ವಿದ್ಯಾರ್ಥಿಗಳ ನಡುವಿನ ಜಗಳ; ಸಾವಿನಲ್ಲಿ ಅಂತ್ಯ

ದೆಹಲಿ : ಬೆಳಗ್ಗೆ ಶಾಲೆಯಲ್ಲಿ ಪ್ರಾರ್ಥನೆಗೆ ಸಾಲು ನಿಲ್ಲುವ ವೇಳೆ ಆರನೇ ತರಗತಿಯ ಇಬ್ಬರು ವಿದ್ಯಾರ್ಥಿಗಳ ನಡುವೆ ನಡೆದ ಜಗಳ ಸಾವಿನಲ್ಲಿ ಅಂತ್ಯವಾಗಿದೆ. ದೆಹಲಿಯ ಚಿನ್ಮಯ ವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ.
ಡಿಸೆಂಬರ್ ೩ ರಂದು ನಡೆದ ಈ ಘಟನೆ ಸದ್ಯ ಸಾಮಾಜಿಕ ಮಾದ್ಯಮ ಸೇರಿದಂತೆ ಎಲ್ಲೆಡೆ ಹರಿದಾಡುತ್ತಿದೆ. ಇಬ್ಬರು ವಿದ್ಯಾರ್ಥಿಗಳ ನಡುವೆ ಶುರುವಾದ ಮಾತಿನ ಚಕಮಕಿ ಬೆಳೆದು ಜಗಳವಾಗಿ ಬದಲಾಗಿದೆ. ಶಿಕ್ಷಕರು ಮಧ್ಯ ಪ್ರವೇಶಿಸಿ ಜಗಳ ನಿಲ್ಲಿಸಿದರೂ, ಅಷ್ಟಾಗುವಾಗಲೇ ಓರ್ವನಿಗೆ ಗಾಯವಾಗಿ ಕುಸಿದಿದ್ದಾನೆ. ಶಿಕ್ಷಕರು ತಕ್ಷಣ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯದಿದ್ದಾರೆ. ಆದರೆ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.



