ಪುತ್ತೂರು: ಯುವಕನೋರ್ವ ನಾಪತ್ತೆಯಾಗಿರುವ ಬಗ್ಗೆ ಡಿ.1ರಂದು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲತಃ ರಾಜಸ್ಥಾನ ನಿವಾಸಿಯಾಗಿದ್ದು ಪ್ರಸ್ತುತ ಪರ್ಲಡ್ಕದಲ್ಲಿ ವಾಸ್ತವ್ಯವಿರುವ ರತನ್ ಸಿಂಗ್‌ರವರ ಪುತ್ರ ಲೋಕೇಂದರ್ ಸಿಂಗ್(22ವ.) ನಾಪತ್ತೆಯಾದ ಯುವಕ. ಬಿಬಿಎ ಪದವಿ ಪಡೆದಿರುವ ಲೋಕೇಂದರ್ ಸಿಂಗ್ ಕಳೆದ ಎರಡು ತಿಂಗಳ ಹಿಂದೆ ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದ. ನ.30ರಂದು ಎಂದಿನಂತೆ ಮನೆಯಲ್ಲಿ ಊಟ ಮಾಡಿ ಟಿವಿ ನೋಡಿಕೊಂಡಿದ್ದ. ಬೆಳಿಗ್ಗೆ ನೋಡುವಾಗ ಆತ ಮನೆಯಲ್ಲಿಲ್ಲದೆ ನಾಪತ್ತೆಯಾಗಿದ್ದಾನೆ. ಆತನ ಉಡುಪುಗಳು ತುಂಬಿದ್ದ ಬ್ಯಾಗ್, ದಾಖಲೆ ಪತ್ರಗಳು ಹಾಗೂ ಪಾಸ್‌ಪೋರ್ಟ್ ಸಹಿತ ಆತ ನಾಪತ್ತೆಯಾಗಿದ್ದಾನೆ. ಮೊಬೈಲ್ ಸ್ವಿಚ್ ಆಫ್ ಆಗಿದೆ. ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿಲ್ಲ ಎಂದು ಲೋಕೇಂದರ್ ಸಿಂಗ್ ತಂದೆ ರತನ್ ಸಿಂಗ್ ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದ ಯುವಕ ಸುಮಾರು 6 ಅಡಿ ಉದ್ದ, ಗೋದಿ ಮೈಬಣ್ಣ, ಉದ್ದನೆಯ ಕೂದಲು, ಗಡ್ಡಮೀಸೆ ಹೊಂದಿದ್ದು ಕನ್ನಡಕ ಧರಿಸಿರುತ್ತಾನೆ. ಕನ್ನಡ, ಹಿಂದಿ, ಇಂಗ್ಲಿಷ್, ಮಾರ್ವಾಡಿ ಭಾಷೆ ಬಲ್ಲವನಾಗಿದ್ದು ಆತನ ಗುರುತು ಪತ್ತೆಯಾದಲ್ಲಿ ನಗರ ಠಾಣೆಗೆ ಮಾಹಿತಿ ನೀಡುಂತೆ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.
ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲು ಪ್ರದೇಶ ಅ.1ರಿಂದ ದಕ್ಷಿಣ ಪಶ್ಚಿಮ ರೈಲ್ವೆಯ ಮೈಸೂರು ವಿಭಾಗದ ಅಧೀನಕ್ಕೆ…
ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದ ಕಾಕ್‌ಪಿಟ್‌ನಲ್ಲಿ ಸಹ ಪೈಲಟ್ ನಡೆಸಿದ ಎನ್ನಲಾದ ವಿಧ್ವಂಸಕ ಕೃತ್ಯದ ಯತ್ನವನ್ನು…
ಕೊಚ್ಚಿಯಲ್ಲಿ ವಿಜೃಂಭಣೆಯ 'ಕೇರಳ-ಕರ್ನಾಟಕ ಜಾನಪದ ಉತ್ಸವ': ಸಚಿವ ಅಬ್ದುಲ್ ಗಫೂರ್ ಅವರಿಂದ ಸಾಧಕರಿಗೆ ಪ್ರಶಸ್ತಿ ಪ್ರದಾನ...! ಕುಂಬಳೆ: ಕರ್ನಾಟಕ ಗಡಿ…
ಬಸ್‌ನಿಂದ ಇಳಿದು ರಸ್ತೆ ಬದಿಗೆ ತೆರಳುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕೂಲಿ ಕಾರ್ಮಿಕನೊಬ್ಬ ಸ್ಥಳದಲ್ಲೇ…
ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದ ಆರೋಪಿಗಳಿಬ್ಬರ ಮೃತದೇಹಗಳು ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದ ಚಾರ್ಸಲ್ ಪ್ರದೇಶದ…
ಉಡುಪಿ ನಗರದ ಹನುಮಾನ್ ಪೆಟ್ರೋಲ್ ಬಂಕ್ ಹಿಂಭಾಗ ನಿಲ್ಲಿಸಿದ್ದ ಶ್ರೀ ದುರ್ಗಾಂಬ ಬಸ್‌ವೊಂದು ಕಳವಾಗಿರುವ ಘಟನೆ ಸೆ.29ರಂದು ಬೆಳಕಿಗೆ ಬಂದಿದ್ದು,…