ಜನ ಮನದ ನಾಡಿ ಮಿಡಿತ

Advertisement

ಬಂಟ್ವಾಳ ಪುರಸಭೆಯಲ್ಲಿ ತೆರವಾಗಿರುವ ಒಂದು ಸ್ಥಾನಕ್ಕೆ ಹಾಗೂ ಗ್ರಾ.ಪಂ.ಗಳಲ್ಲಿ ತೆರವಾದ 11 ಸ್ಥಾನಗಳಿಗೆ ನ.23ರಂದು  ಮತದಾನ

ಬಂಟ್ವಾಳ: ಬಂಟ್ವಾಳ ಪುರಸಭೆಯಲ್ಲಿ ತೆರವಾಗಿರುವ ಒಂದು ಸ್ಥಾನಕ್ಕೆ ಹಾಗೂ ಗ್ರಾ.ಪಂ.ಗಳಲ್ಲಿ ತೆರವಾದ 11 ಸ್ಥಾನಗಳಿಗೆ ರಾಜ್ಯ ಚುನಾವಣಾ ಆಯೋಗ ಉಪಚುನಾವಣೆ ಘೋಷಣೆ ಮಾಡಿದ್ದು, ನ. 23ರಂದು  ಮತದಾನ ನಡೆಯಲಿದೆ. ಚುನಾವಣಾ ಕಾರ್ಯದ ಮುನ್ನ ದಿನವಾದ ಇಂದು ಬಿಸಿರೋಡಿನ ಆಡಳಿತ ಸೌಧದ ಕಚೇರಿಯಲ್ಲಿ ಚುನಾವಣಾ ಮಸ್ಟರಿಂಗ್ ಕಾರ್ಯ ನಡೆಯಿತು.


ಮತಗಟ್ಟೆಗಳು ಎಷ್ಟು?
ಒಟ್ಟು 12 ಉಪಚುನಾವಣೆಯ ಮತಗಟ್ಟೆಗಳಾಗಿದ್ದು, ಇದರಲ್ಲಿ ಗ್ರಾ.ಪಂ.ನ 11 ಕಡೆ ಹಾಗೂ ಪುರಸಭೆಗೆ ಸಂಬಂಧಿಸಿದಂತೆ ವ್ಯಾಪ್ತಿಯಲ್ಲಿ ಒಂದು ಮತಗಟ್ಟೆಗಳಿವೆ. ಚುನಾವಣಾ ಕಾರ್ಯಕ್ಕಾಗಿ 12 ಮತಗಟ್ಟೆಗಳಿಗೆ ಡಿ.ಗ್ರೂಪ್ ನೌಕರರು ಸೇರಿದಂತೆ ಒಟ್ಟ 65 ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ.13 ಮತಗಟ್ಟೆ ಅಧಿಕಾರಿ,13 ಮತಗಟ್ಟೆ ಸಹಾಯಕ ಅಧಿಕಾರಿ, 26 ಮತದಾನ ಸಹಾಯಕ ಅಧಿಕಾರಿ ಹಾಗೂ 13 ಡಿ.ಗ್ರೂಪ್ ನೌಕರರನ್ನು ಕರ್ತವ್ಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ಚುನಾವಣಾ ಶಾಖೆಯ ಉಪತಹಶೀಲ್ದಾರ್ ನವೀನ್ ಬೆಂಜನಪದವು ತಿಳಿಸಿದ್ದಾರೆ.
ಮತಗಟ್ಟೆ ಹೆಸರು
ಮತಗಟ್ಟೆ ಸಂಖ್ಯೆ 73 ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬಡಗಬೆಳ್ಳೂರು, ಮತಗಟ್ಟೆ ಸಂಖ್ಯೆ 135 ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ನಗ್ರಿ ಸಜೀಪಮೂಡ, ಮತಗಟ್ಟೆ ಸಂಖ್ಯೆ 129 ದ.ಕ.ಜಿ. ಹಿರಿಯ ಪ್ರಾಥಮಿಕ ಶಾಲೆ ಆಲಾಡಿ ಸ.ಮುನ್ನೂರು. ಮತಗಟ್ಟೆ ಸಂಖ್ಯೆ 127 ದ.ಕ.ಜಿ. ಹಿರಿಯ ಪ್ರಾಥಮಿಕ ಶಾಲೆ ನಂದಾವರ ಸ.ಮುನ್ನೂರು. ಮತಗಟ್ಟೆ ಸಂಖ್ಯೆ 59 ದ.ಕ.ಜಿ. ಸರಕಾರಿ ಉನ್ನತೀಕರಿಸಿದ ಹಿ. ಪ್ರಾಥಮಿಕ ಶಾಲೆ ನಲ್ಕೆಮಾರ್ ಅಮ್ಟಾಡಿ, ಮತಗಟ್ಟೆ ಸಂಖ್ಯೆ 53 ಸರಕಾರಿ ಪ್ರೌಡ ಶಾಲೆ ಪಂಜಿಕಲ್ಲು, ಮತಗಟ್ಟೆ ಸಂಖ್ಯೆ 127 a ದ..ಕ.ಜಿಲ್ಲಾ ಪಂ.ಹಿರಿಯ ಪ್ರಾಥಮಿಕ ಶಾಲೆ ನಂದಾವರ ಸ.ಮುನ್ನೂರು, ಮತಗಟ್ಟೆ ಸಂಖ್ಯೆ14 ದ.ಕ.ಜಿಲ್ಲಾ ಪಂ.ಕಿರಿಯ ಪ್ರಾಥಮಿಕ ಶಾಲೆ ಕುಡಂಬೆಟ್ಟು, ಮತಗಟ್ಟೆ ಸಂಖ್ಯೆ 164 ಸರ್ಕಾರಿ ಪ್ರೌಢ ಶಾಲೆ ಕುಕ್ಕಾಜೆ ಮಂಚಿ, ಮತಗಟ್ಟೆ ಸಂಖ್ಯೆ 54 ದ.ಕ.ಜಿಲ್ಲಾ ಪಂ.ಹಿ.ಪ್ರಾಥಮಿಕ ಶಾಲೆ ಆಚಾರಿಪಲ್ಕೆ ಪಂಜಿಕಲ್ಲು, ಮತಗಟ್ಟೆ ಸಂಖ್ಯೆ 3 ದ.ಕ.ಜಿಲ್ಲಾ ಪಂ.ಕಿರಿಯ ಪ್ರಾಥಮಿಕ ಶಾಲೆ ಮಂಡಾಡಿ ಬಿ.ಕಸ್ಬಾ ಹಾಗೂ ಮತಗಟ್ಟೆ ಸಂಖ್ಯೆ 201 ದ.ಕ.ಜಿಲ್ಲಾ ಪಂ.ಹಿ.ಪ್ರಾಥಮಿಕ ಶಾಲೆ ಬಿಳಿಯೂರು.
ಒಟ್ಟು ಎಷ್ಟು ಸ್ಥಾನಗಳಿಗೆ ಚುನಾವಣೆ
ಬಂಟ್ವಾಳ ಪುರಸಭೆಯ ವಾರ್ಡ್ 2ರ ಕಾಂಗ್ರೆಸ್ ಸದಸ್ಯರಾಗಿದ್ದ ಗಂಗಾಧರ್ ಅವರು ಲೋಕಸಭಾ ಚುನಾವಣೆಯ ಸಂದರ್ಭ ಪಕ್ಷ ತೊರೆದು ಬಿಜೆಪಿ ಸೇರಿದ್ದು, ಅವರು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಅವರ ತೆರವಾದ ಸ್ಥಾನಕ್ಕೆ ಹಾಗೂ ವಿವಿಧ ಕಾರಣಗಳಿಗಾಗಿ ತೆರವಾಗಿರುವ ಗ್ರಾ.ಪಂ.ನ ಸದಸ್ಯ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದೆ.

ನ. 23ರಂದು ನಾಳೆ ಬೆಳಗ್ಗೆ 7ರಿಂದ ಸಂಜೆ 5ರ ವರೆಗೆ ತನಕ ಚುನಾವಣೆ ನಡೆದು, ನ. 25 ಅವಶ್ಯವಿದ್ದರೆ ಮರು ಮತದಾನಕ್ಕೆ ಮೀಸಲು ದಿನವಾಗಿದೆ. ನ. 26ರಂದು ತಾಲೂಕು ಕೇಂದ್ರವಾದ ಬಂಟ್ವಾಳದ ಆಡಳಿತ ಸೌಧದಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.
ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾ.ಪಂ.ನ 3 ಸ್ಥಾನ, ಪಂಜಿಕಲ್ಲು 2, ಮಂಚಿ, ಪೆರ್ನೆ, ಚೆನ್ನೆತ್ತೋಡಿ, ಸಜೀಪಮೂಡ, ಅಮ್ಟಾಡಿ, ಬಡಗಬೆಳ್ಳೂರು ಗ್ರಾ.ಪಂ.ಗಳ ತಲಾ 1 ಸ್ಥಾನಗಳಿಗೆ ಮತದಾನ ನಡೆಯಲಿದೆ.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!