ಪುಂಜಾಲಕಟ್ಟೆ : ಇಲ್ಲಿನ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಇದರ ೪೦ನೇ ವರ್ಷದ ಪ್ರಯುಕ್ತ ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ನ.೧೬ ಮತ್ತು ನ.೧೭ರಂದು ಪುಂಜಾಲಕಟ್ಟೆ ಬಂಗ್ಲೆ ಮೈದಾನದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಅಂತಾರಾಜ್ಯ ಮಟ್ಟದ ಸ್ವಸ್ತಿಕ್ ಇಂಡಿಯಾ ಕಪ್ ಗೋಲ್ಡ್ ಮೆಡಲ್ ಕಬಡ್ಡಿ ಉತ್ಸವ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಬೆಳಗ್ಗೆ ವಿವಿಧೆಡೆಯಿಂದ ಮೆರವಣಿಗೆಯಲ್ಲಿ ಆಗಮಿಸಿದ ಸ್ವಸ್ತಿಕ್ ಕ್ರೀಡಾ ಜ್ಯೋತಿಯನ್ನು ದಿ.ಸತೀಶ್ ಶೆಟ್ಟಿ ಕುರ್ಡುಮೆ ವೇದಿಕೆಯಲ್ಲಿ ನವದೆಹಲಿ ಅನಾರೋಖ್ ಪ್ರೈ.ಲಿ.ಸಂಸ್ಥೆಯ ವೈಸ್ ಚೆಯರ್‌ಮೆನ್ ಸಂತೋಷ್ ಜೆ.ಪಿ.ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ದಾಖಲೆಯ ೪೦ ವರ್ಷಗಳಿಂದ ಗ್ರಾಮೀಣ ಕ್ರೀಡೆಯಾದ ಕಬಡ್ಡಿಗೆ, ಕಬಡ್ಡಿ ಆಟಗಾರರಿಗೆ ಪ್ರೋತ್ಸಾಹ ನೀಡುತ್ತಿರುವ ತುಂಗಪ್ಪ ಬಂಗೇರ ಮತ್ತು ಕ್ಲಬ್ ಅಭಿನಂದನೀಯರು ಎಂದರು.

ಬಂಟ್ವಾಳ ಉದ್ಯಮಿ ಮಂಜುನಾಥ ಆಚಾರ್ಯ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕ್ಲಬ್ ಸ್ಥಾಪಕಾಧ್ಯಕ್ಷ, ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬೇಬಿ ಅರುಷಿ ಕ್ರೀಡಾಂಗಣ ಉದ್ಘಾಟಿಸಿದರು.
ಪಂದ್ಯಾಟದ ಪೋಷಕ ಸುಂದರ್ ರಾಜ್ ಹೆಗ್ಡೆ ಮುಂಬ,ರಶ್ಮಿ ಸುಂದರ ರಾಜ್, ಉದ್ಯಮಿ ಶೇಖರ ಪೂಜಾರಿ ಅಗಲ್ದೋಡಿ, ಪಿಲಾತಬೆಟ್ಟು ಪ್ರಾ.ಕೃ.ಸ.ಸಂಘದ ಉಪಾಧ್ಯಕ್ಷ ರವಿಶಂಕರ ಹೊಳ್ಳ, ನಿರ್ದೇಶಕ ಸುಂದರ ನಾಯ್ಕ, ದ.ಕ.ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಶ್ವೇತಾ, ಬಿಜೆಪಿ ಪ್ರಮುಖ ಸಾಕ್ಷಾತ್ ಶೆಟ್ಟಿ, ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಧ್ಯಕ್ಷ ಪ್ರವೀಣ ಶೆಟ್ಟಿ ಕುರ್ಡುಮೆ,ಬ್ರಹ್ಮಶ್ರೀ ನಾರಾಯಣ ಗುರು ವಸತಿ ಶಾಲೆಯ ಪ್ರಾಂಶುಪಾಲ ಸಂತೋಷ್ ಸನಿಲ್,ಪಿಲಾತಬೆಟ್ಟು ಗ್ರಾ.ಪಂ.ಮಾಜಿ ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ, ಕಜೆಕಾರು ಗ್ರಾ.ಪಂ.ಅಧ್ಯಕ್ಷ ದೇವದಾಸ ಅಬುರ, ಮಡಂತ್ಯಾರು ಗ್ರಾ.ಪಂ.ಸದಸ್ಯ ಹನೀಫ್, ಪುಂಜಾಲಕಟ್ಟೆ ಕೆಪಿಎಸ್ ಶಾಲಾಭಿವೃದ್ಧಿ ಸಮಿತಿ ಸದಸ್ಯ ದಿವಾಕರ ಶೆಟ್ಟಿ ಕಂಗಿತ್ಲು, ಕಬಡ್ಡಿ ತರಬೇತುದಾರ ಆಸಿಫ್, ಸತೀಶ್ ವಾಮದಪದವು, ಕಬಡ್ಡಿ ಎಸೋಸಿಯೇಷನ್ ಸಂಘಟನಾ ಕಾರ್ಯದರ್ಶಿ ಹಕೀಂ,ಮಂಜಲಪಲ್ಕೆ ಜೈ ಹನುಮಾನ್ ಸಂಘದ ಸಾತ್ವಿಕ್ ಗೌಡ, ಅಕ್ಷತ್, ಆತ್ಮಿಕ್, ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ಲಾ ಪಿ., ಕಾರ್ಯದರ್ಶಿ ಜಯರಾಜ ಅತ್ತಾಜೆ, ಸಂಚಾಲಕ ರಾಜೇಶ್ ಪಿ.ಬಂಗೇರ,ಸಹ ಸಂಚಾಲಕ ಅಬ್ದುಲ್ ಹಮೀದ್, ಮಾಜಿ ಅಧ್ಯಕ್ಷ ಮಾಧವ ಬಂಗೇರ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹೋಟೆಲ್ ಮತ್ತು ಬೀಡಿ ಕಾರ್ಮಿಕರನ್ನು ಗುರುತಿಸಿ ಸಮ್ಮಾನಿಸಲಾಯಿತು.
ಪ್ರಭಾಕರ ಪಿ.ಎಂ.ಸ್ವಾಗತಿಸಿದರು. ರಂಗ ಕಲಾವಿದ ಎಚ್ಕೇ ನಯನಾಡು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪ್ರಾಥಮಿಕ ಶಾಲಾ ಬಾಲಕ, ಬಾಲಕಿಯರ ವಿಭಾಗ ,ದ.ಕ.ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಕಬಡ್ಡಿ ಪಂದ್ಯಾಟ ನಡೆಯಿತು.



