ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್. ಜಯಣ್ಣ ಇನ್ನಿಲ್ಲ
ಕೊಳ್ಳೇಗಾಲ : ಕೊಳ್ಳೇಗಾಲದ ಮಾಜಿ ಶಾಸಕರೂ ಆಗಿರುವ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್. ಜಯಣ್ಣ ಇಂದು (ಮಂಗಳವಾರ)
ಮದ್ಯಾಹ್ನ ತೀವ್ರ ಎದೆನೋವಿನಿಂದ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಇನ್ನೊಂದು ಸಾವಿನ ನೋವನ್ನು ರಾಜ್ಯ ರಾಜಕೀಯ ಜಗತ್ತು ನೋಡುವಂತಾಗಿದೆ.
ಕೊಳ್ಳೇಗಾಲದಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಎಸ್. ಜಯಣ್ಣ ಆ ಭಾಗದ ಬಲಿಷ್ಠ ರಾಜಕಾರಣಿ ಎನಿಸಿಕೊಂಡಿದ್ದರು. ಮುಖ್ಯ ಮಂತ್ರಿ ಸಿದ್ದರಾಮಯ್ಯರ ಆಪ್ತರೂ ಆಗಿದ್ದರು. ಶನಿವಾರವಷ್ಟೇ ಮುಖ್ಯ ಮಂತ್ರಿ ಜಯಣ್ಣರವರ ಗೃಹ ಪ್ರವೇಶಕ್ಕೆ ಆಗಮಿಸಿದ್ದರು.
ಹೃದಯಾಘಾತದಿಂದ ಎಸ್. ಜಯಣ್ಣ ನಿಧನರಾಗಿದ್ದರೆಂದು ಆಸ್ಪತ್ರೆಯಲ್ಲಿ ವೈದ್ಯರು ತಿಳಿಸಿದ್ದಾರೆ. ಬುಧವಾರ ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದಲ್ಲಿ ಇವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳಿಂದ ಮಾಹಿತಿ ದೊರಕಿದೆ.



