ಪುತ್ತೂರು: ರಾಜ್ಯದ ಕಾಂಗ್ರೆಸ್ ಸರಕಾರ ರಾಜ್ಯದ ಎಲ್ಲಾ ಜನತೆಗಾಗಿ ಐದು ಗ್ಯಾರಂಟಿಗಳನ್ನು ತಂದಿದೆ. ಇವುಗಳ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಶಕ್ತಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಉಚಿತವಾಗಿ ಸರಕಾರಿ ಬಸ್ಸಿನಲ್ಲಿ ತೆರಳುವ ಬಿಜೆಪಿಯವರು ಬಸ್ಸಿನಿಂದ ಇಳಿದು ಶಕ್ತಿ ಯೋಜನೆಯೇ ಸರಿಯಿಲ್ಲ ಇದರಿಂದ ಕೆಎಸ್‌ಆರ್‌ಟಿಸಿ ದಿವಾಳಿಯಾಗಲಿದೆ ಎಂದು ದೂಷಣೆ ಮಾಡುತ್ತಾರೆ, ದಿವಾಳಿಯಾಗುವ ಭಯ ಬಿಜೆಪಿಗರಿಗೆ ಇದ್ದಲ್ಲಿ ಟಿಕೆಟ್ ಪಡೆದು ಪ್ರಯಾಣಿಸಲಿ ನಮ್ಮದೇನು ಅಭ್ಯಂಥರವಿಲ್ಲ ಎಂದು ನೆಟ್ಟಣಿಗೆ ಮುಡ್ನೂರು ಗ್ರಾಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ ಹೇಳಿದರು. ಕಾವಿನಲ್ಲಿ ಸೇವಾ ಸಿಂಧು ನೋಂದಣಿ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಐದು ಗ್ಯಾರಂಟಿಗಳನ್ನು ಬಡವರಿಗಾಗಿ ಕಾಂಗ್ರೆಸ್ ಜಾರಿಗೆ ತಂದಿದೆ. ಇಷ್ಟವಿದ್ದವರು ಪಡೆದುಕೊಳ್ಳಬಹುದು ಬೇಡವಾದವರು ಬಿಡಬಹುದು. ಯೋಜನೆಯ ಹೆಸರಿನಲ್ಲಿ ಬಡವರನ್ನು ಹಿಯಾಳಿಸುವ ಕೆಲಸವನ್ನು ಬಿಜೆಪಿ ನಿಲ್ಲಿಸಬೇಕು, ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು. ಸರಕರದ ಐದು ಗ್ಯಾರಂಟಿಯನ್ನು ಕರ್ನಾಟಕದ ಜನತೆ ಸ್ವಾಗತಿಸಿದ್ದಾರೆ. ಜನತೆಯ ಸ್ವಾಗತಕ್ಕೆ ಬಿಜೆಪಿ ಬೆಚ್ಚಿ ಬಿದ್ದಿದೆ, ಕಳೆದ ಐದು ವರ್ಷದಲ್ಲಿ ಭೃಷ್ಟ ಆಡಳಿತ ನಡೆಸಿದ ಬಿಜೆಪಿಗೆ ಈ ಬರಿ ಜನ ತಕ್ಕ ಪಾಠ ಕಲಿಸಿಯೂ ಅವರಿಗೆ ಬುದ್ದಿ ಬಂದಿಲ್ಲ ಎಂದು ಹೇಳಿದ ಅವರು ಗ್ಯಾರಂಟಿ ಯೋಜನೆ ಕಾಂಗ್ರೆಸ್ ಯೋಜನೆಯಾಗಿದೆ ನೀವು ಇಷ್ಟವಿದ್ದಲ್ಲಿ ಸ್ವೀಕರಿಸಿ ಇಲ್ಲವಾದಲ್ಲಿ ಮೌನವಾಗಿರಿ ಎಂದು ಬಿಜೆಪಿಗರಿಗೆ ಮಾತಿನ ಮೂಲಕ ತಿವಿದಿದ್ದಾರೆ.
ಹೊಸದಿಲ್ಲಿ: ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..! ಪ್ರಖ್ಯಾತ ಭಾಗವತ, ಸಂಘಟಕ ಪಟ್ಲ ಸತೀಶ್ ಶೆಟ್ಟಿ…
ಮಣಿಪಾಲ: ಸರಳೆಬೆಟ್ಟು ನಗರಸಭಾ ಸದಸ್ಯೆಯ ಸಹೋದರ ಆತ್ಮಹತ್ಯೆ ವೈಯಕ್ತಿಕ ಕಾರಣದಿಂದ ಮನನೊಂದ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ…
ಮಲೆಯಾಳ ಕಡ್ಡಾಯ ಮಸೂದೆ ವಿರೋಧಿ ಸಮಿತಿ ವತಿಯಿಂದ ಕೇರಳದ ವಿರೋಧ ಪಕ್ಷದ ನಾಯಕ ಸನ್ಮಾನ್ಯ ವಿ ಡಿ ಸತೀಶನ್ ಅವರನ್ನು…
ಉಡುಪಿ : ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರು ಅಲ್ಪಕಾಲದ ಅಸೌಖ್ಯದಿಂದ…
ಮೂಲತಃ ಪುತ್ತೂರು ಬೆಂದ್ರುತೀರ್ಥ ನಿವಾಸಿ, ಪ್ರಸಕ್ತ ರಾಯಿ ಸಮೀಪದ ಮಾಬೆಟ್ಟು ಎಂಬಲ್ಲಿ ವಾಸವಾಗಿದ್ದ ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್…
ದೆಹಲಿ ಕರ್ನಾಟಕ ಸಂಘದಿಂದ ಖ್ಯಾತ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ…