ರಾಷ್ಟ್ರೀಯ ಹೆದ್ದಾರಿ 75ರ ಮೆಲ್ಕಾರಿನ ಸಮೀಪ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ಅದರಲ್ಲಿ ಸಿಲುಕಿಕೊಂಡ ಪ್ರಯಾಣಿಕರು ಮಾಹಿತಿ ನೀಡಿದ್ದಾರೆ. ಸಂಜೆ 4.15ರ ಬಳಿಕ ಸುಮಾರು ಅರ್ಧ ಗಂಟೆ ವಾಹನಗಳು ನಿಂತಲ್ಲೆ ಇವೆ. ಕೆಲ ಬಸ್ಸುಗಳು ಶಂಭೂರು ದಾಸಕೋಡಿ ಮಾರ್ಗದಲ್ಲಿ ಸಂಚರಿಸಿವೆ.

ಚತುಷ್ಪತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುವ ಸುತ್ತಿದ್ದು , ಇಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಮಾಮೂಲಿಯಾಗಿದೆ.
ಕೆಲವು ಕಡೆಗಳಲ್ಲಿ ವಾಹನಗಳು ಏಕಮುಖ ಸಂಚಾರವಾದರೆ ಇನ್ನು ಕೆಲವು ಕಡೆಗಳಲ್ಲಿ ದ್ವಿಪಥವಾಗಿದೆಯಾದರೂ ಅಲಲ್ಲಿ ಕಾಮಗಾರಿಯ ಘನಗಾತ್ರದ ವಾಹನಗಳಿಂದ ಸಂಚಾರಕ್ಕೆ ಕೆಲವೊಮ್ಮೆ ಅಡಚಣೆ ಉಂಟಾಗುತ್ತಿದೆ.
ಇನ್ನು ಕೆಲವು ಕಡೆಗಳಲ್ಲಿ ವಾಹನಗಳು ಕೆಟ್ಟು ನಿಂತಾಗ ಕೂಡ ಇಂತಹುದೇ ಸಮಸ್ಯೆಗಳು ಕಾಡುತ್ತಿದೆ.ಅಂತೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಗಿಯುವವರೆಗೆ ಸಮಸ್ಯೆ ತಪ್ಪಿದ್ದಲ್ಲ..



