ಕನ್ಯಾನ ಗ್ರಾಮದ ದೇಲಂತಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬ್ರಹ್ಮಶ್ರೀಕುಂಟುಕುಡೇಲು ಶ್ರೀರಘುರಾಮ ತಂತ್ರಿಗಳ ನೇತೃತ್ವದಲ್ಲಿ ಸಮಸ್ತ ಊರ ಪರವೂರ ಭಕ್ತ ಜನರ ಯೋಗಕ್ಷೇಮ ಪ್ರಾಪ್ತಿಗಾಗಿ ದೇವಸ್ಥಾನದ ಸರ್ವಾಂಗೀಣ ಅಭಿವೃದ್ಧಿಯ ಸದುದ್ದೇಶದಿಂದ ಸಾರ್ವಜನಿಕ ನೆಲೆಯಲ್ಲಿ ತುಳಸಿ ಪ್ರಿಯನಾದ ಶ್ರೀ ವಿಷ್ಣುಮೂರ್ತಿ ದೇವರಿಗೆ ಮಹಾಗಣಪತಿ ಹವನ,ಪವಮಾನ ಅಭಿಷೇಕ ಕಾರ್ತಿಕ ಪೂಜೆ, ಪಂಚಾಮೃತ ಅಭಿಷೇಕ ಸಹಿತ `ಲಕ್ಷ ತುಳಸಿ ಅರ್ಚನೆ’ ಮತ್ತು ರಾತ್ರಿ- ಶ್ರೀ ದೇವರಿಗೆ ವಿಶೇಷ ಕಾರ್ತಿಕ ಪೂಜೆ’ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆದಿದೆ.




