ಬಂಟ್ವಾಳ: ಬಂಟ್ವಾಳ ಪುರಸಭೆಯ 2 ನೇ ವಾರ್ಡ್ ನ ಒಂದು ಸದಸ್ಯ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುರುಷೋ ತ್ತಮ ಪೂಜಾರಿ ಅವರು ಗೆಲುವು ಸಾಧಿಸಿದ್ದಾರೆ.
ಅ ಮೂಲಕ ಕಾಂಗ್ರೆಸ್ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.

ಬಿಜೆಪಿಯ ಅಭ್ಯರ್ಥಿ ಇಂದ್ರೇಶ್ ಪೂಜಾರಿ ಅವರಿಗೆ ಸೋಲಾಗಿದೆ.ಇಬ್ಬರು ರಾಜಕೀಯವಾಗಿ ಹೊಸಮುಖಗಳಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಅವರು ವಿಜಯಿಯಾಗಿದ್ದಾರೆ.ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಂಗಾಧರ ಪೂಜಾರಿ ಅವರು ಪಕ್ಷತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.ಇವರ ತೆರವಾದ ಸ್ಥಾನಕ್ಕೆ ನ.23 ರಂದು ಶನಿವಾರ ಉಪಚುನಾವಣೆ ನಡೆದಿತ್ತು.
ಬಿಜೆಪಿ ಲೆಕ್ಕಾಚಾರ ಉಲ್ಟಾಪಲ್ಟ
ಬಂಟ್ವಾಳ ಪುರಸಭೆಯಲ್ಲಿ ಅಧಿಕಾರವನ್ನು ಪಡೆಯಲು ಕೆಲವು ವಾರ್ಡ್ ಗಳನ್ನು ತನ್ನ ಹಿಡಿತಕ್ಕೆ ತರಲು ತಂತ್ರಗಾರಿಕೆಯನ್ನು ಮಾಡಿದ ಬಿಜೆಪಿಯ ಲೆಕ್ಕಾಚಾರ ಉಲ್ಟಾಪಲ್ಟವಾಗಿದೆ.
ಪುರಸಭೆಯ 2 ನೇ ವಾರ್ಡ್ ನಲ್ಲಿ ನಿರಂತರವಾಗಿ ಗೆಲುವು ಸಾಧಿಸುತ್ತಿದ್ದ ಗಂಗಾಧರ ಪೂಜಾರಿ ಅವರನ್ನು ಬಿಜೆಪಿಗೆ ಎಳೆದುಕೊಂಡು ತಂದಿದ್ದ ಬಿಜೆಪಿಗೆ ಕಾಂಗ್ರೆಸ್ ನ ಕೋಟೆಯನ್ನು ಬೇಧಿಸಲು ಸಾಧ್ಯವಾಗಿಲ್ಲ. ಅಮೂಲಕ ಬಿಜೆಪಿಗೆ ಮುಖಭಂಗವಾಗಿದೆ.ಕಾಂಗ್ರೆಸ್ ತನ್ನ ಚಾಕಚಕ್ಯತೆಯಿಂದ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಸಫಲತೆಯನ್ನು ಕಂಡಿದೆ. ಮತ್ತು ಸಂಘಟನಾತ್ಮಕ ರೀತಿಯಲ್ಲಿ ಪಕ್ಷ ಉತ್ತಮ ಹೆಜ್ಜೆಯನ್ನು ಇಡುತ್ತಿರುವುದು ಉಪಚುನಾವಣೆ ಗೆಲುವು ಸಾಕ್ಷಿಯಾಗಿದೆ.



