ರಾಜ್ಯದಲ್ಲಿ ಮತ್ತೆ ಎಚ್. ಎಸ್. ಆರ್. ಪಿ. ಗಡವು ವಿಸ್ತರಣೆ

ಬೆಂಗಳೂರು: ರಾಜ್ಯ ಸರ್ಕಾರ ಮತ್ತೊಮ್ಮೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಗೆ (HSRP) ನೀಡಿದ್ದ ಕೊನೆ ದಿನಾಂಕವನ್ನು ಈ ವರ್ಷದ ಕೊನೆಯ ದಿನ ಡಿ. ೩೧ದರವೆರೆಗೂ ವಿಸ್ತರಿಸಲು ನಿರ್ಧರಿಸಿದೆ.
ಈ ಹಿಂದೆ ಇದ್ದ ನ. ೩೦ ರ ವರೆಗಿನ ಗಡವನ್ನು ವಿಸ್ತರಿಸಲು ಸಾರಿಗೆ ಸಚಿವರಿಗೆ ಮತ್ತು ಸಾರಿಗೆ ಇಲಾಖೆ ಕಾರ್ಯದರ್ಶಿಗೆ ಆರ್ ಟಿ ಓ ಮನವಿ ಮಾಡಿತ್ತು. ಇದಕ್ಕೂ ಮೊದಲು ನಾಲ್ಕು ಬಾರಿ ಅವಧಿ ವಿಸ್ತರಣೆ ಹೊರಡಿಸಿದ್ದರೂ, ಹಲವಾರು ವಾಹನ ಮಾಲೀಕರು ಹಳೆಯ ನಂಬರ್ ಪ್ಲೇಟ್ ಬದಲಿಸುವ ಕಾರ್ಯಕ್ಕೆ ಮುಂದಾಗಿಲ್ಲ. ವಂಚನೆ ಮತ್ತು ಕಳ್ಳತನದಿಂದ ಹೆಚ್ಚುವರಿ ಭದ್ರತೆಗಳನ್ನು ಒಳಗೊಂಡಿರುವ HSRP ನಂಬರ್ ಪ್ಲೇಟನ್ನು ಸರ್ಕಾರ ಕಡ್ಡಾಯಗೊಸಿದ್ದು, ಈ ಅವಧಿ ವಿಸ್ತರಣೆ ವಾಹನ ಮಾಲೀಕರಿಗೆ ಹೊಸ ನಂಬರ್ ಪ್ಲೇಟ್ ಅಳವಡಿಸಲು ಸದಾವಕಾಶವಾಗಿದೆ. ಇಲ್ಲವಾದಲ್ಲಿ ಜನವರಿ ತಿಂಗಳಿನಿಂದ ದಂಡ ಕಟ್ಟಬೇಕಾದ ಅನಿವಾರ್ಯತೆ ಬರುತ್ತದೆ.



