ಪರಂಪರಾಗತ, ಸಾಂಪ್ರದಾಯಿಕ ಬದ್ಧವಾಗಿ ಆಚರಿಸಿಕೊಂಡು ಬಂದಿರುವ ಚೇರ್ಕಾಡಿ ದೊಡ್ಡಮನೆಯ ಜನ್ನದೇವಿ ಕಂಬಳ ಉತ್ಸವವು ಡಿ. 9ಸೋಮವಾರ ದಂದು ಜರಗಲಿರುವುದು.

ದೈವಿಕ ಆರಾಧನೆಯ ಭಕ್ತಿಯ ಸಂಚಲನ, ತುಳುನಾಡಿನ ಸಂಸ್ಕೃತಿಯ ಸೊಗಡಿನ ಸಾಕ್ಷಾತ್ಕಾರ, ಜನ್ನದೇವಿ ನಾಗಬ್ರಹ್ಮನ ಆರಾಧನೆಯ ಸಂಭ್ರಮದೊಂದಿಗೆ ನಡೆಯುವ ಈ ಕಂಬಳ ಉತ್ಸವಕ್ಕೆ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ-ತಮ್ಮ ಓಟದ ಕೋಣಗಳೊಂದಿಗೆ ಆಗಮಿಸಿ, ಸ್ಪರ್ಧೆಯಲ್ಲಿ ಭಾಗವಹಿಸಿ ನಮ್ಮಿ ಸಾಂಪ್ರದಾಯಿಕ ಕಂಬಳವನ್ನು ಚಂದಗಾಣಿಸಿಕೊಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುವ ಜಯರಾಮ ಹೆಗ್ಡೆ
ಮತ್ತು ಚೇರ್ಕಾಡಿ ದೊಡ್ಡಮನೆ ಕುಟುಂಬಸ್ಥರು.




