ಬಂಟ್ವಾಳ: ಪುರಸಭಾ ವ್ಯಾಪ್ತಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಸಮಸ್ಯೆಯಿಂದ ಸಾರ್ವಜನಿಕರಿಗೆ ಉಂಟಾದ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವ ದೃಷ್ಟಿಯಿಂದ ಬಂಟ್ವಾಳ ಪುರಸಭಾ ಅಧ್ಯಕ್ಷ ವಾಸು ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಪುರಸಭಾ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಪುರಸಭೆಯ ಸದಸ್ಯರ ತುರ್ತು ಸಭೆ ನಡೆಯಿತು.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಅಲ್ಲಲ್ಲಿ ಕುಡಿಯುವ ನೀರಿನ ಪೈಪ್ ಒಡೆದುಹೋಗಿ ಬೇಕಾಬಿಟ್ಟಿ ನೀರು ಪೋಲಾಗುತ್ತಿರುವುದರಿಂದ ಜನರಿಗೆ ಸರಿಯಾದ ಸಮಯದಲ್ಲಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಆದರೆ ಈ ವಿಚಾರವಾಗಿ, ಇಲಾಖೆ ಹಾಗೂ ಗುತ್ತಿಗೆದಾರರು ಸ್ಪಂದನೆ ನೀಡುತ್ತಿಲ್ಲ ಎಂಬ ಆರೋಪ ವ್ಯಕ್ತವಾಗಿದ್ದು, ಪರಿಹಾರದ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆ ನಡೆಯಿತು.
ಕಾಮಗಾರಿಯ ವೇಳೆ ಹಾಗೂ ಬಳಿಕ ನಡೆಯುವ ಸಮಸ್ಯೆಗಳಿಗೆ ಸೂಕ್ತವಾದ ರೀತಿಯಲ್ಲಿ ಪರಿಹಾರಕ್ಕೆ ಸಂಬಂಧಿಸಿದಂತೆ ಕ್ರಮಕೈಗೊಳ್ಳುವ ಜವಬ್ದಾರಿ ನಮ್ಮದು ,ಎಲ್ಲವನ್ನು ಮಾಡಿಕೊಡುವ ಭರವಸೆಯನ್ನು ಒಳಚರಂಡಿ ಇಲಾಖೆಯ ಎ.ಇ.ಇ.ಅಜಯ್ ಆರ್ ವಿ. ಅವರು ನೀಡಿದರು.
2019 ರ ಹಳೇಯ ಯೋಜನೆಯಲ್ಲಿ ಆಗಿರುವ ಸಮಸ್ಯೆಗಳ ಬಗ್ಗೆ ಜ.31 ರ ಒಳಗೆ ದೂರನ್ನು ನೀಡಿದರೆ ಸೂಕ್ತವಾದ ಕ್ರಮಕೈಗೊಳ್ಳಲು ಸಾಧ್ಯ. ಬಳಿಕ ಬಂದ ದೂರುಗಳನ್ನು ಸ್ವೀಕರಿಸಲು ಇಲಾಖೆಯಿಂದ ಸಾಧ್ಯವಿಲ್ಲ ಎಂದು ತಿಳಿಸಿದರು.ಪುರಸಭಾ ಸದಸ್ಯರಗಳ ವಾರ್ಡ್ ಗಳಲ್ಲಿರುವ ಸಮಸ್ಯೆಗಳನ್ನು ಪುರಸಭೆಯ ಮುಖಾಂತರ ನಮ್ಮ ಇಲಾಖೆಗೆ ಕಳುಹಿಸಿಕೊಡಿ, ಎಲ್ಲವನ್ನು ಪರಿಶೀಲಿಸಿ ಹಂತಹಂತವಾಗಿ ಬಗೆಹರಿಸಲು ಮುಂದಾಗುವ ಬಗ್ಗೆ ಒಳಚರಂಡಿ ಇಲಾಖೆಯ ಸಹಾಯಕ ಇಂಜಿನಿಯರ್ ಶೋಭಾಲಕ್ಮಿ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುವ ಕಂಪೆನಿಯವರು ಸಿಕ್ಕಿಸಿಕ್ಕಿದ್ದೆಲ್ಲಾ ಬಹುಗ್ರಾಮ ಕುಡಿಯುವ ನೀರಿನ ಪೈಪ್ ಲೈನ್ ಗಳನ್ನು ತುಂಡು ಮಾಡಿ ಸಮಸ್ಯೆ ಉಂಟು ಮಾಡಿದ್ದಾರೆ . ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಜಮೀನಿನ ಸಮಸ್ಯೆ ಕಂಡು ಬಂದ ಕಡೆಗಳಲ್ಲಿ ನೀರಿನ ಪೈಪ್ ಗಳನ್ನು ತುಂಡು ಮಾಡಿ ಎಂಡ್ ಕ್ಯಾಪ್ ಹಾಕಿ ಅನ್ಯಾಯ ಮಾಡುತ್ತಿರುವ ಬಗ್ಗೆ ಸಭೆಯಲ್ಲಿ ಇಂಜಿನಿಯರ್ ಶೋಭಾಲಕ್ಮಿ ಸದಸ್ಯರ ಗಮನಕ್ಕೆ ತಂದರು.
ಅಮೃತ್ ಯೋಜನೆಯ ಕಾಮಗಾರಿ ಇನ್ನು ಕೂಡ ಮುಗಿದಿಲ್ಲ, ಹೀಗಾಗಿ ಕಾಮಗಾರಿ ಮುಗಿಯುವ ಸಂದರ್ಭದಲ್ಲಿ ಟೆಂಡರ್ ನಲ್ಲಿ ಹೇಳಲಾಗಿರುವ ಸೂಚನೆಯಂತೆ ಎಲ್ಲವನ್ನು ಮುಗಿಸುವ ಬಗ್ಗೆ ಸಭೆಗೆ ಸ್ಪಷ್ಟನೆ ನೀಡಿದರು. ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ಆಗಿರುವ ಸಮಸ್ಯೆಗಳಿಗೆ ಎರಡು ವಾರದೊಳಗೆ ವ್ಯವಸ್ಥೆ ಮಾಡುವ ಭರವಸೆಯನ್ನು ನೀಡಿದರು.
ಸದಸ್ಯರ ಆಕ್ರೋಶ…..
ಪಾಣೆಮಂಗಳೂರು ವಾರ್ಡ್ ಗಳಿಗೆ ನೀರು ಬರದೆ ಜನರು ನಮಗೆ ಉಗಿಯುತ್ತಿದ್ದಾರೆ. ನೀವು ಸುಮ್ಮನೆ ಕಥೆ ಹೇಳುತ್ತಾ ಕೂರಬೇಡಿ,ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಿ,ಇಲ್ಲದಿದ್ದರೆ ನಾನು ಈ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲು ತಯಾರಿದ್ದು,ಸಭೆ ನಡೆಸಲು ಬಿಡುವುದಿಲ್ಲ ,ಕಾಟಾಚಾರಕ್ಕೆ ಸಭೆ ನಡೆಸುತ್ತೀರಿ ಎಂದು ಸಿದ್ದೀಕ್ ಬೋಗೊಡಿ ಆಕ್ರೋಶ ವ್ಯಕ್ತಪಡಿಸಿದರು
ನೀರಿನ ಪೈಪ್ ಲೈನ್ ಗಳು ಡ್ಯಾಮೇಜ್ ಆಗಿದೆ, ಪೈಪ್ ಲೈನ್ ಆಗಿರುವ ಒಂದೇ ಒಂದು ಮನೆಗೆ ನೀರು ಹೋಗುವುದಿಲ್ಲ ಎಂದು ಪುರಸಭಾ ಸದಸ್ಯೆ ಜೆಸಿಂತ ಅವರು ಆರೋಪ ಮಾಡಿದರು.
ದಿನದ 24 ಗಂಟೆ ಮನೆಗಳಿಗೆ ಕುಡಿಯುವ ನೀರು ಸರಬರಾಜುಗಾಗಿ 96 ಕೋಟಿ ಖರ್ಚು ಮಾಡಿದ ಯೋಜನೆಯಲ್ಲಿ ದಿನಕ್ಕೆ ಒಂದು ಗಂಟೆ ನೀರು ಬರುವುದು ಬಹಳ ಕಷ್ಟದಲ್ಲಿ.ಇಂತಹ ಯೋಜನೆ ನಮಗೆ ಬೇಕಾ, ರಸ್ತೆಯ ಮೇಲೆ ನೀರಿನ ಪೈಪ್ ಗಳು ಕಂಡು ಬರುತ್ತಿದ್ದು, ಈ ಯೋಜನೆಗೆ ಕೋಟ್ಯಾಂತರ ವ್ಯಯವಾಗಿದೆ ಎಂದು ಹೇಳಲು ನಾಚಿಕೆ ಅಗುತ್ತೆ ಎಂದು ಹಿರಿಯ ಸದಸ್ಯ ಎ.ಗೋವಿಂದ ಪ್ರಭು ಹೇಳಿದರು.
ಶಾಸಕರು ನಿಮಗೆ 40 ಕೋಟಿಯ ಅಮೃತ ಕೊಟ್ಟರು, ನೀವು ಸದಸ್ಯರುಗಳಿಗೆ ವಿಷ ಕೊಡುತ್ತಿದ್ದೀರಿ ಎಂದು ಅಮೃತಯೋಜನೆಯ ಕೆಲಸದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಬಿಸಿರೋಡಿನ ಸರ್ಕಲ್ ನಲ್ಲಿ ಒಂದು ತಿಂಗಳ ಕಾಲ ನೀರಿನ ಪೈಪ್ ಒಡೆದು ಹಾಕಿರುವ ಬಗ್ಗೆ ನಿಮಗೆ ತಿಳಿಸಿದಾಗ ರಾಷ್ಟ್ರೀಯ ಹೆದ್ದಾರಿಯವರ ಕಾಮಗಾರಿ ಎಂಬ ಉತ್ತರ ನೀಡಿದ್ದು, ಅ ಬಳಿಕ ನಾನು ಪೈಪ್ ಲೈನ್ ಸರಿ ಮಾಡಿಸಿದ್ದೇನೆ ಎಂದು ತಿಳಿಸಿದರು. ಬಂಟ್ವಾಳ ಪೇಟೆ ಸುತ್ತ ಒಂದು ಸಾವಿರ ಕಡೆಗಳಲ್ಲಿ ನೀರಿನ ಪೈಪ್ ತುಂಡಾಗಿ ನೇತ್ರಾವತಿ ನದಿ ನೀರು ಪೇಟೆಯ ರಸ್ತೆಯಲ್ಲಿ ಹೋಗುತ್ತಿದೆ, ನಿಮ್ಮ ಗುತ್ತಿಗೆದಾರನು ಎಲ್ಲಿದ್ದಾನೆ ಕರೆಸಿ ಎಂದು ಒತ್ತಾಯ ಮಾಡಿದರು.
ಇಲಾಖೆಯ ವತಿಯಿಂದ ಗುತ್ತಿಗೆ ವಹಿಸಿಕೊಂಡ ಗುತ್ತಿಗೆದಾರನ ಕೆಲಸಗಾರನೋರ್ವ ಪುರಸಭಾ ಕಚೇರಿಯೊಳಗೆ ನಾನು ಮಾತನಾಡುತ್ತಿರುವ ವಿಡಿಯೋ ಆಡಿಯೋ ರೆಕಾರ್ಡಿಂಗ್ ಮಾಡಿರುವ ಬಗ್ಗೆ ನಿಮಗೆ ದೂರು ನೀಡಿದಾಗ ಯಾವುದೇ ಸ್ಪಂದನೆ ನೀಡಿದರುವ ಅಧಿಕಾರಿಯನ್ನು ಗೋವಿಂದ ಪ್ರಭು ತರಾಟೆಗೆ ತೆಗೆದುಕೊಂಡಾಗ ಪುರಸಭೆಯ ಎಲ್ಲಾ ಸದಸ್ಯರು ಧ್ವನಿಗೂಡಿಸಿದರು.
ಗುತ್ತಿಗೆದಾರ ಮಾಡಿದ ತಪ್ಪಿನ ವಿಚಾರದಲ್ಲಿ ಸೀನಿಯರ್ ಮೆಂಬರ್ ಗೋವಿಂದ ಪ್ರಭು ದೂರು ನೀಡಿದ್ದಕ್ಕೆ ಯಾಕೆ ರೆಸ್ಪಾನ್ಸ್ ಮಾಡಿಲ್ಲ ,ಇಷ್ಟು ಸಮಯ ಯಾಕೆ ತೆಗೊಂಡಿದ್ದು, ಎಂದು ಕಾಂಗ್ರೆಸ್ ಸದಸ್ಯ ಲುಕ್ಮಾನ್ ಅಧಿಕಾರಿಗಳನ್ನು ಪ್ರಶ್ನಿಸಿದ ಅವರು ,ಸ್ಪಷ್ಟವಾದ ಉತ್ತರ ಕೊಡಿ ಎಂದು ಒತ್ತಾಯ ಮಾಡಿದಲ್ಲದೆ, ಕೌನ್ಸಿಲ್ ನಲ್ಲಿ ತಪ್ಪು ಯಾಚಿಸುವವರೆಗೆ ಪಟ್ಟು ಬಿಡದೆ ಪ್ರಶ್ನೆಯ ಮೇಲೆ ಪ್ರಶ್ನೆಗಳ ಸುರಿಮಳೆಗೈದರು.
ಪುರಸಭೆಯ ಇಂಜಿನಿಯರ್ ಡಿಮೊನಿಕ್ ಡಿಮೆಲ್ಲೋ ಅವರು ಶೋಭಾಲಕ್ಮಿ ಅವರಿಗೆ ಕೆಟ್ಟ ಶಬ್ದಗಳಿಂದ ಬೈದಿರುವ ವಿಚಾರ ಸಭೆಯಲ್ಲಿ ಚರ್ಚೆಯಾಯಿತು.
ರಾತ್ರಿ 10 ಗಂಟೆ ಹೊತ್ತಿನಲ್ಲಿ ಅವರಿಗೆ ಶೋಭಾಲಕ್ಮಿ ನೆನಪಾಗಬೇಕಾ? ಓರ್ವ ಮಹಿಳಾ ಇಂಜಿನಿಯರ್ ನನಗೆ ಅವ್ಯಾಚ್ಚವಾದ ಶಬ್ದಗಳಿಂದ ಬೈದಿರುವ ಬಗ್ಗೆ ಬೇಸರವಾಗಿದೆ ಎಂದು ಹೇಳಿದ ಅವರು ಕೆಲ ಹೊತ್ತು ಬಾವುಕರಾಗಿ ಸಭೆಯಲ್ಲಿ ಮಾತನಾಡಿದರು. ಈ ಬಗ್ಗೆ ನಾನು ಹಕ್ಕಿನ ಪ್ರಕಾರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ಆದರೆ ಒಬ್ಬ ಮಹಿಳೆಗೆ ಏನು ಬೇಕಾದರೂ ಮಾತನಾಡಬಹುದಾ? ನ್ಯಾಯನಾ ? ಸರಿಯಾ ಎಂದು ಶೋಭಲಕ್ಮಿ ಸದಸ್ಯರಗಳಲ್ಲಿ ಪ್ರಶ್ನಿಸಿದರು. ಈ ಬಗ್ಗೆ ಜವಬ್ದಾರಿ ಸ್ಥಾನದಲ್ಲಿರುವ ನೀವುಗಳು ಯಾರೋಬ್ಬರು ಮಾತನಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ದಿನ ಸಭೆ ಕರೆದಿರುವುದು ಸಮಸ್ಯೆ ಬಗೆಹರಿಸುವ ಸಲುವಾಗಿ, ಆದರೆ ನೀವು ಸಮಸ್ಯೆಗೆ ಕಾರಣ ಮತ್ತು ಪರಿಹಾರದ ಬಗ್ಗೆ ಮಾತನಾಡಲು ಅವಕಾಶ ನೀಡದಿದ್ದರೆ ಏನು ಪ್ರಯೋಜನ ಎಂದು ಶೋಭಾಲಕ್ಮಿ ತಿಳಿಸಿದರು.
ನಿಮ್ಮ ಸಮಸ್ಯೆಗಳ ಬಗ್ಗೆ ಲಿಖಿತವಾಗಿ ನೀಡಿ, ಬಹುತೇಕ ಎಲ್ಲಾ ಸಮಸ್ಯೆ ಗಳಿಗೆ ನಿಯಮಾನುಸಾರವಾಗಿ ಪರಿಹಾರಕ್ಕೆ ಕ್ರಮಕೈಗೊಳ್ಳುತ್ತೇನೆ ಎಂದು ಅವರು ತಿಳಿಸಿದರು.
ಸದಸ್ಯರಾದ ಹರಿಪ್ರಸಾದ್, ಝೀನತ್,ಮೀನಾಕ್ಷಿ ಗೌಡ,ಗಾಯತ್ರಿ ಅವರು ಚರ್ಚೆಯಲ್ಲಿ ಭಾಗವಹಿಸಿದರು.
ಉಪಾಧ್ಯಕ್ಷ ಮೋನಿಶ್ ಆಲಿ, ಪುರಸಭಾ ಮುಖ್ಯಾಧಿಕಾರಿ ಲೀನಾಬ್ರಿಟ್ಟೊ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…