ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ನಿವೃತ್ತ ಮುಖ್ಯೋಪಾಧ್ಯಾಯ,ಪ್ರಖರ ವಾಗ್ಮಿ, ಚಲಿಸುವ ಜ್ಞಾನ ಕೋಶ. ಹಿರಿಯಡಕ, ಕುದಿ ವಸಂತ ಶೆಟ್ಟಿಯವರು ನವೆಂಬರ್ 11 ರಂದು ವಿಧಿವಶರಾಗಿದ್ದು, ಅಗಲಿದ ದಿವ್ಯ ಚೇತನವನ್ನು ಸ್ಮರಿಸಿ, ಸಂತಾಪ ಸೂಚಕ ಸಭೆಯು ನ.13 ಬುಧವಾರ, ಹಿರಿಯಡಕ ಬಂಟರ ಸಂಘ (ರಿ.) ಹಿರಿಯಡಕ ಇದರ ಅಧ್ಯಕ್ಷರಾದ ಶ್ರೀ ನಿತೀಶ್ ಕುಮಾರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಹಿರಿಯಡಕ ಸುರಭಿ ಸಭಾಭವನದಲ್ಲಿ ನಡೆಯಿತು.

ಸ್ಥಾಪಕ ಅಧ್ಯಕ್ಷರಾದ ವಿಶ್ವನಾಥ ರೈಯವರು ಮಾತನಾಡಿ ನಮ್ಮ ಸಂಘದ ಹಿರಿಯ ಮಾರ್ಗದರ್ಶಕರು, ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ವ್ಯಕ್ತಿ, ಕುದಿ ವಿಷ್ಣುಮೂರ್ತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ವ್ರತ್ತಿ ಜೀವನ ಆರಂಭಿಸಿ, ಸುಧೀರ್ಘ ಸೇವೆಯೊಂದಿಗೆ ಮುಖ್ಯೋಪಾಧ್ಯಾಯರಾಗಿಯೇ ವ್ರತ್ತಿಯಿಂದ ನಿವ್ರತ್ತರಾದ ಅಪರೂಪದಲ್ಲಿ ಅಪರೂಪದ ವ್ಯಕ್ತಿ.ತನ್ನ ವ್ರತ್ತಿ ಜೀವನದ ಸಾಧನೆಗಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡ ಅಸಾಧಾರಣ ಸಾಧಕ. ತುಳುನಾಡ ಆಚಾರ ವಿಚಾರ, ಕಲೆ, ಸಂಸ್ಕ್ರತಿಯ ಬಗ್ಗೆ ಅಪಾರ ಜ್ಞಾನ ಹೊಂದಿದ, ಧಾರ್ಮಿಕ ವಿಚಾರಗಳಲ್ಲಿ ಅದ್ಬುತವಾಗಿ ಮಾತನಾಡಬಲ್ಲ ವಾಗ್ಮಿ. ಇಂತಾ ಅಮೂಲ್ಯ ರತ್ನವನ್ನು ನಾವು ಕಳೆದುಕೊಂಡಿದ್ದೇವೆ.ಬಹುಮುಖ ವ್ಯಕ್ತಿತ್ವದ ಸದ್ಗುಣ ಸಂಪನ್ನ, ಚಿಂತಕ,ಕುದಿ ವಸಂತ ಶೆಟ್ಟಿಯರಿಂದು ನಮ್ಮೊಂದಿಗಿಲ್ಲ ಅನ್ನುವುದನ್ನು ನಂಬಲಾಗುತ್ತಿಲ್ಲ. ಎಂದರು
ಹಿರಿಯಡಕ ಬಂಟರ ಸಂಘದ ಅಧ್ಯಕ್ಷರಾದ ನಿತೀಶ್ ಕೂಮಾರ್ ಶೆಟ್ಟಿಯವರು ಮಾತಾಡಿ ನಮ್ಮ ಸಂಘದ ಮಾರ್ಗದರ್ಶಕರು, ಸಂಘದ ಎಲ್ಲಾ ಚಟುವಟಿಕೆಗಳಿಗೂ ಬೆನ್ನೆಲುಬಾಗಿ ನಿಂತವರು ಸಮಸ್ಯೆಗಳನ್ನು ನಯವಾಗಿ ಬಗೆಹರಿಸಿ ಎಲ್ಲರನ್ನೂ ಪ್ರೀತಿಯಿಂದ ಕಂಡ ಅದಮ್ಯ ಚೇತನ, ಎಲ್ಲದಕ್ಕೂ ಆದಾರವಾಗಿದ್ದ ಆ ಮೇರು ವ್ಯಕ್ತಿತ್ವ ಇನ್ನು ನೆನಪು ಮಾತ್ರಾ ಎನ್ನುತ್ತಾ ಭಾವುಕರಾದರು.
ಇನ್ನೂ ಅನೇಕರು ಮಾತಾಡಿದರು ಅಗಲಿದ ದಿವ್ಯಾತ್ಮಕ್ಕೆ ಭಗವಂತನು ಸದ್ಗತಿಯನ್ನು, ಚಿರ ಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತಾ
ವೇದಿಕೆಯಲ್ಲಿದ್ದ ಗಣ್ಯರೆಲ್ಲರೂ ಕುದಿ ವಸಂತ ಶೆಟ್ಟಿಯವರ ಜೊತೆ ಕಳೆದ ಅಮೂಲ್ಯ ದಿನಗಳನ್ನು ನೆನೆದು ಕಂಬನಿ ತುಂಬಿ ಸಂತಾಪ ಸೂಚಿಸಿದರು.



