ಕಡಬ: ಕನ್ನಡವೆಂದರೆ ಒಂದು ಬಾಷೆಯಲ್ಲ, ಅದರಲ್ಲಿ ನಮ್ಮ ಮಣ್ಣಿನ ಸಂಸ್ಕೃತಿ ಸಂಸ್ಕಾರ, ಸಂಪ್ರದಾಯ ಸಂರಕ್ಷಣೆ ಎಲ್ಲವೂ ಮಿಳಿತವಾಗಿದೆ. ನಾಡಿನ ಭಾಷೆ ಅರಿಯದೆ , ಉಳಿಸದೆ ಹೋದರೆ ಇವೆಲ್ಲವೂ ನಾಶವಾಗಬಹುದು. ಹಾಗಾಗಿ ಕನ್ನಡವನ್ನು ನಮ್ಮ ಹೃದಯದದ ಬಾಷೆಯನ್ನಾಗಿಸಬೇಕು. ಕನ್ನಡವನ್ನು ಉಳಿಸುವ ಕನ್ನಡ ಸರ್ಕಾರಿ ಶಾಲೆಗಳ ಅಭಿವೃದ್ದಿಯಾಗಬೇಕು ಎಂದು ಪ್ರಗತಿಪರ ಕೃಷಿಕ ಎನ್ ಕರುಣಾಕರ ಗೋಗಟೆ ಹೇಳಿದರು.
ಅವರು ಕಡಬ ತಾಲೂಕು ಕುಂತೂರು ಪದವು ಸಂತ ಜಾರ್ಜ್ ಅನುದಾನಿತ ಕನ್ನಡ ಮಾದ್ಯಮ ಪ್ರೌಢಶಾಲೆಯಲ್ಲಿ ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ ಸಾಹಿತ್ಯ ಪರಿಷತ್ ನ ಕಡಬ ತಾಲೂಕು ಘಟಕದ ವತಿಯಿಂದ ನಡೆದ ೪ ನೇಯ ಕನ್ನಡ ಸಾಹಿತ್ಯ ಸಮ್ಮೇಳನ ದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮ್ಮೇಳನ ಉದ್ಘಾಟನೆಯನ್ನು ನೆರವೇರಸಿದ ಕವಿ ಹಾಗು ಸಾಹಿತಿ ಡಾ.ವಸಂತ ಕುಮಾರ್ ಪೆರ್ಲ ಮಾತನಾಡಿ, ನಮ್ಮ ಮಣ್ಣಿನ ಭಾಷೆ ಕನ್ನಡ ಯಾವಾಗಲೂ ಹೃದಯದ ಭಾಷೆಯಾಗಿರುತ್ತದೆ. ಅದನ್ನು ಪೋಷಿಸುವ ಕೆಲಸವಾಗಬೇಕು. ಕನ್ನಡ ಶಾಲೆಗಳನ್ನು ಬೆಳೆಸಿದಾಗ ಕನ್ನಡ ನಾಡು ನುಡಿ, ಸಾಹಿತ್ಯವನ್ನು ಸಂರಕ್ಷಿಸಿದಂತೆ . ಸರ್ಕಾರ ಬಜೆಟ್‌ನ ಶೇ.೫ ರಷ್ಟು ಭಾಗವನ್ನು ಕನ್ನಡದ ಅಭಿವೃದ್ದಿಗೆ ಮೀಸಲಿಡಬೇಕು ಎಂದರು.
ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಕೆ ಸೀತಾರಾಮ ರೈ ಸಮ್ಮೇಳವನ್ನು ದೀಪಪ್ರಜ್ವಲನೆ ಮಾಡಿ ಶುಭಹಾರೈಸಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರೆ.ಫಾ.ನಿತಿನ್ ಮ್ಯಾಥ್ಯೂ ಆರ್ಶೀವಚನ ನೀಡಿದರು. ಕಲಾ ಪ್ರದರ್ಶನವನ್ನು ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಕುಂತೂರು ಪದವು ಸಂತ ಜಾರ್ಜ್ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮಾಜಿ ಸಂಚಾಲಕ ರಾಯ್ ಅಬ್ರಹಾಂ ಪುಸ್ತಕ ಪ್ರದರ್ಶನ ಮಳಿಗೆಯನ್ನು ,ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಮಿತಿ ಸದಸ್ಯ ಮಹಮ್ಮದ್ ಕುಂಞÂ ಪ್ರಾಚ್ಯವಸ್ತು ಪ್ರದರ್ಶನ ಮಳಿಗೆಯನ್ನು , ಸ್ವಾಗತ ಸಮಿತಿ ಅಧ್ಯಕ್ಷ ಗುರುರಾಜ್ ರೈ ವಿಜ್ಣಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು. ಕೆ ಎಂ ಎಫ್ ಅಧ್ಯಕ್ಷ ಕೆ ಪಿ ಸುಚರಿತ ಶೆಟ್ಟಿ ಸ್ಮರಣ ಸಂಚಿಕೆ ಬಿಡುಗಡೆಗಳಿಸಿದರು. ಕ.ಸಾ.ಪ ಜಿಲ್ಲಾಧ್ಯಕ್ಷ ಡಾ. ಎಂ ಪಿ ಶ್ರೀನಾಥ ಆಶಯ ನುಡಿಗಳ್ಳನ್ನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಆಶಾತಿಮ್ಮಪ್ಪ ಗೌಡ, ಸಮ್ಮೇಳನದ ಆರ್ಥಿಕ ಸಮಿತಿ ಸಂಚಾಲಕ ವಿ ಐ ಅಬ್ರಾಹಂ, ಕ.ಸಾ.ಪ ಕಡಬ ಹೋಬಳಿ ಅಧ್ಯಕ್ಷ ಪದ್ಮಪ್ಪ ಗೌಡ, ಗೌರವ ಕಾರ್ಯದರ್ಶಿ ನಾಗರಾಜ್ ಎನ್ ಕೆ , ಆಲಂಕಾರು ಗ್ರಾ.ಪಂ ಅಧ್ಯಕ್ಷೆ ಸುಶೀಲ, ಕÊೊಲ ಗ್ರಾ.ಪಂ ಅಧ್ಯಕ್ಷೆ ಪುಷ್ಪಾಸುಭಾಶ್ ಶೆಟ್ಟಿ, ರಾಮಕುಂಜ ಗ್ರಾ.ಪಂ ಅಧ್ಯಕ್ಷೆ ಸುಚೇತಾ, ಸಿ ಆರ್ ಪಿ ಮಹೇಶ್ , ನಿಕಪೂರ್ವ ಸಮ್ಮೇಳನಾಧ್ಯಕ್ಷ ಗಣರಾಜ ಕುಂಬ್ಲೆ ಮೊದಲಾದವರು ಕುಂತೂರು ಪದವು ಸಂತ ಜಾರ್ಜ್ ಅನುದಾನಿತ ಕನ್ನಡ ಮಾದ್ಯಮ ಪ್ರೌಢಶಾಲಾ ಮುಖ್ಯ ಶಿಕ್ಷಕ ಹರಿಶ್ಚಂದ್ರ ಕೆ ಸ್ವಾಗತಿಸಿದರು. ಬಾಲಚಂದ್ರ ಮುಚ್ಚಿಂತಾಯ ವಂದಿಸಿದರು. ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಚಂದ್ರಶೇಖರ ಕೆದ್ದೋಟೆ , ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲಾ ಶಿಕ್ಷಕಿ ಸರಿತಾಜನಾರ್ದನ , ರಾಷ್ಟ್ರ ಪ್ರಶಸ್ತಿ ಪುಸ್ಕೃತ ನಿವೃತ್ತ ಶಿಕ್ಷಕ ಟಿ.ನಾರಾಯಣ ಭಟ್, ಕೊಂಡಾಡಿಕೊಪ್ಪ ಸರ್ಕಾರಿ ಶಾಲಾಶಿಕ್ಷಕ ಜಯಂತ ವೈ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ ವಿವಿಧ ವಿಚಾರಗೋಷ್ಟಿ, ಕೃತಿ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮ , ಕವಿ ಗೋಷ್ಟಿ , ಸಮ್ಮೇಳಾಧ್ಯಕ್ಷರೊಂದಿಗೆ ಸಂವಾದ ,ಸಾಧಕರಿಗೆ ಸನ್ಮಾನ, ನಡೆಯಿತು.
ಕನ್ನಡ ಭುವನೇಶ್ವರಿಯ ವೈಭವದ ಮೆರವಣಿಗೆ
ಸಮ್ಮೇಳನದ ಉದ್ಘಾಟನೆಗೆ ಮೊದಲು ಕನ್ನಡ ಭುವನೇಶ್ವರಿಯ ವೈಭವದ ಮೆರವಣಿಗೆ ನಡೆಯಿತು. ಪದವು ಸೈಂಟ್ ಜಾರ್ಜ್ ಆರ್ಥೋಡಾಕ್ಸ್ ಚರ್ಚ್ನ ಮುಂಭಾಗದಿಂದ ಸಮ್ಮೇಳನದ ವೇದಿಕೆ ತನಕ ಮೆರವಣಿಗೆ ನಡೆಯಿತು. ಯಕ್ಷ ಪಾಂಡವ ಮಹಾದ್ವಾರದ ಮೂಲಕ ಮೆರವಣಿಗೆ ಸಮ್ಮೇಳನದ ವೇದಿಕೆಗೆ ಆಗಮಿಸಿತು. ಪೆರಾಬೆ ಗ್ರಾಮ ಪಂಚಾಯಿತಿ ಸದಸ್ಯ ಪಿ.ಜಿ.ರಾಜು ಮೆರವಣಿಗೆ ಉದ್ಘಾಟಿಸಿದರು. ದ.ಕ.ಜಿ.ಪಂ.ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡಿದರು. ಸಮ್ಮೇಳನಾಧ್ಯಕ್ಷ ಎನ್.ಕರುಣಾಕರ ಗೋಗಟೆ ಹೊಸಮಠ, ಕನ್ನಡ ಸಾಹಿತ್ಯ ಪರಿಷತ್ ದ ಕ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಕಡಬ ತಾಲೂಕು ಅಧ್ಯಕ್ಷ ಕೆ.ಸೇಸಪ್ಪ ರೈ ಅವರನ್ನು ಮೆರವಣಿಗೆಯಲ್ಲಿ ತೆರೆದ ವಾಹನದಲ್ಲಿ ಕರೆತರಲಾಯಿತು. ಕಲಶ ಹೊತ್ತ ಮಹಿಳೆಯರು, ಚೆಂಡೆ ಸದ್ದು, ಗೊಂಬೆ ಕುಣಿತ ಮೆರವಣಿಗೆಗೆ ಮೆರುಗು ನೀಡಿತು. ಸಮ್ಮೇಳನದ ಆತಿಥ್ಯ ವಹಿಸಿಕೊಂಡ ಕುಂತೂರುಪದವು ಸಂತ ಜಾರ್ಜ್ ಅನುದಾನಿತ ಪ್ರೌಢಶಾಲೆಯ ವಿದ್ಯಾರ್ಥಿಗಳ ಜೊತೆಗೆ ಕುಂತೂರು ಪದವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರಾಮಕುಂಜ ಆಂಗ್ಲ ಮಾಧ್ಯಮ ಶಾಲೆ, ಕಡಬ ಸೈಂಟ್ ಆನ್ಸ್, ಆಲಂಕಾರು ದುರ್ಗಾಂಬಾ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಓಂತ್ರಡ್ಕ ಶಾಲಾ ಪದವಿಧರ ಶಿಕ್ಷಕ ದಿಲೀಪ್ ಎಸ್ ಸ್ವಾಗತಿಸಿ, ಸ್ವಾಗತ ಸಮಿತಿ ಕಾರ್ಯದರ್ಶಿ ಬಿ.ಪದ್ಮನಾಭ ಗೌಡ ಎರ್ಮಳ ವಂದಿಸಿದರು. ಶಿಕ್ಷಕ ಮಹೇಶ್ ಪಾಟಾಳಿ ನಿರೂಪಿಸಿದರು. ಕುಂತೂರು ಪದವು ಸಂತ ಜಾರ್ಜ್ ಅನುದಾನಿತ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಾಜೇಶ್ ಕುಮಾರ್ ಡಿ.ಜೆ. ಮೆರವಣಿಗೆ ಸಂಯೋಜಿಸಿದರು.
ಬೆಳಿಗ್ಗೆ ರಾಷ್ಟ್ರ, ಪರಿಷತ್ತು ಹಾಗೂ ನಾಡ ಧ್ವಜಾರೋಹಣ ನೆರವೇರಿಸಲಾಯಿತು. ಪೆರಾಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಧ್ಯಾ ಕೆ., ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಮಮತಾ ಶೆಟ್ಟಿ ಅಂಬರಾಜೆ ಸ್ವಾಗತಿಸಿ, ಕುಂತೂರು ಪದವು ಸಂತ ಜಾರ್ಜ್ ಅನುದಾನಿತ ಪ್ರೌಢಶಾಲೆಯ ಶಿಕ್ಷಕಿ ಭುವನೇಶ್ವರಿ ಪಿ ಯಂ ವಂದಿಸಿದರು. ಶಿಕ್ಷಕ ಕೇಶವ ಗೌಡ ನಿರೂಪಿಸಿದರು.
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…