ಕರಾವಳಿ

ಮಂಗಳೂರಿನಲ್ಲಿ ಫ್ಯೂಚರ್‌ ಜನರಲಿ ಇಂಡಿಯಾ ಲೈಫ್‌ ಇನ್ಷುರೆನ್ಸ್‌ ಶಾಖೆ ಆರಂಭ

ಮಂಗಳೂರು, ನವೆಂಬರ್‌ 27- ಜೀವ ವಿಮಾ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಹೆಸರಾಗಿರುವ ಫ್ಯೂಚರ್‌ ಜನರಲಿ ಇಂಡಿಯಾ ಲೈಫ್‌ ಇನ್ಷುರೆನ್ಸ್‌ ಲಿಮಿಟೆಡ್‌ (ಎಫ್‌ಜಿಐಎಲ್‌ಐ) ಮಂಗಳೂರಿನಲ್ಲಿ ತನ್ನ ಶಾಖೆಯನ್ನು ಆರಂಭಿಸಿದೆ. ಈ ಮೂಲಕ ತನ್ನ ವಿಸ್ತರಣಾ ಹಾದಿಯಲ್ಲಿ ಇನ್ನೊಂದು ಹೆಜ್ಜೆ ಇಟ್ಟಿದೆ. ಮಂಗಳೂರು ಬೆಳವಣಿಗೆಗೆ ಅವಕಾಶವಿರುವ ಮಾರುಕಟ್ಟೆ ಎಂದು ಗುರುತಿಸಿರುವ ಎಫ್‌ಜಿಐಎಲ್‌ಐ ಗ್ರಾಹಕರನ್ನು ಗುರುತಿಸಿ ಅವರಿಗೆ ವಿಮೆ ಸೌಲಭ್ಯ ದೊರೆಯುವಂತೆ ಮಾಡುವುದಲ್ಲದೇ ಸಮಗ್ರ ವಿಮೆ ಪರಿಹಾರಗಳನ್ನು ಸ್ಥಳೀಯರಿಗೆ ಒದಗಿಸಲಿದೆ. ಫ್ಯೂಚರ್‌ ಜನರಲಿ ಇಂಡಿಯಾ ಲೈಫ್‌ ಇನ್ಷುರೆನ್ಸ್‌ ದೇಶಾದ್ಯಂತ ಜಾಲ ಹೊಂದಿದ್ದು ಪ್ರಸ್ತುತ 94 ಶಾಖೆ ಮತ್ತು 73ಕ್ಕೂ ಹೆಚ್ಚು ಬ್ಯಾಂಕ್‌ ಪಾಲುದಾರಿಕೆಯ ಶಾಖೆಗಳನ್ನು ಹೊಂದಿದೆ.

ಫ್ಯೂಚರ್‌ ಜನರಲಿ ಇಂಡಿಯಾ ಲೈಫ್‌ ಇನ್ಷುರೆನ್ಸ್‌ನ ಎಂಡಿ ಮತ್ತು ಸಿಇಒ ಅಲೋಕ್‌ ರುಂಗ್ಟಾ ಮಾತನಾಡಿ “ಗ್ರಾಹಕ ಕೇಂದ್ರಿತ ಸೇವೆಗಳಿಗೆ ಹೆಚ್ಚು ಒತ್ತು ನೀಡುವುದರಿಂದ ನಾವು ನಿರಂತರವಾಗಿ ಹೊಸತನವನ್ನು ಅನ್ವೇಷಿಸುತ್ತಿರುತ್ತೇವೆ. ಮಂಗಳೂರಿನಲ್ಲಿ ಶಾಖೆ ಆರಂಭಿಸುವ ಮೂಲಕ ಇಲ್ಲಿಯ ಗ್ರಾಹಕ ಸ್ಥಳೀಯ ಅಗತ್ಯತೆಗಳಿಗೆ ಹೊಂದಿಕೆಯಾಗುವ ವಿಮೆ ಉತ್ಪನ್ನಗಳನ್ನು ಪರಿಚಯಿಸಲಾಗುವುದು. ಜೊತೆಗೆ ಗ್ರಾಹಕ ಸಂಬಂಧವನ್ನು ದೀರ್ಘಾವಧಿಗೆ ಬೆಳೆಸುವ ವಿಶ್ವಾಸಾರ್ಹತೆ ಹೆಚ್ಚಿಸುವುದಕ್ಕೆ ಆದ್ಯತೆ ನೀಡಲಾಗುವುದು. ಡಿಜಿಟಲ್‌ ಪರಿವರ್ತನೆಯಿಂದಾಗಿ ಗ್ರಾಹಕರು ತ್ವರಿತವಾಗಿ ಮತ್ತು ನಂಬಿಕೆಗೆ ಅರ್ಹವಾದ ಸೇವೆಯನ್ನು ಪಡೆಯಲಿದ್ದಾರೆ” ಎಂದು ತಿಳಿಸಿದರು.

ವಿನೂತನ ವಿಮೆ ಉತ್ಪನ್ನಗಳಿಗೆ ಒತ್ತು ನೀಡುವ ಭಾಗವಾಗಿ ಫ್ಯೂಚರ್‌ ಜನರಲಿ ಇಂಡಿಯಾ ಲೈಫ್‌ ಇನ್ಷುರೆನ್ಸ್‌ ಲಾಂಗ್‌ ಟರ್ಮ್‌ ಇನ್‌ಕಂ ಪ್ಲಾನ್‌ (ಎಲ್‌ಟಿಐಪಿ) ಪರಿಚಯಿಸಿದೆ. ಇದನ್ನು ಜೀವನಕ್ಕೆ ಭದ್ರತೆ ನೀಡುವ ಜೊತೆಗೆ ದೀರ್ಘಾವಧಿಯಲ್ಲಿ ಆರ್ಥಿಕ ಸದೃಢತೆಯನ್ನು ಒದಗಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಮರಣದ ಸಮಯದಲ್ಲಿ, ಬದುಕಿರುವಾಗಲೇ ಮತ್ತು ವಿಮಾ ಅವಧಿ ಮುಗಿದಾಗ ನಿಶ್ಚಿತ ಆದಾಯವನ್ನು ಎಲ್‌ಟಿಐಪಿ ನೀಡಲಿದೆ. ಅಲ್ಲದೇ 50 ವರ್ಷಗಳವರೆಗೆ ದೀರ್ಘಾವಧಿಯ ಆದಾಯವನ್ನು ಖಾತ್ರಿ ಪಡಿಸಲಿದೆ. ವಿಮೆ ಪಾಲಿಸಿದಾರರು ತಮಗೆ ಬೇಕಾದ ಸಮಯದಲ್ಲಿ ಅಂದರೆ ಪಾಲಿಸಿ ಆರಂಭವಾದ ಮರು ತಿಂಗಳಲ್ಲೇ ಪಾಲಿಸಿ ಹಿಂದಕ್ಕೆ ಪಡೆಯಬಹುದು. ಇಲ್ಲವೇ 11ನೇ ವರ್ಷದಿಂದ ಆದಾಯ ಲಾಯಲ್ಟಿ ಜಮೆ ಆಗಲು ಆರಂಭವಾಗಲಿದ್ದು ಪಾಲಿಸಿ ಅವಧಿ ಮುಗಿಯುವವರೆಗೆ ಮುಂದುವರೆಯುತ್ತದೆ.

24ರ ಹಣಕಾಸು ವರ್ಷದಲ್ಲಿ ಎಫ್‌ಜಿಐಎಲ್‌ಐ 59.80 ಕೋಟಿ ರೂಪಾಯಿಗಳ ಬೋನಸ್‌ ನೀಡಿದೆ. ಕಂಪೆನಿಯ ಇತಿಹಾಸದಲ್ಲಿಯೇ ಇದು ಅತಿ ಹೆಚ್ಚು. ಅಲ್ಲದೇ ಭಾರತದಾದ್ಯಂತ ಸಂಸ್ಥೆ 101,000ಕ್ಕೂ ಹೆಚ್ಚು ಪಾಲಿಸಿದಾರರನ್ನು ಹೊಂದಿದ್ದು ಗ್ರಾಹಕರು ಇಟ್ಟಿರುವ ವಿಶ್ವಾಸಕ್ಕೆ ಪ್ರತೀಕವಾಗಿದೆ. ಕಂಪೆನಿ ಪ್ರಕಟಿಸಿರುವ ಬೋನಸ್‌ ಕಂಪೆನಿಯ ಸದೃಢ ಆರ್ಥಿಕ ಸಾಮರ್ಥ್ಯ ಮತ್ತು ದೀರ್ಘಾವಧಿಯ ಬದ್ಧತೆಗೆ ಸಾಕ್ಷಿಯಾಗಿದೆ.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಮಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಯಲಿದ್ದು, ಅದರ ಭಾಗವಾಗಿ ಕರ್ನಾಟಕದಲ್ಲಿ 2027ರ ಜನಗಣತಿಯ…

2 days ago

ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆ…!

ಬಂಟ್ವಾಳ: ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  …

3 days ago

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ ಆಗಮಿಸಿ ಚುನಾವಣಾ ಪ್ರಕ್ರಿಯೆಗಳ ಅವಲೋಕನ ನಡೆಸಿದರು.

  ಕಾಸರಗೋಡು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕರ‍್ಯರ‍್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ…

3 days ago

ಸೂರಿಕುಮೇರು: ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಪಿಕಪ್ ವಾಹನ ಡಿ*ಕ್ಕಿ..!

ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಹಿಂಬದಿಯಿಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದ್ದು, ಪಿಕಪ್ ವಾಹನದ ಮುಂಭಾಗವು ಸಂಪೂರ್ಣ…

5 days ago

ಉಡುಪಿ: ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕನ ಬಂಧನ…!

ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕ ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ. ಪೌಜಾನ್…

6 days ago