ಜನ ಮನದ ನಾಡಿ ಮಿಡಿತ

Advertisement

ಸೋಮವಾರದಿಂದ ಗಡಿನಾಡು ಜಿಲ್ಲೆ ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ ಆರಂಭ

ಮಂಗಳೂರು: ಸೋಮವಾರದಿಂದ ಗಡಿನಾಡು ಜಿಲ್ಲೆ ಬೆಳಗಾವಿಯಲ್ಲಿ ಆರಂಭಗೊಳ್ಳುವ ವಿಧಾನ ಮಂಡಲ ಅಧಿವೇಶನ ಉತ್ತರ ಕರ್ನಾಟಕ ಕೇಂದ್ರಿತವಾಗಿ ಆಭಾಗದ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನ ಹರಿಸುವ ವಿಶ್ವಾಸವನ್ನು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ವ್ಯಕ್ತಪಡಿಸಿದ್ದಾರೆ. ಈ ಬಾರಿ ಅನುಭವ ಮಂಟಪ ಚಿತ್ರವನ್ನು ಮೊಗಸಾಲೆಯ ಎದುರು ಅನಾವರಣ ಮಾಡಲಾಗುವುದು ಎಂದೂ ಈ ಸಂದರ್ಭದಲ್ಲಿ ತಿಳಿಸಿದರು. ಮಂಗಳೂರಿನಲ್ಲಿಂದು ನಮ್ಮ ಪ್ರತಿನಿಧಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸದನ ಉತ್ತರಾಭಿಮುಖಿಯಾಗಿದ್ದರೂ ಶಾಸಕರು ಇಡೀ ರಾಜ್ಯದ ಸಂಗತಿಗಳ ಬಗ್ಗೆ ಫಲಪ್ರದ ಚರ್ಚೆ ನಡೆಸುವರೆಂಬ ಆಶಾವಾದವನ್ನು ಅವರು ವ್ಯಕ್ತಪಡಿಸಿದರು.

 

ಇತ್ತೀಚೆಗೆ ಸದನದ ಕಲಾಪ ನಡೆಯುವ ಕಾಲಾವಧಿ ಕಡಿಮೆಯಾಗಿರುವುದನ್ನು ಒಪ್ಪಿಕೊಂಡ ಅವರು ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ನೂರು ದಿನ ಸದನ ನಡೆಯಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಈಗ ವರ್ಷಕ್ಕೆ ನಲವತ್ತಾರು ದಿನಗಳ ಕಾಲ ಅಧಿವೇಶನ ನಡೆಯುತ್ತಿದೆ.ಇಡೀ ದೇಶಕ್ಕೆ ಹೋಲಿಸಿದರೆ ನಾವು ಮುಂಚೂಣಿಯಲ್ಲಿದ್ದೇವೆ. ಕೆಲವು ರಾಜ್ಯಗಳಲ್ಲಿ ಅಧಿವೇಶನ ಅವಧಿ ಇದಕ್ಕಿಂತ ಕಡಿಮೆ ಇದೆ. ಹಂತ ಹಂತವಾಗಿ ರಾಜ್ಯದಲ್ಲಿ ಅರವತ್ತು ದಿನಗಳ ಕಾಲ ಅಧಿವೇಶನ ನಡೆಸಬೇಕು ಎಂಬ ಆಶಯವಿದೆ ಎಂದರು. ಅದು ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದೂ ವಿಧಾನಸಭಾಧ್ಯಕ್ಷರು ಹೇಳಿದರು.
ಸದನ ನಡೆಸುವ ಖರ್ಚು ದುಬಾರಿಯಾಗಿದೆ ಮತ್ತು ಗುಣಮಟ್ಟದ ಚರ್ಚೆಗಳು ನಡೆಯುತ್ತಿಲ್ಲ ಎಂಬ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಖಾದರ್ ಕಾಲ ಕಾಲಕ್ಕೆ ಖರ್ಚು ಹೆಚ್ಚುತ್ತಾ ಹೋಗಿದೆ, ಅದು ಅನಿವಾರ್ಯ,ಆದರೆ ಚರ್ಚೆಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಸರ್ವ ಪ್ರಯತ್ನ ಮಾಡಲಾಗುತ್ತಿದೆ.ಜನರಿಗಾಗಿ ನಡೆಸುವ ಕಲಾಪ ನಿರರ್ಥಕವಲ್ಲ, ಹಿಂದಿನ ಕಾಲಕ್ಕೆ ಹೋಲಿಸಿದಾಗ ಮತ್ತು ತುಲನಾತ್ಮಕವಾಗಿ ನೋಡಿದಾಗ ಗುಣಮಟ್ಟದ ಚರ್ಚೆ ನಡೆಯುತ್ತಿಲ್ಲ ಎಂಬುದರಲ್ಲಿ ಆಂಶಿಕ ಸತ್ಯವಿದೆ ಎಂದರು. ಖರ್ಚು ವೆಚ್ಚದ ಬಗ್ಗೆ ಪ್ರತಿಕ್ರಿಯಿಸಿದ ಅವರು ಮೊದಲು ದೂರದರ್ಶನಕ್ಕೆ ಮೂರುವರೆ ಕೋಟಿ ಕೊಡುತ್ತಿದ್ದೇವು. ಈಗ ವಾರ್ತಾ ಇಲಾಖೆಯ ಮೂಲಕ ನಿಭಾಯಿಸುತ್ತಿರುವುದರಿಂದ ಆ ಖರ್ಚು ಕಡಿಮೆಯಾಗಿದೆ ಎಂದರು

ಬೆಳಗಾವಿಯಲ್ಲಿ ಶಾಸಕರ ಭವನ ನಿರ್ಮಾಣಕ್ಕೆ ಸಂಬಂಧಿಸಿ ಕೇಳಿ ಬರುತ್ತಿರುವ ಆಗ್ರಹ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ‘ನಮ್ಮಲ್ಲಿ ಜಾಗವಿದೆ, ಅದನ್ನು ಬಳಸಿಕೊಂಡು ಸರಕಾರಿ ಏಜೆನ್ಸಿಗಳ ಜೊತೆಗೂಡಿ ಶಾಸಕರ ಭವನ ನಿರ್ಮಾಣದ ಮಾತುಕತೆ ಪ್ರಗತಿಯಲ್ಲಿದೆ. ಅಧಿವೇಶನ ನಡೆಯುವಾಗ ಅದರ ಕೊಠಡಿಗಳನ್ನು ಶಾಸಕರಿಗೆ ಮೀಸಲಿಟ್ಟು ಉಳಿದ ಅವಧಿಗೆ ಅವುಗಳನ್ನು ಪ್ರವಾಸೋದ್ಯಮ ಇಲಾಖೆ ಮೂಲಕ ಪ್ರವಾಸಿಗರಿಗೆ ನೀಡುವ ಚಿಂತನೆ ನಡೆದಿದೆ. ಆದರೆ ಎಲ್ಲಾ ಕಾಲಾವಧಿಯಲ್ಲಿಯೂ ಶೇಕಡಾ ಹತ್ತರಷ್ಟು ಕೊಟಡಿಗಳನ್ನು ಶಾಸಕರಿಗೆ ಮೀಸಲಿರಿಸಲಾಗುವುದು ಎಂದರು.

ಸದನದಲ್ಲಿ ಪ್ರತಿಭಟನೆಗಳು, ಧರಣಿಗಳಿಂದ ಸಮಯ ಪೋಲಾಗುತ್ತಿದೆ. ಸದನ ನಾಯಕರ ಜೊತೆ ಸಮಾಲೋಚನೆ ಮಾಡಿ ಇಂತಹದ್ದನ್ನು ತಪ್ಪಿಸಲು ‌ಸಾಧ್ಯವಿಲ್ಲವೇ ಎಂಬ ಪ್ರಶ್ನೆಗೆ ‘ಪ್ರಶ್ನೋತ್ತರ ಅವಧಿಯಲ್ಲಿ ಕಿತ್ತಾಟಗಳು ಅಧಿಕವಾಗುತ್ತಿವೆ ಎಂಬುದು ನಿಜ, ಆದರೆ ಪ್ರತಿಪಕ್ಷ ನಾಯಕರಿಗೆ ಮಾತನಾಡಲು ಅವಕಾಶ ಕೊಡಲೇಬೇಕಾಗುತ್ತದೆ, ಸಾಧ್ಯವಾದಷ್ಟು ಬಿಹೈಂಡ್ ದ ಸ್ಕ್ರೀನ್ ಬಗೆಹರಿಸಲು ಯತ್ನಿಸುತ್ತೇವೆ, ಮತ್ತು ಪ್ರತಿಭಟನೆಗಳು ಪ್ರಜಾಪ್ರಭುತ್ವದ ಸೌಂದರ್ಯ, ಅವುಗಳಿಗೆ ಅವಕಾಶ ನಿರಾಕರಿಸಿದರೆ ಜನರಿಗೆ ವ್ಯವಸ್ಥೆಯ ಮೇಲೆ ನಂಬಿಕೆ ಉಳಿಯುವುದಾದರೂ ಹೇಗೆ ಎಂದವರು ಮರುಪ್ರಶ್ನೆ ಹಾಕಿದರು.
ವಿಧೇಯಕಗಳು, ತಿದ್ದುಪಡಿ ಮಸೂದೆಗಳು ಅಜೆಂಡಾದಲ್ಲಿ ಕೊನೆಯಲ್ಲಿರುವುದರಿಂದ ಅವುಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯದೆ ಮುಂದೂಡಿಕೆಯಾಗುತ್ತಿವೆ, ಇವುಗಳಿಗೆ ಪ್ರತ್ಯೇಕ ಅಜೆಂಡ ಅಥವಾ ಕೊನೆಯಲ್ಲಿ ಇಡುವುದಕ್ಕೆ ಬದಲು ಮೊದಲೇ ಸಮಯ ನಿಗದಿ ಮಾಡಬಹುದಲ್ಲವೇ ಎಂಬ ಪ್ರಶ್ನೆಗೆ ನಿಲುವಳಿ ಸೂಚನೆಗಳು, ಗದ್ದಲಗಳಿಂದ ಮುಂದೂಡಿಕೆಗಳು ಬಂದಾಗ ಮಸೂದೆಗಳು ಕೊನೆಗೆ ತಳ್ಳಲ್ಪಡುತ್ತವೆ, ಅವುಗಳಿಗೆ ಪ್ರತ್ಯೇಕ ಅಜೆಂಡ ತಯಾರಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು

Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

error: Content is protected !!