ಕರಾವಳಿ

ಸುವರ್ಣ ಸೌಧದ ಬಳಿ ನೆಟ್ಟಿದ್ದ ಗಿಡಕ್ಕೆ ಒಂದು ವರ್ಷ ಗಿಡ ಪರಿಶೀಲಿಸಿ ಗೊಬ್ಬರ ಹಾಕಿದ ಶಾಸಕ ಅಶೋಕ್ ರೈ


ತಾನು ಶಾಸಕನಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಅಧಿವೇಶನದಲ್ಲಿ ಭಾಗಿಯಾದ ದಿನದಂದು ಆ ಸವಿನೆನಪಿಗೋಸ್ಕರ ಸುವರ್ಣ ಸೌಧದ ಬಳಿ ಗಿಡವೊಂದನ್ನು ನೆಟ್ಟಿದ್ದು ಆ ಗಿಡವನ್ನು ಒಂದು ವರ್ಷದ ಬಳಿಕ ವಿಕ್ಷಣೆ ಮಾಡಿದ ಮತ್ತೂರು ಶಾಸಕ ಅಶೋಕ್‌ ರೈ ಅವರು ಅದಕ್ಕೆ ಗೊಬ್ಬರ ಹಾಕಿ ನೀರು ಹಾಕುವ ಮೂಲಕ ತಮ್ಮ ಪರಿಸರ ಪ್ರೇಮವನ್ನು ಮೆರೆದಿದ್ದಾರೆ.

 

ಪರಿಸರ ಹಾಗೂ ಅದರಲ್ಲೂ ವಿಶೇಷವಾಗಿ ಪಲವಸ್ತುಗಳ ಗಿಡವನ್ನು ಕಡಿಯಬಾರದು ಅವುಗಳನ್ನು ನೆಟ್ಟು ಪೋಷಣೆ ಮಾಡಬೇಕು ಎಂದು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ತಿಂಗಳಲ್ಲೇ ತನ್ನ ಕ್ಷೇತ್ರದ ಜನತೆಗೆ ಮನವಿ ಮಾಡಿದ್ದರು. ಕಳೆದ ಮಳೆಗಾಲದಲ್ಲಿ ಪುತ್ತೂರು ಉಪ್ಪಿನಂಗಡಿ ರಸ್ತೆಯ ಇಕ್ಕೆಲಗಳಲ್ಲಿ ಕಾಟು ಮಾವು ಹಾಗೂ ಹಲಸಿನ ಗಿಡವನ್ನು ನಾಟಿ ಮಾಡಿಸಿದ್ದರು. ರಸ್ತೆ ಬದಿಯಲ್ಲಿರುವ ಕಾಟುಮಾವು, ಹಲಸಿನ ಗಿಡವನ್ನು ಯಾವುದೇ ಕಾರಣಕ್ಕೂ ಕಡಿಯಬಾರದು ಮತು ಕಾಟು ಮಾವು ಆಗುವ ಸಂದರ್ಭದಲ್ಲಿ ಮಾವಿನ ಮಿಡಿಗಾಗಿ ಮರವನ್ನು ಏಲಂ ಕರೆಯದಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಶಾಸಕನಾಗಿ ಆಯ್ಕೆಯಾದ ಬಳಿಕ ಸುವರ್ಣ ಸೌಧದಲ್ಲಿ ನಡೆದ ಅಶೋಕ್ ರೈ ಅವರ ಮೊದಲ ಅಧಿವೇಶನದ ನೆನಪಿಗಾಗಿ ಸೌಧದ ಪಕ್ಕದಲ್ಲೇ ಹಲಸಿನ ಗಿಡವನ್ನು ನೆಟ್ಟಿದ್ದರು. ಮಂಗಳವಾರದಂದು ಗಿಡವನ್ನು ಪರಿಶೀಲನೆ ಮಾಡಿದ ಶಾಸಕರು ಗಿಡಕ್ಕೆ ಗೊಬ್ಬರ ಹಾಗೂ ನೀರು ಹಾಕಿದ್ದಾರೆ ಇವರ ಜೊತೆ ಅಧಿಕಾರಿಗಳೂ ಉಪಸ್ಥಿತರಿದ್ದರು.

ಕೋಟ್
ಸುವರ್ಣ ಸೌಧದಲ್ಲಿ ನಡೆದ ಮೊದಲ ಅಧಿವೇಶನದಲ್ಲಿ ಭಾಗವಹಿಸಿದ ಸವಿನೆನಪಿಗೋಸ್ಕರ ಸೌಧದ ಬಳಿ ಹಲಸಿನ ಗಿಡವೊಂದನ್ನು ನೆಟ್ಟಿದ್ದೆ. ಗಿಡ ನೆಟ್ಟು ಒಂದು ವರ್ಷದ ಬಳಿಕ ಅದ ನ್ನು ಪರಿಶೀಲನೆ ಮಾಡಿದೆ, ಗಿಡ ಚೆನ್ನಾಗಿ ಬೆಳೆದಿದೆ. ಅದಕ್ಕೆ ಗೊಬ್ಬರ ಮತ್ತು ನೀರು ಹಾಕಿ ಪೋಷಣೆ ಮಾಡುವಂತೆ ಸೂಚಿಸಿದ್ದೇನೆ. ಆ ಮರ ಬೆಳೆದು ದೊಡ್ಡದಾದರೆ ಅದುವೇ ನನಗೆ ದೊಡ್ಡ ಸಂತೋಷ, ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿಯೂ ಮುಂದಿನ ದಿನಗಳಲ್ಲಿ ಗಿಡ ನೆಡುವ ಅಭಿಯಾನ ಆರಂಭಿಸಿ ರಸ್ತೆ ಬದಿಯಲ್ಲಿ ಖಾಲಿ ಇರುವ ಜಾಗದಲ್ಲಿ ಫಲವಸ್ತು ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದೇನೆ ಇದಕ್ಕಾಗಿ ಪರಿಸರ ಪ್ರೇಮಿ ಸಾರ್ವಜನಿಕ ಸಂಪೂರ್ಣ ಸಹಕಾರವನ್ನು ಬೇಡುತ್ತಿದ್ದೇನೆ.

ಅಶೋಕ್ ರೈ ಶಾಸಕರು,ಪುತ್ತೂರು ವಿಧಾನಸಭಾ ಕ್ಷೇತ್ರ

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಮಂಜುನಾಥ್ ಶೆಟ್ಟಿ ದಂಪತಿಗೆ ಸನ್ಮಾನ

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪೋಷಕ ಸದಸ್ಯರೂ, ಬಂಟ್ಸ್ ಅಸೋಸಿಯೇಷನ್ ನಾರ್ತ್ ಅಮೆರಿಕಾ (BANA) ಅಧ್ಯಕ್ಷರೂ ಆದ ಶ್ರೀ ಮಂಜುನಾಥ್…

18 hours ago

ಉಡುಪಿ: ಕರಾವಳಿ ನಿವಾಸಿಗಳ ಸಂಕಷ್ಟಕ್ಕೆ ಸ್ಪಂದಿಸಿದ ಜಿಲ್ಲಾಡಳಿತ…!

ಉಡುಪಿ ತಾಲೂಕಿನಲ್ಲಿ ಕಡಲ್ಕೊರೆತದಿಂದ ಹಾನಿಗೊಳಗಾಗಿರುವ ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಕಾಪು, ಪೊಲಿಪು ಹಾಗೂ ಕಟಪಾಡಿ-ಮಟ್ಟು ಪ್ರದೇಶಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.…

19 hours ago

ಬಂಟ್ವಾಳ: ಮಾಣಿ ಸಮೀಪ ಜೋಗಿಬೆಟ್ಟು ರಸ್ತೆ ಕೆರೆಯಂತಾದ ದೃಶ್ಯ….!

ಮಳೆ ಸುರಿದರೆ ಸಾಕು, ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಪೆರಾಜೆ ಗ್ರಾಮದ ಜೋಗಿಬೆಟ್ಟು ರಸ್ತೆಯಲ್ಲಿ ಸಂಚಾರ ದುಸ್ತರವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗೆ…

19 hours ago

ವಾಷಿಂಗ್ಟನ್: ಉತ್ತರ ಅಮೆರಿಕಾ ಬಂಟರ ಸಂಘದ `ದಿಬ್ಬಣ’ ಮಹಾ ಅಧಿವೇಶನ..!

ಭಾರತ ಮತ್ತು ಅಮೆರಿಕಾಗಳು ಅನೇಕ ಸಾಮಾನ್ಯ ಅಂಶಗಳನ್ನು ಹೊಂದಿವೆ. ಅಮೆರಿಕಾ ಅವಕಾಶಗಳ ನಗರ. ಇಲ್ಲಿಗೆ ವಲಸೆ ಬಂದು ವಾಸಿಸುತ್ತಿರುವ ಭಾರತೀಯರು…

23 hours ago

ಮಂಗಳೂರು: ಮಂಗಳೂರಿನಲ್ಲಿ ಎಐ ಸಿ.ಸಿ ಕ್ಯಾಮರಾಗಳ ಅಳವಡಿಕೆ….!

ವಾಹನ ದಟ್ಟಣೆ ಹೆಚ್ಚುತ್ತಿರುವ ನಗರದಲ್ಲಿ ಸುಗಮ ಸಂಚಾರಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಡಿ 181ಕ್ಕೂ ಅಧಿಕ ಎಐ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.…

23 hours ago

ಬಂಟ್ವಾಳ: ಮಳೆ ಅನಾಹುತ: ರಾಯಿಯ ಜೀವನ್ ಪಿಂಟೋ ಮೃತದೇಹ ಪ*ತ್ತೆ…..!

ರಾಯಿ ಗ್ರಾಮದ ಪಾಂಚಕೋಡಿ ನಿವಾಸಿ ಜೋಸೆಫ್ ಪಿಂಟೋ ಎಂಬವರ ಪುತ್ರ ಜೀವನ್ ಪಿಂಟೊ ಅವರ ಚಪ್ಪಲಿ ಮತ್ತು ಟಾರ್ಚ್ ಶನಿವಾರ…

23 hours ago