ರಾಮನಗರ: ಸೋಲು, ಹತಾಶೆಗೆ ನೂಕುತ್ತೆ. ಸೋಲು ನೈತಿಕ ಸ್ಥೈರ್ಯ ಕಸಿಯುತ್ತೆ. ತಾತ, ತಂದೆ ಕಟ್ಟಿದ ಕೋಟೆಯಲ್ಲಿ ವಿರೋಚಿತ ಹ್ಯಾಟ್ರಿಕ್ ಸೋಲುಂಡ ನಿಖಿಲ್, ಇವತ್ತು ಅದೇ ಕಾರ್ಯಕರ್ತರ ಮಧ್ಯದಲ್ಲಿ ಕಾಣಿಸಿದರು. ಎಲೆಕ್ಷನ್ನಲ್ಲಿ ಹೋರಾಡಿದ ಕಾರ್ಯಕರ್ತರಿಗೆ ಕೃತಜ್ಞತಾ ಸಮಾವೇಶ ನಡೆಸಿ, ಧೈರ್ಯ ನೀಡಿದ್ರು. ಇದೇ ವೇಳೆ, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಈ ಸೋಲಿಗೆ ಸೇಡು ಅನ್ನೋ ಶಪಥ ಮಾಡಿದ್ದಾರೆ.
ಭದ್ರಕೋಟೆಗೆ ನುಗ್ಗಿ ಬೇಟೆ ಆಡಿದ ಕಾಂಗ್ರೆಸ್ ನೇರವಾಗಿ ಗೌಡರ ಜನ್ಮಭೂಮಿ ಹಾಸನಕ್ಕೆ ಸಿದ್ದು ಸೇನೆ ನುಗ್ಗಲು ಸಜ್ಜಾಗಿದೆ. ಚನ್ನಪಟ್ಟಣ ಸೋಲಿನಿಂದ ಕಂಗಾಲಾದ ದಳಕ್ಕೆ ಮರ್ಮಾಘಾತ ನೀಡಲು ಸಿದ್ದು ಟೀಂ ಬೃಹತ್ ಸಮಾವೇಶಕ್ಕೆ ಅಣಿ ಆಗ್ತಿದೆ. ಆದ್ರೆ, ಎಲೆಕ್ಷನ್ನಲ್ಲಿ ಸೋತ ನಿಖಿಲ್, ಚನ್ನಪಟ್ಟಣಕ್ಕೆ ತೆರಳಿ ಜೆಡಿಎಸ್ ಕಾರ್ಯಕರ್ತರಿಗೆ ಕೃತಜ್ಞತಾ ಸಮಾವೇಶ ನಡೆಸಿದ್ದಾರೆ.ಚುನಾವಣಾ ಚಕ್ರವ್ಯೂಹದಲ್ಲಿ ಸೋತ ದಿನ ಕಾಣಿಸಿದ್ದ ನಿಖಿಲ್ ಕುಮಾರಸ್ವಾಮಿ ಮತ್ತೆ ಚನ್ನಪಟ್ಟಣದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಸೋಲು ಶಾಶ್ವತವಲ್ಲ, ಗೆಲುವು ಅಂತಿಮವೂ ಅಲ್ಲ ಅಂತ ಅರಿತ ನಿಖಿಲ್ ಈಗ ಪಕ್ಷದ ಕಾರ್ಯ ಚಟುವಟಿಕೆಯಲ್ಲಿ ಕಾಣಿಸಿದ್ದು, ಪಕ್ಷ ಸಂಘಟನೆಯತ್ತ ಚಿತ್ತ ನೆಟ್ಟಿದ್ದಾರೆ.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಸೋತರೂ ದಳ ಕಾರ್ಯಕರ್ತರಿಗೆ ಕೃತಜ್ಞತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸೋಲಿನ ಬಗ್ಗೆ ಆತ್ಮಾವಲೋಕನ, ಪಕ್ಷಕ್ಕಾಗಿ ಕೆಲಸ ಮಾಡಿದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲು ಮುಂದಾಗಿದ್ದಾರೆ. ಪಕ್ಷ ಸಂಕಷ್ಟದಲ್ಲಿದ್ದಾಗ ಜಿಲ್ಲೆಯ ಕಾರ್ಯಕರ್ತರು ಅನೇಕ ಸಂದರ್ಭ ಕೈ ಹಿಡಿದಿದ್ದಾರೆ. 8 ಸಲ ಶಾಸಕರಾಗಿ, 3 ಸಲ ಎಂಪಿಯಾಗಿ ಆಯ್ಕೆ ಮಾಡಿದ್ದಾರೆ. ದೇವೇಗೌಡರು, ಕುಮಾರಸ್ವಾಮಿ ಅವರು ಅಧಿಕಾರ ಇದ್ದಾಗ ಜಿಲ್ಲೆ ಅಭಿವೃದ್ಧಿಗೆ ಕೆಲಸ ಮಾಡಿದ್ದಾರೆ. ಚುನಾವಣೆ ಏಳು ಬೀಳುಗಳ ಸೋಲು ಗೆಲುವುಗಳು ಸಾಮಾನ್ಯ. ಜನ ತೀರ್ಪುನ್ನ ಕೊಟ್ಟಿದ್ದು ಅದನ್ನ ಸ್ವೀಕಾರ ಮಾಡುತ್ತೇನೆ. ಜೊತೆಗೆ ಜನತೆ ವಿಶ್ವಾಸ ಗಳಿಸುವ ಕೆಲಸ ಮಾಡ್ತೇನೆ ಅಂತ ನಿಖಿಲ್ ಹೇಳಿದ್ದಾರೆ. ನಿಖಿಲ್ ಕುಮಾರಸ್ವಾಮಿ, ಮೂರಲ್ಲ, 10 ಬಾರಿ ಸೋತರು ಪಕ್ಷಕ್ಕಾಗಿ ಹೋರಾಟ ಮಾಡ್ತೇನೆ ಅಂತ ಸವಾಲು ಸ್ವೀಕರಿಸಿದ್ದಾರೆ.ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಉತ್ತರ ಕೊಡ್ತೀವಿ. ಸಂಕ್ರಾಂತಿಯಿಂದ ಪಕ್ಷ ಸಂಘಟನೆ ಕಾರ್ಯಕ್ರಮ ಆರಂಭ ಆಗಲಿದೆ ಅಂತ ಹೇಳಿದ ಹೆಚ್ಡಿಕೆ, ಟಾಸ್ಕ್ ಕೊಟ್ಟರೆ ಜೆಡಿಎಸ್ ಶಾಸಕರ ಆಪರೇಷನ್ ಎಂಬ ಸಿಪಿವೈ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕಕ್ಕೆ ನಾಲ್ಕು ಸ್ಥಾನ ಜೆಡಿಎಸ್ ಗೆಲ್ಲುತ್ತೆ. ನಮ್ಮನ್ನು ಅಷ್ಟು ಸುಲಭವಾಗಿ ಜಿಲ್ಲೆಯಿಂದ ಖಾಲಿ ಮಾಡಿಸಲು ಸಾಧ್ಯವಿಲ್ಲ. ನನ್ನ, ನಿಖಿಲ್ ರಾಜಕೀಯ ಇಲ್ಲಿಂದಲೇ ಆರಂಭವಾಗಿದ್ದು, ಇಲ್ಲಿಯೇ ಅಂತ್ಯ ಆಗುತ್ತೆ. ಮುಂದಿನ ಚುನಾವಣೆಯಲ್ಲಿ ಇದೇ ಚನ್ನಪಟ್ಟಣದಲ್ಲಿ 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇವೆ. ಎಲ್ಲವನ್ನೂ ಸರಿಪಡಿಸಿಕೊಂಡು ಸಂಘಟನೆ ಮಾಡೋಣ ಎಂದು ಕೃತಜ್ಞತಾ ಸಭೆಯಲ್ಲಿ ಕುಮಾರಸ್ವಾಮಿ ಹೇಳಿದ್ದಾರೆ.
4ಕ್ಕೆ ನಾಲ್ಕು ಸ್ಥಾನ JDS ಗೆಲ್ಲುತ್ತೆ!
ಉಪಚುನಾವಣೆ ಸೋಲಿನ ಬಗ್ಗೆ ಹೆಚ್ಚು ಮಾತನಾಡದ ಕುಮಾರಸ್ವಾಮಿ ಅವರು 2028ರ ಎಲೆಕ್ಷನ್ ನಮ್ಮ ಟಾರ್ಗೆಟ್ ಎಂದಿದ್ದಾರೆ. ಮುಂದಿನ ಎಲೆಕ್ಷನ್ನಲ್ಲಿ ರಾಮನಗರ ಜಿಲ್ಲೆಯ 4ಕ್ಕೆ ನಾಲ್ಕು ಸ್ಥಾನ JDS ಗೆಲ್ಲುತ್ತೆ. ನಮ್ಮನ್ನ ಅಷ್ಟು ಸುಲಭವಾಗಿ ಖಾಲಿ ಮಾಡಿಸಲು ಸಾಧ್ಯವಿಲ್ಲ. ನಿಖಿಲ್ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಸಂಘಟನೆ ಮಾಡೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಚನ್ನಪಟ್ಟಣದಲ್ಲಿ ಸೋತ್ರೂ ಜೆಡಿಎಸ್ ಸಮಾವೇಶ ನಡೆಸಿದೆ. ಕಾರ್ಯಕರ್ತರಿಗೆ ಧೈರ್ಯ ಹೇಳಿದೆ. ಈ ಸೋಲಿನ ಸೇಡು ತೀರಿಸುವ ಶಪಥ ತೊಟ್ಟ ದಳಪತಿಗಳು, ಅದಕ್ಕಾಗಿ ಶ್ರಮ ಹಾಕಲು ನಿರ್ಧಾರ ಮಾಡಿದ್ದಾರೆ.
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…