ಜಿಲ್ಲಾ ಪಂಚಾಯಿತಿ ಮೈಸೂರು , ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮೈಸೂರು, ಉಪ ವಿಭಾಗ ಕೆಆರ್ ನಗರ ಹಾಗೂ ಭಗೀರಥ ಸಂಸ್ಥೆಯ ಸಹಯೋಗದೊಂದಿಗೆ ತಿಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಪ್ಪೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಲ ಜೀವನ್ ಮಿಷನ್ ಯೋಜನೆ ಅಡಿ ಮಕ್ಕಳಿಗೆ ಜಲ ಸಾಕ್ಷರತೆಯನ್ನು ಮೂಡಿಸುವ ಸಲುವಾಗಿ ನೀರು ಮತ್ತೆ ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಚಿತ್ರಕಲಾ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿ ಬಹುಮಾನ ವಿತರಣೆ ಮಾಡಲಾಯಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಲ ಜೀವನ್ ಮಿಷನ್ ಯೋಜನೆಯ ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ಚೇತನ್ ಕುಮಾರ್ ರವರು ಮುಂದಿನ ಪೀಳಿಗೆಗೆ ಶುದ್ಧ ಸುರಕ್ಷಿತ ನೀರನ್ನು ಉಳಿಸಬೇಕಾದ ಜವಾಬ್ದಾರಿ ನಮ್ಮ ಎಲ್ಲರ ಮೇಲಿದೆ ಆದ್ದರಿಂದ ನಾವುಗಳು ನಮ್ಮ ಮನೆಗಳಲ್ಲಿ ನೀರನ್ನು ಅತಿ ಹೆಚ್ಚು ಪೋಲು ಮಾಡಬಾರದು ಹಾಗೂ ನೀರಿನ ಮೂಲಗಳ ಸುತ್ತ ತಿಪ್ಪೆ ಗುಂಡಿಗಳನ್ನು ಹಾಕಬಾರದು ಇದರ ಬಗ್ಗೆ ನಿಮ್ಮ ಪೋಷಕರಿಗೆ ನೀವುಗಳು ಮನವರಿಕೆ ಮಾಡಿಕೊಡಬೇಕು, ನೀವುಗಳು ಶಾಲಾ ಹಂತದಲ್ಲೇ ನೀರಿನ ಸಂರಕ್ಷಣೆ, ವೈಯಕ್ತಿಕ ಸ್ವಚ್ಛತೆ, ಹಾಗೂ ಪರಿಸರ ಸಂರಕ್ಷಣೆಯ ಕಡೆ ಹೆಚ್ಚು ಗಮನಹರಿಸಿ ಉತ್ತಮ ವಾತಾವರಣ ನಿರ್ಮಾಣಕ್ಕೆ ಕಂಕಣ ಬುದ್ಧರಾಗಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ತಿಪ್ಪೂರು ಗ್ರಾಮ ಪಂಚಾಯಿತಿ ನೀರು ಮತ್ತು ನೈರ್ಮಲ್ಯ ಸಮಿತಿ ಅಧ್ಯಕ್ಷರಾದ ಶ್ರೀ ಸತ್ಯನಾರಾಯಣ , ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶ್ರೀಮತಿ ಮಂಗಳ, ತಾಂತ್ರಿಕ ಸಮಾಲೋಚಕರಾದ ಯಶವಂತ್, ISA ಜಿಲ್ಲಾ ತಂಡದ ನಾಯಕರಾದ ಮಹೇಶ್ ಎಚ್ ಪಿ, ಶಾಲ ಮುಖ್ಯ ಶಿಕ್ಷಕರಾದ ಶ್ರೀಮತಿ ಸುಜಾತ, SDMC ಅಧ್ಯಕ್ಷರಾದ ಕೃಷ್ಣೇಗೌಡ , ತಾಲ್ಲೂಕು ಸಂಯೋಜಕರಾದ ಸುನಿಲ್ ಕುಮಾರ್ ಹಾಗೂ ಭಗೀರಥ ಸಂಸ್ಥೆಯ ನಾಗೇಶ್ ಹಾಜರಿದ್ದರು



