ಮುಲ್ಕಿ: ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾ ಗಣಪತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ 28ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ದೇವಸ್ಥಾನದ ಹೊರವಲಯದ ವೇದಿಕೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮಂಗಳೂರು ನೆಹರು ಯುವ ಕೇಂದ್ರದ ಆಡಳಿತಾಧಿಕಾರಿ ಜಗದೀಶ್ ಕೆ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರತ್ಕಲ್ ಅಗರಿ ಸಂಸ್ಥೆಯ ಮಾಲಕ ಅಗರಿ ರಾಘವೇಂದ್ರ ರಾವ್ ವಹಿಸಿ ಮಾತನಾಡಿ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸವಲತ್ತುಗಳನ್ನು ಒದಗಿಸಲು ಪ್ರಯತ್ನಿಸುತ್ತಿರುವ ಸಂಸ್ಥೆಯ ಕಾರ್ಯವೈಖರಿ ಶ್ಲಾಘನೀಯವಾಗಿದ್ದು ನಿರಂತರವಾಗಿ ನಡೆಯಲಿ ಎಂದರು

ಮುಖ್ಯ ಅತಿಥಿಗಳಾಗಿ ,ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗುರುರಾಜ್ ಎಸ್ ಪೂಜಾರಿ, ಉದ್ಯಮಿ ಹರಿಪ್ರಸಾದ್ ಶೆಟ್ಟಿ ತೋಕೂರುಗುತ್ತು ಬೆಂಗಳೂರು, ಗುತ್ತಿಗೆದಾರ ವಿಜಯಕುಮಾರ್ ಮಿತ್ರಪಟ್ನ ಮುಕ್ಕ, ಉದ್ಯಮಿ ಪ್ರವೀಣ್ ಕುಮಾರ್ ಬೊಳ್ಳೂರು, ಸುನಿಲ್ ಡಿ ರೈ ಮಂಗಳೂರು
ಶ್ರೀ ಸುಬ್ರಹ್ಮಣ್ಯ ಮಹಾ ಗಣಪತಿ ಸ್ಪೋರ್ಟ್ಸ್ ಕ್ಲಬ್ ನ ಗೌರವಾಧ್ಯಕ್ಷ ಪ್ರಶಾಂತ್ ಬೇಕಲ್, ಅಧ್ಯಕ್ಷ ದೀಪಕ್ ಸುವರ್ಣ,ಮಹಿಳಾ ಕಾರ್ಯಾಧ್ಯಕ್ಷೆ ಯಶೋದಾ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು
ಸಾಧಕ ವಿದ್ಯಾರ್ಥಿಗಳಾದ ಧ್ರುವ ಶ್ರಿಯಾನ್,ವಿಶಾಲ್ ಕೆ,ತ್ರಿಶಾ ಎಸ್ ಸುವರ್ಣ, ಅತ್ವಿಕ್ ಆರ್ ಶೆಟ್ಟಿ, ವ್ಯಾಸಕೃಷ್ಣ ಎಸ್ ರಾವ್, ರಿಜ್ಮಾ ಫಾತಿಮಾ,ದಿಶಾ, ನಿಧಿ ಯು ಕುಲಾಲ್,ದೀಕ್ಷಾ.ಆರ್, ಸಿರಿನ್ ಕರಿಷ್ಮಾ,ಸ್ನೇಹಾ ಆಚಾರ್ಯ ಪ್ರತಿಭಾ ಪುರಸ್ಕಾರ ಮೂಲಕ ಸನ್ಮಾನಿಸಲಾಯಿತು.ಕರಾಟೆ ಸಾಧಕರನ್ನು,ದಾನಿಗಳನ್ನು ಗೌರವಿಸಲಾಯಿತು ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯು ಅಧ್ಯಕ್ಷ ಗುರುರಾಜ ಎಸ್. ಪೂಜಾರಿ ರವರನ್ನು ಗೌರವಿಸಲಾಯಿತು
ಸಂಸ್ಥೆಯ ಸುರೇಶ್ ಶೆಟ್ಟಿ, ಸಂತೋಷ್ ದೇವಾಡಿಗ ಗೀತಾ ಸದಾನಂದ ನಿರೂಪಿಸಿದರು. ಸಂಪತ್ ದೇವಾಡಿಗ ಧನ್ಯವಾದ ಅರ್ಪಿಸಿದರು ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು



