ಯುವತಿಯೋರ್ವಳಿಗೆ ಸಹಾಯ ಮಾಡಲು ಬಂದ ಅನ್ಯಕೋಮಿನ ಯುವಕ ಆಕೆಯ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಕಳೆದ ಜುಲೈ 21 ರಂದು ಯುವತಿಯ ಕಾರು ಕದ್ರಿಯಲ್ಲಿ ಕೆಟ್ಟು ನಿಂತಿತ್ತು. ಇದೇ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಸವಾರ ಮೊಹಮ್ಮದ್ ಶಫಿನ್ ಕಾರನ್ನ ಸರಿಪಡಿಸಿದ್ದ. ಬಳಿಕ ಆಕೆಯನ್ನ ಅದೇ ಕಾರಿನಲ್ಲಿ ಕೊಡಿಯಾಲ್ ಬೈಲ್‌ನ ಆಕೆಯ ಅಪಾರ್ಟ್ ಮೆಂಟ್ ಗೆ ಬಿಟ್ಟು ಬಂದಿದ್ದು ಈ ವೇಳೆ ಆಕೆಯ ಮೊಬೈಲ್ ನಂಬರ್ ಪಡೆದಿದ್ದ. ಯುವತಿ ಅಪಾರ್ಟ್ ಮೆಂಟ್ ನಲ್ಲಿ ಏಕಾಂಗಿಯಾಗಿದ್ದು ಆಗಸ್ಟ್ 1 ರಂದು ಯುವತಿಯ ಮನೆಯ ಫ್ರಿಡ್ಜ್ ಕೆಟ್ಟು ಹೋಗಿದ್ದು ಸಹಾಯಕ್ಕಾಗಿ ಶಫಿನ್ ಗೆ ಕರೆ ಮಾಡಿದ್ದಳು.
ಆತ ರಿಪೇರಿಯವರನ್ನು ಕರೆಸಿ ರಿಪೇರಿ ಮಾಡಿಸಿ ಕಳುಹಿಸಿದ್ದಾನೆ. ಬಳಿಕ ಆಕೆಗೆ ಹಣ್ಣು ಹಾಗೂ ಜ್ಯೂಸ್ ನೀಡಿದ್ದ, ಅದರಲ್ಲಿ ಮತ್ತು ಬರಿಸೋ ವಸ್ತು ಬೆರಸಿದ್ದರಿಂದ ಆಕೆ ಪ್ರಜ್ಞೆ ತಪ್ಪಿದ್ದಳು. ಬಳಿಕ ಆತ ದೈಹಿಕ ಸಂಪರ್ಕ ಬೆಳೆಸಿ,ವೀಡಿಯೋ ಮಾಡಿ ಮುಂದೆಯೂ ಸಹಕಾರ ನೀಡಬೇಕು,ಇಲ್ಲದಿದ್ದಲ್ಲಿ ವೀಡಿಯೋ ವೈರಲ್ ಮಾಡೋ ಬೆದರಿಕೆ ಹಾಕಿದ್ದ. ಬಳಿಕ ಆತನ ಅಣ್ಣ ಮೊಹಮ್ಮದ್ ಶಿಯಾಬ್ ಎಂಬಾತನೂ ಮನೆಗೆ ಬಂದು ಅತ್ಯಾಚಾರಕ್ಕೆ ಯತ್ನಿಸಿದ್ದ,ಅಂದು ಆಕೆ ತಪ್ಪಿಸಿಕೊಂಡಿದ್ದು ಮನೆಯಲ್ಲಿದ್ದ 62 ಸಾವಿರ ರೂಪಾಯಿ ಕಳವು ಮಾಡಿದ್ದ. ಬಳಿಕ ಇಬ್ಬರೂ ಸಹೋದರರು ವಿದೇಶಕ್ಕೆ ಪರಾರಿಯಾಗಿದ್ದರು. ಇದೀಗ ಯುವತಿ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ಸರ್ಕಾರ ಅಧಿಕೃತವಾಗಿ ಘೋಷಿಸಿರುವ ದಸರಾ ರಜೆಯ ಅವಧಿಯಲ್ಲಿ ತರಗತಿ ಹಾಗೂ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಶ್ರೀರಾಮ ಸೇನೆಯ ರಾಷ್ಟ್ರೀಯ…
ತಾಲೂಕಿನ ನಾಲ್ಕೂರು ಗ್ರಾಮದ ಪಾಡಿ ಎಂಬಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮಾನವನ ಅಸ್ಥಿಪಂಜರ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬಳಂಜ ಪಾಡಿ…
ನಗರದ ಗೀತಾಂಜಲಿ ಸಿಲ್ಕ್ಸ್ ರಸ್ತೆಯಲ್ಲಿ ಸಾವಿರಾರು ರೆಕ್ಕೆ ಗೆದ್ದಲುಗಳು ಏಕಕಾಲದಲ್ಲಿ ಹಾರಾಡಿದ್ದು, ಸಾರ್ವಜನಿಕರ ಗಮನ ಸೆಳೆಯಿತು. ರಸ್ತೆಯ ಇಕ್ಕೆಲಗಳಲ್ಲಿರುವ ಅಂಗಡಿಗಳ…
ಬಂಟರ ಸಂಘ ಮುಂಬೈನ ಜ್ಞಾನ ಮಂದಿರ ಸಮಿತಿಯ ವತಿಯಿಂದ ಸಾರ್ವಜನಿಕ ಸತ್ಯನಾರಾಯಣ ಪೂಜಾ ಉದ್ಯಾಪನ ಕಾರ್ಯಕ್ರಮವು ಸೆ.26ರಂದು ಕುರ್ಲಾದ ಶ್ರೀಮತಿ…
ಎಬಿವಿಪಿ ಸಂಘಟನೆಯ ಮೂಲಕ ಸಾಮಾಜಿಕ ಹಾಗೂ ಸಂಘಟನಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಪ್ರದೀಪ್ ಅಜ್ಜಿಬೆಟ್ಟು ಅವರನ್ನು ಹಿಂದೂ ಜಾಗರಣಾ ವೇದಿಕೆಯ…
ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬ್ಯಾಟಿಯಾಣಿ ಎಂಬಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಬೈಂದೂರು ಪೊಲೀಸರು…