ಹುಣಸೂರು: ರಾತ್ರಿ ಸಮಯದಲ್ಲಿ ಮೊಬೈಲ್ ಅಂಗಡಿ ಮತ್ತು ಬಾಳೆಮಂಡಿ ಅಂಗಡಿಯಲ್ಲಿ ಸರಣಿ ಕಳ್ಳತನ ನಡೆದಿರುವ ಘಟನೆ ಹನಗೋಡು ಹೋಬಳಿಯಲ್ಲಿ ನಡೆದಿದೆ. ಕಳ್ಳರು ಬೀಗ ಮುರಿದು ಮಾಲಿಕ ಮಹೇಶ್ ರವರ ಮೊಬೈಲ್ ಅಂಗಡಿಯಲ್ಲಿ ಸುಮಾರು 60000/- ನಗದು ಮತ್ತು ಪಕ್ಕದ ಬಾಳೆಮಂಡಿ ಅಂಗಡಿಲ್ಲಿ 4000/- ನಗದನ್ನು ದೋಚಿದ್ದಾರೆ ಎಂದು ಹೇಳಲಾಗಿದೆ. ಜೊತೆಗೆ ಮುರಿದ ಬೀಗವನ್ನು ಅನುಮಾನ ಬಾರದಿರಲ್ಲಿ ಎಂದು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದಾರೆ.
ಹನಗೋಡು ಹೋಬಳಿಯ ವೀರತಯ್ಯನಕೊಪ್ಪಲು ಗ್ರಾಮದ ನಿವಾಸಿ ಮಹೇಶ್ ರವರು ಹನಗೋಡು ಗ್ರಾಮದ ಶಂಕರಪ್ಪ ರವರ ಮಳಿಗೆಯಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದರು. ಎಂದಿನಂತೆ ಸಾಯಿಂಕಾಲ ಸುಮಾರು 60000 ಹಣವನ್ನು ಕ್ಯಾಸ್ ಬಾಕ್ಸ್ ನಲ್ಲಿ ಇರಿಸಿ ಬೀಗ ಹಾಕಿ ಹೋಗಿದ್ದರಂತೆ. ಬೆಳಗ್ಗೆ ಬಂದು ನೋಡಿದಾಗ ಅಂಗಡಿಯ ಬೀಗ ತೆರೆದಿರುವುದು ಕಂಡು ಗಾಬರಿಗೊಂಡ ಮಾಲಿಕ ಮಹೇಶ್ ತಕ್ಷಣ ಒಳಗೆ ಹೋಗಿ ನೋಡಿದಾಗ ಹಣ ದೋಚಿರುವುದು ಖಚಿತವಾಗಿದೆ. ಪಕ್ಕದ ಬಾಳೆ ಮಂಡಿ ಮಾಲಿಕರಾದ ರಾಘುವೇಂದ್ರ ರವರು ತಮ್ಮ ಅಂಗಡಿಯಲ್ಲೂ ಇಟ್ಟಿದ್ದ 4000/- ನಗದನ್ನು ಕಳ್ಳರು ದೋಚಿದ್ದಾರೆ ಎಂಬುದಾಗಿ ಹೇಳಿದ್ದಾರೆ.
ಹನಗೋಡು ಹೋಬಳಿಯು ಸುಮಾರು ಗ್ರಾಮಗಳಿಂದ ಕೂಡಿದ್ದು ಹಲವಾರು ಜನ ವ್ಯಾಪಾರ, ವ್ಯವಹಾರ ಮಾಡುವುದರಿಂದ ಪೊಲೀಸ್ ವ್ಯವಸ್ತೆ ಸುವ್ಯವಸ್ಥಿತವಾಗಿರಬೇಕು ಹಾಗೂ ಈ ಹಿಂದೆ ಇದ್ದ ಹೆಡ್ ಕಾನ್ಸಟೇಬಲ್ ನಾಗರಾಜು ರವರ ಕಾಲಾವಧಿಯಲ್ಲಿ ಹನಗೋಡು ಹೋಬಳಿಯಲ್ಲಿ ಎಲ ರೀತಿಯಲ್ಲೂ ಸ್ವಲ್ಪ ಭದ್ರತೆಯಿಂದ ಇತ್ತು, ಈಗ ಪೊಲೀಸ್ ಚೌಕಿ ಇದ್ದರೂ ಅದರಲ್ಲಿ ಪೊಲೀಸ್ ಇರುತ್ತಿಲ್ಲ ಬೀಗ ಹಾಕಿ ಅವರ ಪಾಡಿಗೆ ಹೋಗುತ್ತಿರುತ್ತಾರೆ ಹಾಗಾಗಿ ಮುಂದಿನ ದಿನಗಳಲ್ಲಿ ರಾತ್ರಿ ವೇಳೆಯಲ್ಲಿ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಗ್ರಾಮಸ್ಥರು ಮತ್ತು ವ್ಯಾಪಾರಸ್ಥರು ಮನವಿ ಮಾಡಿದ್ದಾರೆ. ಈ ಸಂಬಂಧ ಹುಣಸೂರು ಗ್ರಾಮಾಂತ ಠಾಣೆಯಲ್ಲಿ ದೂರು ದಾಖಲಾಗಿದ್ದು , ಪೊಲೀಸ್ ಅಧಿಕಾರಿಗಳು ಸ್ಥಳ ಮಹಜರು ಮಾಡಿ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…