ. ಸಿಂತಿಯಾ, ಪ್ರೊ. ಚರಿಷ್ಮಾ, ಭ. ನ್ಯಾನ್ಸಿ,-ರ್‌ವಿಂಡ್ಸ್‌ನ ಇಲಿಯಾಸ್ -ರ್ನಾಂಡಿಸ್ ಉಪಸ್ಥಿತರಿದ್ದರು.

-ದರ್ ಮುಲ್ಲರ್ ವೈದ್ಯಕೀಯ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಽಕಾರಿ ಡಾ. ಕೆಲ್ವಿನ್ ಪಾಯಸ್ ಪತ್ರಿಕಾಗೋಷ್ಟಿಯನ್ನು ನಿರ್ವಹಿಸಿದರು.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಉಡುಪಿ: ತುಳುನಾಡಿಗೆ ಕಯ್ಯಾರ ಕಿಞ್ಞಣ್ಣ ರೈ ಕೊಡುಗೆ ಅಪಾರ: ಜಯಕರ ಶೆಟ್ಟಿ

ತುಳುನಾಡಿನ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಕಯ್ಯಾರ ಕಿಞ್ಞಣ್ಣ ರೈ ಅವರ ಕೊಡುಗೆ ಅಪಾರವಾಗಿದ್ದು, ಅವರನ್ನು ಈ ನಾಡಿನ…

2 days ago

ಮಂಗಳೂರು: ಮಂಗಳೂರು ಪತ್ರಕರ್ತ ಸುರೇಶ್ ಡಿ. ಪಳ್ಳಿಗೆ ನಾರದ ಪುರಸ್ಕಾರ ಘೋಷಣೆ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಾರಣಗಿರಿ ಗ್ರಾಮ ಭಾರತಿ ಟ್ರಸ್ಟ್ ಹಾಗೂ ಕಲಾದರ್ಶನ ಮಾಸಪತ್ರಿಕೆ ಆಶ್ರಯದಲ್ಲಿ ಪ್ರಥಮ ಸುದ್ದಿ ವಾಹಕ…

2 days ago

ರಾಷ್ಟ್ರ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಸನ್ಮಾನ…!

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪೋಷಕ ನಟಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಕಾಸರಗೋಡು ವರ್ಕಾಡಿ ಮೂಲದ ರೂಪಶ್ರೀ ವರ್ಕಾಡಿ…

3 days ago

ಬಿಜೆಪಿ ರಾಷ್ಟ್ರೀಯ ವಕ್ತಾರ ಹುದ್ದೆಗೆ ಪೂನಾವಾಲಾ ಗುಡ್‌ಬೈ?…

ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ತಮ್ಮ ಹುದ್ದೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನುವ…

3 days ago

ಚಿನ್ನದ ದರದಲ್ಲಿ ಬದಲಾವಣೆ; ಹೊಸ ಬೆಲೆ ಪ್ರಕಟ…!

ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. ಶುಕ್ರವಾರ ಚಿನ್ನದ ಬೆಲೆ ಪ್ರತಿ ಗ್ರಾಂಗೆ 25 ರೂಪಾಯಿ ಏರಿಕೆಯಾದರೂ,…

3 days ago

ತುಮಕೂರು: ಪೊಲೀಸ್ ಪುತ್ರನೇ ಹೈಡ್ರೋ ಗಾಂಜಾ ಜಾಲದ ರೂವಾರಿ..!

ತುಮಕೂರಿನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುತ್ತಿದ್ದ ಪೊಲೀಸ್ ಸಿಬ್ಬಂದಿಯ ಪುತ್ರನೇ ಹೈಡ್ರೋ ಗಾಂಜಾ…

3 days ago